Breaking News
recent

ಸಿಯಾಚಿನ್‍ನಲ್ಲಿ ಪಾರಾಗಿದ್ದ ವೀರ ಕನ್ನಡಿಗ ಈಗ ನೆನಪು ಮಾತ್ರ

ನವದೆಹಲಿ: ಸಿಯಾಚಿನ್‍ನ ಹಿಮಗೆಡ್ಡೆಗೆ ಸಿಲುಕಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೀರ ಕನ್ನಡಿಗ ಧಾರವಾಡದ ಹನುಮಂತಪ್ಪ ಕೊಪ್ಪದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Hanumanthappa Koppad

ಲೋ ಬಿಪಿಯಿಂದ ಬಳಲುತ್ತಿದ್ದ ಹನುಮಂತಪ್ಪ ದೇಹಸ್ಥಿತಿ ಚಿಂತಾಜನಕವಾಗಿತ್ತು. ಕೋಮಾದಲ್ಲಿದ್ದ ಹನುಮಂತಪ್ಪ ಕೊಪ್ಪದ್ ಅವರನ್ನು ಬದುಕಿಸಲು ದೆಹಲಿಯ ಆರ್‍ಆರ್ ಆಸ್ಪತ್ರೆಯ ವೈದ್ಯರು ಮಂಗಳವಾರದಿಂದ ಶತ ಪ್ರಯತ್ನ ನಡೆಸಿದರೂ ಇಂದು ಬೆಳಗ್ಗೆ 11.45ಕ್ಕೆ ವಿಧಿವಶರಾದರು. Miracle in Siachen
ಹನುಮಂತಪ್ಪಗೆ ಏನಾಗಿತ್ತು?
ಲೋ ಬಿಪಿಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರ ಲಿವರ್, ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಮುಂದಿನ 24 ರಿಂದ 48 ಗಂಟೆ ತುಂಬಾ ಕ್ಲಿಷ್ಟಕರವಾಗಿರಲಿದೆ ಎಂದು ಮಂಗಳವಾರ ಆರ್ ಆರ್ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ತಿಳಿಸಿದ್ದರು.
ಫೆ.3ರಂದು ಮಂಜುಗಡ್ಡೆಯ ಕೆಳಗಡೆ ಬಿದ್ದರೂ ಅದೃಷ್ಟವಶಾತ್ ಕೊಪ್ಪದ್ ಅವರ ದೇಹದ ಎಲುಬುಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ನ್ಯೂರಾಲಜಿ, ನೆಫ್ರಾಲಜಿಸ್ಟ್, ಶಸ್ತ್ರಚಿಕಿತ್ಸಕರು ವೆಂಟಿಲೇಟರ್ ಮೂಲಕ ಹನುಮಂತಪ್ಪಗೆ ಚಿಕಿತ್ಸೆ ನೀಡುತ್ತಿದ್ದರು.
ಫೆ.3ರಂದು ಸಿಯಾಚಿನ್‍ನಲ್ಲಿ 10 ಮಂದಿ ಯೋಧರ ತಂಡ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ದೊಡ್ಡ ಹಿಮದ ಬಂಡೆಯೊಂದು ಉರುಳಿ ಬಿದ್ದಿತ್ತು. ಪತ್ತೆಯಾಗದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಇವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ ಮೃತ ದೇಹಕ್ಕಾಗಿ ಶೋಧಕಾರ್ಯವನ್ನು ಸೈನಿಕರು ಮುಂದುವರೆಸುತ್ತಲೇ ಇದ್ದರು. ಸೋಮವಾರ ಮಧ್ಯರಾತ್ರಿ ಶೋಧ ಕಾರ್ಯ ನಡೆಸುತ್ತಿರುವಾಗ ಸೇನೆಯ ಕೊಪ್ಪದ್ ಇರುವ ಜಾಗ ಪತ್ತೆಯಾಗಿತ್ತು. ನಾಯಿ ಹನುಮಂತಪ್ಪ ಕೊಪ್ಪದ್ ಅವರನ್ನು ಗುರುತಿಸಿದ ಕಾರಣ ಸೇನೆಯ ಯೋಧರು ಕಾರ್ಯಾಚರಣೆ ನಡೆಸಿ ಅವರನ್ನು ಮೇಲಕ್ಕೆ ಎತ್ತಿದ್ದರು. ಸಿಯಾಚಿನ್‍ನಲ್ಲಿರುವ ಸೇನೆಯ ವೈದ್ಯರು ಪರೀಕ್ಷಿಸಿದ ಬಳಿಕ ಅವರನ್ನು ದೆಹಲಿಯ ಆರ್‍ಆರ್ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ದಾಖಲಿಸಲಾಗಿತ್ತು. ಪ್ರಧಾನಿ ಮೋದಿಯವರು ಆಸ್ಪತ್ರೆಗೆ ಭೇಟಿ ನೀಡಿ ವೀರಯೋಧನ ಆರೋಗ್ಯವನ್ನು ವಿಚಾರಿಸಿದ್ದರು. ಮಂಗಳವಾರ ರಾತ್ರಿ ಹನುಮಂತಪ್ಪನವರ ಕುಟುಂಬಸ್ಥರು ದೆಹಲಿಗೆ ತಲುಪಿದ್ದರು.
ಆರು ದಿನಗಳ ಕಾಲ 25 ಅಡಿ ಆಳದ ಮಂಜುಗೆಡ್ಡೆಯಲ್ಲಿ ಬದುಕಿದ್ದ ವೀರ ಯೋಧ ವೈದ್ಯರ ಚಿಕಿತ್ಸೆಗೆ ಸ್ಪಂದಿಸಲಿ ಎಂದು ದೇಶದೆಲ್ಲೆಡೆ ಜೋರಾಗಿ ಪ್ರಾರ್ಥನೆ ನಡೆಯುತಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.