Breaking News
recent

ಬಹುಭಾಷಾ ನಟಿ ಪ್ರಣೀತಾ ತೆರಳುತ್ತಿದ್ದ ಕಾರು ಪಲ್ಟಿ

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಪ್ರಣೀತಾ ಸುಭಾಶ್ ಅವರಿದ್ದ ಕಾರು ಭಾನುವಾರ ತೆಲಂಗಾಣ ರಾಜ್ಯದ ಖಮ್ಮಂ ಬಳಿ ಅಪಘಾತಕ್ಕೀಡಾಗಿದೆ. ಆದರೆ, ಪ್ರಣೀತಾ ಹಾಗೂ ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಣೀತಾ ಅವರಿದ್ದ ಕಾರು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ಉರುಳಿದೆ. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯಗಳಾದಂತೆ ವಾಹನ ಚಾಲಕ ಕಾರನ್ನು ನಿಯಂತ್ರಿಸಿದ್ದಾರೆ. ಖಮ್ಮಂನಿಂದ ಹೈದರಾಬಾದಿಗೆ ಬರುವಾಗ ನಲ್ಗೊಂಡ ಜಿಲ್ಲೆಯ ಗ್ರಾಮವೊಂದರ ಬಳಿ ಕಾರು ಪಲ್ಟಿಯಾಗಿದೆ.

ಘಟನೆ ಬಗ್ಗೆ ತಕ್ಷಣವೇ ಟ್ವೀಟ್ ಮಾಡಿದ ಪ್ರಣೀತಾ, ನನಗೇನು ಆಗಿಲ್ಲ. ತರಚು ಗಾಯಗಳಾಗಿವೆ. 'ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದೇವೆ. ತ್ವರಿತವಾಗಿ ಆಂಬುಲೆನ್ಸ್ ಕರೆಸಿದವರಿಗೆ ಧನ್ಯವಾದಗಳು. ನನ್ನ ಸಿಬ್ಬಂದಿಗಳಿಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ' ಎಂದಿದ್ದಾರೆ.

ಘಟನಾ ಸ್ಥಳದ ಚಿತ್ರಗಳನ್ನು ಪ್ರಣೀತಾ ಅವರೇ ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ಬದಲಿ ವಾಹನ ವ್ಯವಸ್ಥೆ ಪಡೆದು ಪ್ರಯಾಣವನ್ನು ಮುಂದುವರೆಸಿದ್ದಾರೆ. ಗಾಯಗೊಂಡಿರುವ ಉಳಿದ ಸಿಬ್ಬಂದಿಗಳಿಗೆ ಸೂರ್ಯಪೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ನೆರವಿಗೆ ಧಾವಿಸಿದ ಸ್ಥಳೀಯ ಗ್ರಾಮಸ್ಥರು ಆಂಬುಲೆನ್ಸ್ ಕರೆಸಿ ಎಲ್ಲರಿಗೂ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ.

1. ಅಪಘಾತಕ್ಕೀಡಾದ ಕಾರಿನ ಚಿತ್ರ
ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಪ್ರಣೀತಾ ಸುಭಾಶ್ ಅವರಿದ್ದ ಕಾರು ಭಾನುವಾರ ತೆಲಂಗಾಣ ರಾಜ್ಯದ ಖಮ್ಮಂ ಬಳಿ ಅಪಘಾತಕ್ಕೀಡಾಯಿತು. ಘಟನಾ ಸ್ಥಳದ ಚಿತ್ರಗಳನ್ನು ಟ್ವೀಟ್ ಮಾಡಿದ ಪ್ರಣೀತಾ

2. ಘಟನೆ ನಡೆದಿದ್ದು ಎಲ್ಲಿ?
ನಟಿ ಪ್ರಣೀತಾ, ಪ್ರಣೀತಾ ಅವರ ತಾಯಿ ಹಾಗೂ ನಾಲ್ವರು ಖಮ್ಮಂನಿಂದ ಹೈದರಾಬಾದಿಗೆ ತೆರಳುವಾಗ ಈ ಘಟನೆ ನಡೆದಿದೆ. ಸೂರ್ಯಪೇಟ್ ಹಾಗು ಖಮ್ಮಂ ರಸ್ತೆಯಲ್ಲಿರುವ ಮೋತೆ ಗ್ರಾಮದಲ್ಲಿ ಕಾರು ಪಲ್ಟಿಯಾಗಿದೆ.

3. ಕಾರು ಪಲ್ಟಿಯಾಗಿದ್ದು ಏಕೆ? 
ಪ್ರಣೀತಾ ಅವರಿದ್ದ ಇನ್ನೋವಾ ಕಾರಿನ ಎದುರಿಗೆ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ಹಿಂದೆ ಇದೇ ಇದೇ ಪ್ರದೇಶದಲ್ಲಿ ಜ್ಯೂ ಎನ್ಟಿಆರ್ ಗೆ ಅಪಘಾತವಾಗಿತ್ತು.

4. ಪ್ರಣೀತಾ ಅವರ ಸಿಬ್ಬಂದಿಗೆ ಗಾಯಗಳಾಗಿವೆ 
ಪ್ರಣೀತಾ ಹಾಗೂ ಅವರ ತಾಯಿಗೆ ತರಚು ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಹೈದರಾಬಾದಿಗೆ ತೆರಳುತ್ತಿದ್ದಾರೆ. ಗಾಯಗೊಂಡಿರುವ ಉಳಿದ ಸಿಬ್ಬಂದಿಗಳಿಗೆ ಸೂರ್ಯಪೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


Fresh Kannada

Fresh Kannada

No comments:

Post a Comment

Google+ Followers

Powered by Blogger.