Breaking News
recent

ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪರಭಾಷಾ ನಟಿ ದೀಕ್ಷಾ ಸೇಠ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಜಗ್ಗುದಾದ' ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮುಂದಿನ 6 ದಿನಗಳವರೆಗೆ ಗೋವಾದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
rachita ram and darshan

ಈಗಾಗಲೇ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ಮಾತಿನ ಭಾಗ ಬಹುತೇಕ ಸಂಪೂರ್ಣಗೊಂಡಿದ್ದು ಹಾಡುಗಳ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಗೋವಾದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಸ್ಪೇನ್ ನಲ್ಲಿ ಉಳಿದ ಹಾಡುಗಳ ಚಿತ್ರೀಕರಣ ನಡೆಯಲಿದೆ.

ಅಂದಹಾಗೆ 'ಬುಲ್ ಬುಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅವರು ದರ್ಶನ್ ಅವರ ಜೊತೆ ಮತ್ತೊಮ್ಮೆ ಮಿಂಚಲಿದ್ದು, 'ಜಗ್ಗುದಾದ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಅನ್ನೋದು ಈ ಚಿತ್ರದ ಮತ್ತೊಂದು ವಿಶೇಷತೆ.[ಚೇತರಿಸಿಕೊಂಡ ದರ್ಶನ್, ಮತ್ತೆ 'ಜಗ್ಗುದಾದ' ಅಡ್ಡಾದಲ್ಲಿ ಹಾಜರ್.!]

ನಟಿ ರಚಿತಾ ರಾಮ್ ಅವರನ್ನು 'ಬುಲ್ ಬುಲ್' ಚಿತ್ರದ ಲಕ್ಕಿ ನಾಯಕಿ ಎಂದೇ ಪರಿಗಣಿಸಿದ್ದರು. ತದನಂತರ ದರ್ಶನ್ ಅವರ ಜೊತೆ 'ಅಂಬರೀಶ' ಚಿತ್ರದಲ್ಲೂ ಮಿಂಚಿದ್ದರು. ಆದ್ದರಿಂದ ಇದೀಗ ಮತ್ತೆ 'ಜಗ್ಗುದಾದ' ಸಿನಿಮಾದಲ್ಲಿ ದರ್ಶನ್ ಅವರ ಮತ್ತೊಮ್ಮೆ ಅತಿಥಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇವರ ಜೊತೆ 'ಪೊರ್ಕಿ' ಖ್ಯಾತಿಯ ನಟಿ ಪ್ರಣಿತಾ ಅವರು ಕೂಡ ಅತಿಥಿ ಪಾತ್ರ ವಹಿಸಿದ್ದಾರೆ.[ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ]

ಇನ್ನುಳಿದಂತೆ ಚಿತ್ರದಲ್ಲಿ ಸೃಜನ್ ಲೋಕೇಶ್, ಗಾಯತ್ರಿ ಅಯ್ಯರ್, ವಿಶಾಲ್ ಹೆಗ್ಡೆ, ವಿಷ್ಣು ಮತ್ತು ಯುವ ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚುತ್ತಿದ್ದಾರೆ.

ಇನ್ನು ದರ್ಶನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಯೋಜನೆಯನ್ನು ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಹಾಕಿಕೊಂಡಿದ್ದು, ಮಾರ್ಚ್ 10 ರೊಳಗೆ ಚಿತ್ರೀಕರಣ ಮುಗಿಸಲು ನಿರ್ಧರಿಸಿದ್ದಾರೆ.


Fresh Kannada

Fresh Kannada

No comments:

Post a Comment

Google+ Followers

Powered by Blogger.