Breaking News
recent

ಹೆಲ್ಮೆಟ್‌ ಮಹಿಮೆ ಅದಲು ಬದಲಾದ ಗಂಡ-ಹೆಂಡಿರು !

ಹಾವೇರಿ : ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ  ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಕಾನೂನು ಬಂದ ಮೇಲೆ ಅದೇನು ಬದಲಾವಣೆ ಆಗಿದೆಯೋ ,ಅವಘಡಗಳು ಕಡಿಮೆಯಾಗಿದೆಯೋ ಗೊತ್ತಿಲ್ಲ. ಆದರೆ ರಾಣೆಬೆನ್ನೂರಿನಲ್ಲಿ  ಗಂಡ -ಹೆಂಡಿರೇ  ಬದಲಾದ ನಗೆ ಪಾಟಲಿನ ವಿದ್ಯಮಾನ ನಡೆದಿದೆ.
helmet prank gone wrong by bike

ಪೆಟ್ರೋಲ್‌ ಬಂಕ್‌ ಒಂದಕ್ಕೆ ಪೆಟ್ರೋಲ್‌ ತುಂಬಿಸಿಕೊಳ್ಳಲೆಂದು ಮೋಟಾರ್‌ ಬೈಕ್‌ಗಳಲ್ಲಿ 2 ಜೋಡಿ ದಂಪತಿಗಳು ಆಗಮಿಸಿದ್ದರು. ಈ ವೇಳೆ ಬೈಕ್‌ ಸಹಸವಾರೆಯರಾಗಿದ್ದ ಇಬ್ಬರೂ ಹೆಲ್ಮೆಟ್‌ ಧರಿಸಿದ್ದರು.

ಒಬ್ಟಾಕೆ ಹೆಲ್ಮೆಟ್‌ ಧರಿಸಿಕೊಂಡೇ  ಮೊಬೈಲ್‌ನಲ್ಲಿ ಮಾತನಾಡುತ್ತಾ ಸ್ವಲ್ಪ ದೂರ ಹೋಗಿದ್ದಾಳೆ. ಇನ್ನೊಬ್ಬಳೂ ಹೀಗೆ ಬೈಕ್‌ ಇಳಿದು ಮುಂದಕ್ಕೆ ಹೋಗಿದ್ದಾಳೆ.

ಪೆಟ್ರೋಲ್‌ ತುಂಬಿಸಿ ಬಂದ ಪತಿರಾಯನೊಬ್ಬ ಸೀದಾ ಬೈಕ್‌ ತಂದು ನಿಲ್ಲಿಸಿ ಒಬ್ಟಾಕೆಯನ್ನು ಹತ್ತಿಸಿಕೊಂಡು ಹೊರಟೇ ಬಿಟ್ಟಿದ್ದಾನೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ದಾರಿ ಬದಲಾಗಿದೆ...ಹಿಂಬದಿಯಿದ್ದವಳು ಅನುಮಾನಗೊಂಡು ಯಾವ್‌ ಕಡೆಗ್‌ ಹೊಂಟ್ರೀ... ಎಂದಿದ್ದಾಳೆ.

ಹೊಸ ಧ್ವನಿ ಕೇಳಿ  ಅನುಮಾನಗೊಂಡು ಬೈಕ್‌ ನಿಲ್ಲಿಸಿದ ಪತಿರಾಯ  ಹೆಲ್ಮೆಟ್‌ ತೆಗೆದು ನೋಡಿದಾಗ ಇವಳು ನನ್ನವಳಲ್ಲ ಎಂದು ತಿಳಿದಿದೆ. ಕೂಡಲೇ ಬೈಕ್‌ ಹತ್ತಿಕೊಂಡು ಬಂಕ್‌ಗೆ ವಾಪಾಸಾಗಿದ್ದಾರೆ.

ಬಂಕ್‌ನಲ್ಲಿ  ಗಂಡ ಏಕಾಏಕಿ ಬಿಟ್ಟು ಹೊದುದರಿಂದ ತೀವ್ರ ಕಳವಳಗೊಂಡು ಕಾಯುತ್ತಿದ್ದ ಹೆಂಡತಿ ,ಹೆಂಡತಿ ಒಮ್ಮೆಲೆ ನಾಪತ್ತೆಯಾದುದರಿಂದ ಆತಂಕಿತನಾಗಿದ್ದ ಪತಿರಾಯ ತೀವ್ರ ಹುಡುಕಾಟದಲ್ಲಿದ್ದರು.  ತಮ್ಮವರನ್ನು ಕಂಡ ಕೂಡಲೆ ದಂಪತಿಗಳ ನಡುವೆ ಸ್ವಲ್ಪ ವಾದವೂ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೆಲ್ಲಾ ಹೆಲ್ಮೆಟ್‌ನಿಂದಾದ ರಾದ್ದಾಂತ ಎಂದು ತಿಳಿದ ಬಳಿಕ ಅವರವರ ಅರ್ಧಾಂಗಿಯವರೊಂದಿಗೆ ಮನೆಗೆ ವಾಪಾಸಾಗಿದ್ದಾರಂತೆ...

ಇಷ್ಟೆಲ್ಲಾ ನಡೆಯಲು ಒಂದೇ ತರಹದ ಬೈಕ್‌, ಸೀರೆ ಮತ್ತು ಮುಖ್ಯವಾಗಿ ಹೆಲ್ಮೆಟ್‌ ಕಾರಣವಂತೆ..!!

Fresh Kannada

Fresh Kannada

No comments:

Post a Comment

Google+ Followers

Powered by Blogger.