Breaking News
recent

ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಅವರು ಸ್ಯಾಂಡಲ್ ವುಡ್ ನ ಕುಚಿಕು ಗೆಳೆಯರು. ಅದೇ ಬಾಕ್ಸಾಪೀಸ್ ಸುಲ್ತಾನ ದರ್ಶನ್ ಅವರಿಗಾಗಿ 'ಸುಲ್ತಾನ' ಸಿನಿಮಾ ಮಾಡೋಕೆ ಬುಲೆಟ್ ತಯಾರಾಗಿರುವ ವಿಚಾರ ಕೂಡ ನಿಮಗೆ ಗೊತ್ತೇ ಇದೆ.[ಅಣ್ಣಮ್ಮ ದೇವಸ್ಥಾನದಲ್ಲಿ ದರ್ಶನ್, ಅಭಿಮಾನಿಗಳ ನೂಕುನುಗ್ಗಲು]
dinakar thoogudeep and bullet prakash fight for dates of darshan

ಅಲ್ಲದೇ ಮೊನ್ನೆ ಮೊನ್ನೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ದರ್ಶನ್ ಅವರು ಆಗಮಿಸಿದ್ದಾಗ ಬುಲೆಟ್ ಪ್ರಕಾಶ್ ಅವರು ಬಂದಿದ್ದರು. ನಟ ದರ್ಶನ್ ಅವರು ಬುಲೆಟ್ ಅವರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.[ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?]

ಇದೀಗ ಅದೇ ಕುಚಿಕು ಗೆಳೆಯರ ಸಿನಿಮಾದ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ದರ್ಶನ್ ಅವರ ಸಹೋದರ ನಿರ್ಮಾಪಕ ದಿನಕರ್ ತೂಗುದೀಪ ಮತ್ತು ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ನಡುವೆ ಈ 52ನೇ ಸಿನಿಮಾದ ವಿಚಾರದಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ.

ದರ್ಶನ್ ಗೆ ಸಿನಿಮಾ ಮಾಡಲು ಬಿಡಲ್ಲ ಎಂದು ದಿನಕರ್ ತೂಗುದೀಪ್ ಅವರು ಎಲ್ಲೋ ಒಂದು ಸಮಾರಂಭದಲ್ಲಿ ಹೇಳಿದ್ದಾರೆ ಎಂಬ ವಿಚಾರ ಗೊತ್ತಾಗಿ ಬುಲೆಟ್ ಅವರು ವಿಚಾರಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಕುಚಿಕು ಗೆಳೆಯರ ಸಿನಿಮಾದ ವಿಚಾರದಲ್ಲಿ ನಡೆದ ಅಸಲಿ ಕಥೆಯಾದರೂ ಏನು ಎಂಬುದನ್ನು ನಾವು ಹೇಳ್ತೀವಿ, ಮುಂದೆ ಓದಿ...

1. ಬುಲೆಟ್ ಸುದ್ದಿಗೋಷ್ಠಿ
ನಿರ್ಮಾಪಕ ದಿನಕರ್ ತೂಗುದೀಪ್ ಅವರು 'ನಾನು ನನ್ನ ಸಹೋದರನ ಸಿನಿಮಾ ಮಾಡಲು ಬಿಡೋದಿಲ್ಲ, ಅದು ಹೇಗೆ ನೀನು ಮಾಡ್ತೀಯ ಅಂತ ನಾನು ನೋಡ್ತೀನಿ. ಅಂತ ದಿನಕರ್ ಅವರು ನನಗೆ ಅವಾಜ್ ಹಾಕಿದ್ದಾರೆ ಎಂದು ಬುಲೆಟ್ ಆರೋಪ ಮಾಡಿದ್ದಾರೆ.

2. ಇದೇ ಮುಳ್ಳಾಗುತ್ತೆ ಅಂತ ಗೊತ್ತಿರಲಿಲ್ಲ 
'ನನ್ನ ಮಾಧ್ಯಮದ ಒಬ್ಬ ಒಳ್ಳೆ ಗೆಳೆಯನಿಂದ ನನ್ನ ದರ್ಶನ್ ಅವರ ಸಿನಿಮಾದ ಬಗ್ಗೆ ಪ್ರಚಾರ ಆಯ್ತು. ಅದನ್ನು ನೋಡಿ ಜನವರಿ 6 ಕ್ಕೆ ದಿನಕರ್ ಪೋನ್ ಮಾಡಿದ್ದ ನೀನು ಪಬ್ಲಿಸಿಟಿ ಯಾಕೆ ಮಾಡ್ತಿದ್ದೀಯಾ?, ನಾನು ಇಲ್ಲ ದಿನಕರ್ ಅಂದಿದ್ದಕ್ಕೆ, ಮತ್ತೆ ನೀನು ಹೇಳದೆ ಅದು ಹೇಗೆ ಪಬ್ಲಿಸಿಟಿ ಆಯ್ತು ಅಂದ. ಅದಕ್ಕೆ ನಾನು ಅವನಿಗೆ ಸಮಜಾಯಿಷಿ ನೀಡಿದ್ದೆ. ಆಮೇಲೆ ಆ ವಿಷಯ ಅಲ್ಲಿಗೆ ನಿಂತು ಹೋಗಿತ್ತು.

3. ದರ್ಶನ್ ಡೇಟ್ ಕೊಟ್ಟ ಮೇಲೆ ಸಿನಿಮಾ 
ನಾನು ಮಾಧ್ಯಮ ಮಿತ್ರರಿಗೆ ಹೇಳಿದ್ದೆ, ನೀವು ದಯವಿಟ್ಟು ಜಾಸ್ತಿ ಪಬ್ಲಿಸಿಟಿ ಮಾಡ್ಬೇಡಿ, ದರ್ಶನ್ ಅವರು ಡೇಟ್ ಕೊಟ್ಟ ಮೇಲೇನೇ ಈ ಸಿನಿಮಾ. ಅಲ್ಲಿಯವರೆಗೂ ನಾನು ಏನು ಹೇಳಲ್ಲಾ, ಅಂದಿದ್ದೆ. ಇದೀಗ ನಾನು ದರ್ಶನ್ ಅವರಿಗೆ ಸಿನಿಮಾ ಮಾಡ್ತೀನಿ ಅಂತ ಪಬ್ಲಿಸಿಟಿ ಮಾಡಿದ್ದೇ ನನಗೆ ದೊಡ್ಡ ಮುಳ್ಳಾಯ್ತು.
4. ನನಗೂ ಹೆಣ್ಣು ಮಕ್ಕಳಿದ್ದಾರೆ 
ನನಗೂ ಹೆಣ್ಣು ಮಕ್ಕಳಿದ್ದಾರೆ, ನನ್ನ ಹೆಂಡತಿ ಇದ್ದಾಳೆ, ಮನೆಗೆ ನಾನೊಬ್ನೆ ಗಂಡು ದಿಕ್ಕು. ನಾನು ಮನೇಲಿ ಇಲ್ದೇ ಇದ್ದ ಸಂದರ್ಭದಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ. ಎಂದು ಬುಲೆಟ್ ಕಳವಳ ವ್ಯಕ್ತಪಡಿಸಿದ್ದಾರೆ.

5. ಮಂಜರಿ ಸ್ಟುಡಿಯೋಗೆ ಕರೆಸಿಕೊಂಡ ದಿನಕರ್ 
ರಾತ್ರಿ 11 ಘಂಟೆಗೆ ನಾನು ಪೋನ್ ಮಾಡಿ ಮಾತಾಡಿದೆ, ಅದಕ್ಕೆ ಎಲ್ಲಿದ್ದಿಯಾ? ಅಂತ ದಿನಕರ್ ತೂಗುದೀಪ ಕೇಳಿದ್ರು. ನಾನು ಮನೇಲಿದ್ದೀನಿ ಅಂದಿದ್ದಕ್ಕೆ, ಸರಿ ಮಾತಾಡ್ಬೇಕು ಅಂದ್ರು. ಅದಿಕ್ಕೆ ನಾನು ಮನೆಗೆ ಬೇಡ ಅಂದಿದ್ದಕ್ಕೆ ಬೆಂಗಳೂರಿನ ಹೆಬ್ಬಾಳದ ಕೆಂಪಾಪುರ ಬಳಿ ಇರುವ ಮಂಜರಿ ಸ್ಟುಡಿಯೋಗೆ 'ಮಾತಾಡೋಣ ಬಾ ಅಂತ' ಕರೆಸಿಕೊಂಡರು. ನಾನು ಅಲ್ಲಿಗೆ ನನ್ನ ಮಗಳ ಜೊತೆ ಹೋದೆ, ಅವರು ಅವರ ಸ್ನೇಹಿತ ಪಿಸ್ತಾ ಸೀನಾ ಮತ್ತು ಮಲ್ಲಿಕಾರ್ಜುನ ಅವರ ಜೊತೆ ಬಂದಿದ್ದರು.

6. ಹಲ್ಲೆ ಮಾಡಿದ ಪಿಸ್ತಾ ಸೀನಾ
ಮಾತು-ಕತೆ ಆಗುತ್ತಿದ್ದ ಸಂದರ್ಭದಲ್ಲಿ ದಿನಕರ್ ಅವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಮಯದಲ್ಲಿ ಪಿಸ್ತಾ ಸೀನಾ ನನ್ನನ್ನು ತಳ್ಳಿದ ಆಗ ನಾನು ತಳ್ಳಿದೆ. ನಾನು ಬೇಡ ಬೇಡ ಅಂದ್ರೂ ಅವರು 'ಯಾವನೋ ಮಗಳನ್ನು ಕರೆದುಕೊಂಡು ಬಂದಿದ್ದಾನೆ 'ಗಾಂಡು ನನ್ಮಗ ಅಂತ ಅಂದ. ಧಮ್ಕಿ ಹಾಕಿದ, ಅದಕ್ಕೆಲ್ಲಾ, ನನ್ನ ಮಗಳು ಸಾಕ್ಷಿ ಇದ್ದಾಳೆ. ಎಂದು ಬುಲೆಟ್ ಪ್ರಕಾಶ್ ಮಾಧ್ಯಮದ ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

7. ತಳ್ಳಾಟ ನೂಕಾಟ ನಡೆಯಿತು 
ರಾತ್ರಿ ದಿನಕರ್ ಅವರ ಜೊತೆ ಮಲ್ಲಿಕಾರ್ಜುನ ಮತ್ತು ಪಿಸ್ತಾ ಸೀನಾ ಅವರು ಬಂದಿದ್ದರು. ನಾನು ನನ್ನ ಡ್ರೈವರ್ ಇಲ್ಲಾ ಅಂತ ನನ್ನ ಮಗಳನ್ನು ಕರೆದುಕೊಂಡು ಟೂ ವೀಲರ್ ನಲ್ಲಿ ಹೋದೆ. ಪಿಸ್ತಾ ಸೀನಾ ಕೂಡ ನನ್ನ ಗೆಳೆಯ, ಮಲ್ಲಿಕಾರ್ಜುನ ಏನೂ ಮಾಡಿಲ್ಲ ಅವನು ಇಬ್ಬರಿಗೂ ಸಮಾಧಾನ ಮಾಡಿದ. ಆದರೆ ಪಿಸ್ತಾ ಸೀನಾ ಏನೋ ಎಮೋಷನ್ ನಲ್ಲಿ ನನ್ನ ಮೇಲೆ ಹಲ್ಲೆ ಮಾಡೋಕೆ ಪ್ರಯತ್ನ ಪಟ್ಟ.

8. ಜೀವ ಬೆದರಿಕೆ ಕರೆಗಳು ಬರುತ್ತಿವೆ
ನಿನ್ನೆ ರಾತ್ರಿ ಈ ಘಟನೆ ನಡೆದಾಗಿನಿಂದ ನನಗೆ ತುಂಬಾ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅದಕ್ಕೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ದಿನಕರ್ ಜೀವ ಬೆದರಿಕೆ ಹಾಕಿದ್ದಕ್ಕೆ ನನ್ನ ಮಗಳೇ ಸಾಕ್ಷಿ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.

9. 'ಮಾಸ್ತಿಗುಡಿ' ಮೂಹೂರ್ತದಲ್ಲಿ ನಡೆದ ಘಟನೆ
ದುನಿಯಾ ವಿಜಯ್ 'ಮಾಸ್ತಿ ಗುಡಿ' ಸಿನಿಮಾ ಮೂಹೂರ್ತ ಸಮಾರಂಭಕ್ಕೆ ನಾನು ಹೋಗಿದ್ದೆ. ಅಲ್ಲಿ ಪೆಂಡಾಲ್ ಕೆಳಗೆ ನಾನು ಕೂತಿದ್ದೆ, ದಿನಕರ್ ಬಂದ ಹಾಯ್ ಅಂದ, ನಾನು ಹಾಯ್ ಅಂದೆ, ಆಮೇಲೆ ನನಗೆ ಏನೋ ಬೇರೆ ಕೆಲ್ಸ ಇತ್ತು. ಅದಕ್ಕೆ ನಾನು ಅಲ್ಲಿಂದ ಎದ್ದು ಹೋದೆ.

10. ಬುಲೆಟ್ ಬಗ್ಗೆ ಮಾತಾಡಿಕೊಂಡ ದಿನಕರ್
ನಾನು ಅಲ್ಲಿಂದ ಎದ್ದು ಹೋದ ಮೇಲೆ ದಿನಕರ್ ಅದೇ ಪೆಂಡಾಲ್ ಕೆಳಗೆ ಕೂತು ಯಾರ್ ಜೊತೆನೋ ಹೇಳ್ತಾ ಇದ್ರಂತೆ. ಅದು ಹೇಗೆ ಅವನು ಡೇಟ್ ತಗೋತಾನೆ ಅದು ಹೇಗೆ ಸಿನಿಮಾ ಮಾಡ್ತಾನೆ, ನಾನು ನೋಡ್ತಿನಿ, ನಾನು ಮಾಡೋಕೆ ಬಿಡೋಲ್ಲ. ಅಂತ ಹೇಳಿದ್ರಂತೆ. ಅದಕ್ಕೆ ನಾನು ನಿನ್ನೆ ಕೇಳೋಣ ಅಂತ ಫೋನ್ ಮಾಡಿದ್ದು.

11. ಅಣ್ಣ-ತಮ್ಮ ಮಧ್ಯೆ ಹುಳಿ ಹಿಂಡೋಕೆ ನಾನ್ಯಾರು
ಎದೆತಟ್ಟಿ ಧೈರ್ಯವಾಗಿ ಹೇಳ್ತೀನಿ, ಯಾವುದೇ ಕಾರಣಕ್ಕೆ ನಾನು ಸುಳ್ಳು ಹೇಳ್ತಾ ಇಲ್ಲಾ. ನಿಮ್ಮ ಅಣ್ಣ-ತಮ್ಮನ ಮಧ್ಯದಲ್ಲಿ ಹುಳಿ ಹಿಂಡೋಕೆ ನಾನು ಯಾರು. ನಾನು ಅಂತಹ ಕೆಲಸ ಮಾಡಲ್ಲ. ನೀವು ಚೆನ್ನಾಗಿರಿ, ನನಗೆ ಕೆಲ್ಸ ಕೊಟ್ಟಿದ್ದೀರಾ?, ಕೊಡ್ಸಿದ್ದೀರಾ, ಒಳ್ಳೆ ಫ್ರೆಂಡ್ ಶಿಪ್ ಇದು ಹೊಡಿ-ಬಡಿ-ಬಡಿ ಅನ್ನೋವಷ್ಟರ ಮಟ್ಟಿಗೆ ಇಳಿಯಿತಾ?, ಎಷ್ಟು ನನಗೆ ಬೇಸರ ಆಗಿದೆ ಅದಕ್ಕೆ ನಾನು ಸ್ಟೇಷನ್ ಮೆಟ್ಟಿಲು ಹತ್ತಿದ್ದು.

12. ಅಮೃತಹಳ್ಳಿ ಠಾಣೆಗೆ ದೂರು
ಇದೀಗ ನಟ ಬುಲೆಟ್ ಪ್ರಕಾಶ್ ಅವರು ಜೀವ ಬೆದರಿಕೆ ಹಿನ್ನಲೆಯಲ್ಲಿ ಬೆಂಗಳೂರಿನ ಬ್ಯಾಟರಾಯನಪುರದ, ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಿನಕರ್ ಮತ್ತು ಅವರ ಸ್ನೇಹಿತರು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬುಲೆಟ್ ಪ್ರಕಾಶ್ ಪೊಲೀಸ್ ಠಾಣೆಯಲ್ಲಿ ಆರೋಪ ಮಾಡಿದ್ದಾರೆ. ಇದಕ್ಕಾಗಿ ಬುಲೆಟ್ ಅವರಿಗೆ ಪೊಲೀಸರು ಕೂಡ ಒಳ್ಳೆ ರೆಸ್ಪಾನ್ಸ್ ಮಾಡಿದ್ದಾರಂತೆ.

13. ಯಾವುದೇ ಕಾರಣಕ್ಕೂ ಕ್ಷಮಿಸಲ್ಲ
ಕ್ಷಮಿಸಲ್ಲ, ಯಾವುದೇ ಕಾರಣಕ್ಕೂ ಕ್ಷಮಿಸಲ್ಲ, ದಿನಕರ್ ಟಿವಿಗೆ ಹೇಳಿದ್ದಾನೆ ನಾನು ಏನು ಮಾತಾಡಿಲ್ಲ ಸುಳ್ಳು ಹೇಳುತ್ತಿದ್ದಾನೆ ಅಂತ, ಆದರೆ ಅವನು ಮಾತಾಡಿದ್ದಕ್ಕೆ ನನ್ನ ಹತ್ತಿರ ಎಲ್ಲಾ ಫ್ರೂಫ್ ಇದೆ. ಪ್ರಾಮಾಣಿಕವಾಗಿ ಪ್ರೀತಿಯಿಂದ ಹೇಳಿದ್ದು ತಪ್ಪಾಯ್ತ, ಇಷ್ಟು ದಿನ ಮುಳ್ಳಿನ ಮೇಲೆ ನಡೆದಿದ್ದು, ನಾನು ದರ್ಶನ್ ಅವರಿಗೆ ಬೇಗ ಡೇಟ್ ಕೊಡಿ ಎಂದು ಕೇಳಿಲ್ಲಾ, ಕೊಟ್ರೆ ಒಳ್ಳೆದಿತ್ತು ಅಂತ ಹೇಳಿದ್ದೆ ಅಷ್ಟೆ.

14. ಕೇಸ್ ವಾಪಸ್ ಪಡೆಯುವುದಿಲ್ಲ 
ಹೋರಾಟ ಮಾಡಬೇಕು ಅಂತ ಇಳಿದಿದ್ದೀನಿ, ನನ್ನ ಫ್ಯಾಮಿಲಿ ವಿಚಾರಕ್ಕೆ ಬಂದ್ರೆ ನಾನು ಬಿಡೊಲ್ಲ, ನಾನು ಒಂದು ಘೋರವಾದ ಕಟೋರ ಸತ್ಯ ಹೇಳುತ್ತೀನಿ. ಅವನು ಎಂಥವನು ಅಂತ ನಾನು ಈಗ ಹೇಳೋಲ್ಲ, ಇನ್ನೊಂದು ಸಾರಿ ಹೇಳ್ತೀನಿ. ನ್ಯಾಯ ಕೊಡಿ, ಏನಾಗುತ್ತೆ ಅಂತ ನೋಡೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.