Breaking News
recent

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪರಭಾಷಾ ನಟಿ ನಿತ್ಯಾ ಮೆನನ್ ಅಭಿನಯದ ಕನ್ನಡದಲ್ಲಿ ಇನ್ನೂ ಹೆಸರಿಡದ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗಿದೆ.
Mudinja Ivana Pudi


ಈಗಾಗಲೇ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕೂಡ ಮುಗಿಸಿರುವ ಚಿತ್ರತಂಡ ಸಿನಿಮಾವನ್ನು ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ]

ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅವರು ಬಂಡವಾಳ ಹೂಡುತ್ತಿದ್ದಾರೆ.

ಇನ್ನೇನು ಚಿತ್ರದ ಎರಡು ಹಾಡುಗಳ ಶೂಟಿಂಗ್ ಬಾಕಿ ಇರುವುದರಿಂದ ಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಎಪ್ರಿಲ್ ತಿಂಗಳಿಗೆ ಮುಂದೂಡಿದೆ. ಮಾರ್ಚ್ ತಿಂಗಳಿನಲ್ಲಿ ಹಾಡಿನ ಶೂಟಿಂಗ್ ನಡೆಯಲಿದೆ.

ಇದೇ ಮೊದಲ ಬಾರಿಗೆ 'ಮೈನಾ' ಖ್ಯಾತಿಯ ಬೆಡಗಿ ನಟಿ ನಿತ್ಯಾ ಮೆನನ್ ಅವರು ಕಿಚ್ಚ ಸುದೀಪ್ ಅವರ ಜೊತೆ ತೆರೆ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಕೂಡ ಕೊಂಚ ಕುತೂಹಲ ಜಾಸ್ತೀನೇ ಇದೆ.[ಚಿತ್ರಗಳು: ಕಿಚ್ಚನಿಗೆ ಎದುರಾದ ಆ, ಆರು ರೌಡಿಗಳು ಯಾರು?]

ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಕೆಳಗಿನ ಅಪ್ಡೇಟ್ ಓದಿ...

1. ಆಡಿಯೋ ರಿಲೀಸ್ ಗೆ ಅಪ್ಪು
ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಚಿತ್ರತಂಡ ಆಹ್ವಾನಿಸಿದ್ದು, ಪುನೀತ್ ಅವರು ಒಪ್ಪಿಕೊಂಡಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಮಾರ್ಚ್ ತಿಂಗಳಿನಲ್ಲಿ ಶೂಟಿಂಗ್ ನಡೆಯಲಿದೆ. ಕಿಚ್ಚ ಮತ್ತು ಅಪ್ಪು ಅವರು ಬಿಗ್ ಬಾಸ್ ವೇದಿಕೆಯಲ್ಲಿ ಒಂದಾಗುತ್ತಾರೆ ಎಂಬುದಾಗಿ ಈ ಮೊದಲು ಸುದ್ದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಒಂದಾಗಲಿಲ್ಲ, ಇದೀಗ ಆಡಿಯೋ ಬಿಡುಗಡೆಗೆ ಆಗಮಿಸಲಿದ್ದಾರೆ.

2. ಶೂಟಿಂಗ್ ಸೆಟ್ ನಲ್ಲಿ ಸೆಲ್ಫಿ
ಶೂಟಿಂಗ್ ಸಂದರ್ಭದಲ್ಲಿ ಸೆಟ್ ನಲ್ಲಿ ಕಿಚ್ಚ ಸುದೀಪ್ ಅವರು ನಟಿ ನಿತ್ಯಾ ಮೆನನ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ. ಸೆಟ್ ನಲ್ಲಿ ಸುದೀಪ್ ಅವರು ಸಖತ್ ಮೋಜು-ಮಸ್ತಿ ಮಾಡುತ್ತಾರೆ ಅನ್ನೋದಕ್ಕೆ ಈ ಚಿತ್ರ ಸಾಕ್ಷಿ.

3. ಚಿತ್ರದ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ 
ಕೆ.ಎಸ್ ರವಿಕುಮಾರ್ ನಿರ್ದೇಶನದ ಈ ಸಿನಿಮಾ ರಿಲೀಸ್ ಗೂ ಮುನ್ನವೇ ಚಿತ್ರದ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗುವ ಮೂಲಕ ಗಾಂಧಿನಗರದಲ್ಲಿ ಈಗಾಗಲೇ ಸುದ್ದಿ ಮಾಡಿದೆ. ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು, ಹೈದರಾಬಾದ್ ಮೂಲದ ಆದಿತ್ಯ ಮ್ಯೂಸಿಕ್ ಸಂಸ್ಥೆ ದಾಖಲೆ ಮಟ್ಟದ ಮೊತ್ತ ಸುಮಾರು 1.30 ಕೋಟಿ ರೂಪಾಯಿಗೆ ಖರೀದಿಸಿದೆ.

4. 6 ವಿಲನ್ ಗಳ ಜೊತೆ ಸುದೀಪ್ ಫೈಟ್ 
ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಬಹುಮುಖ ಪ್ರತಿಭೆ ಪ್ರಕಾಶ್ ರಾಜ್, ಮುಖೇಶ್ ತಿವಾರಿ, ರವಿಶಂಕರ್, ಶರತ್ ಲೋಹಿತಾಶ್ವ, ನೇಸರ್ ಮತ್ತು ಅವಿನಾಶ್ ಮುಂತಾದ ಘಟಾನುಘಟಿ ವಿಲನ್ಗಳ ಜೊತೆ ಭರ್ಜರಿ ಫೈಟ್ ಮಾಡಲಿದ್ದಾರೆ.

5. ಕ್ಲೈಮ್ಯಾಕ್ಸ್ 2 ಕೋಟಿ ವೆಚ್ಚದಲ್ಲಿ
ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ 'ಮುಡಿಂಜ ಇವನ ಪುಡಿ' ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಿದ್ದಾರೆ. ಇತ್ತೀಚೆಗೆ ಊಟಿಯ ಸುಂದರ ಪರಿಸರದಲ್ಲಿ ಸುದೀಪ್ ಅವರು ಆರು ಮಂದಿ ವಿಲನ್ ಗಳ ಜೊತೆ ಫೈಟ್ ಮಾಡಿರುವ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

6. ಸುದೀಪ್ ಸಿಸಿಎಲ್ ನಲ್ಲಿ ಬ್ಯುಸಿ
ಸದ್ಯಕ್ಕೆ ಸುದೀಪ್ ಅವರು ಸಿಸಿಎಲ್ ಮ್ಯಾಚ್ ನಲ್ಲಿ ತಮ್ಮ ತಂಡವನ್ನು ಮುನ್ನಡೆಸುವುದರಲ್ಲಿ ಬ್ಯುಸಿ ಆಗಿರುವುದರಿಂದ ಚಿತ್ರದ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದುಕೊಂಡಿದೆ.


Fresh Kannada

Fresh Kannada

No comments:

Post a Comment

Google+ Followers

Powered by Blogger.