Breaking News
recent

ಬುಲೆಟ್ ಪ್ರಕಾಶ್, ದಿನಕರ್ ತೂಗದೀಪ್ ಗಲಾಟೆ ಈಗ ಶಾಂತ

ನಿನ್ನೆ ತಡರಾತ್ರಿ ನಿರ್ದೇಶಕ ದಿನಕರ್ ತೂಗದೀಪ್ ಹಾಗೂ ನಟ ಬುಲೆಟ್ ಪ್ರಕಾಶ್ ನಡುವೆ ನಡೆದ ಗಲಾಟೆಗೆ ಮಧ್ಯಾಹ್ನದ ವೇಳೆಗೆ ಶಾಂತವಾಗಿದೆ. [ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]
Dinakar Tugadeep and Bullet Prakash

ದಿನಕರ್ ತೂಗದೀಪ ವಿರುದ್ಧದ ಜೀವ ಬೆದರಿಕೆ ದೂರಿಗೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯಲ್ಲಿಂದು ಸಂಧಾನ ಮಾತುಕತೆ ನಡೆಯಿತು. ದಿನಕರ್ ತೂಗದೀಪ ಹಾಗೂ ಬುಲೆಟ್ ಪ್ರಕಾಶ್‍ರನ್ನು ಕರೆಸಿ ಅಮೃತಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಸಂಧಾನ ಮಾಡಿದರು.[ಬುಲೆಟ್ ಪ್ರಕಾಶ್, ದಿನಕರ್ ತೂಗದೀಪ್ ಗಲಾಟೆ ಈಗ ಶಾಂತ]

ಸಂಧಾನದ ಬಳಿಕವೂ ಮಾತನಾಡಿದ ನಟ ಬುಲೆಟ್ ಪ್ರಕಾಶ್, ಇಂದು ಸಂಜೆ ವೇಳೆಗೆ ದೂರು ವಾಪಸ್ ಪಡೆಯುತ್ತೇನೆ. ನಾವು ಚಿಕ್ಕವಯಸ್ಸಿನಿಂದ ಸ್ನೇಹಿತರು, ರಾತ್ರಿ ನಮ್ಮಿಬ್ಬರ ಮಧ್ಯೆ ಅದೊಂದು ವಿಚಾರಕ್ಕೆ ಮಾತಿನ ಚಕಮಕಿ ಆಗಿದೆ. [ನಟ ಬುಲೆಟ್ ಪ್ರಕಾಶ್ ಮೇಲೆ ದಿನಕರ್ ತೂಗುದೀಪ ಹಲ್ಲೆ!?]  
ಅದನ್ನು ವರತುಪಡಿಸಿದಂತೆ ನಾವು ಒಳ್ಳೆ ಸ್ನೇಹಿತರು. ಚಿತ್ರರಂಗದ ಕೆಲವರೊಂದಿಗೆ ಮಾತುಕತೆ ನಡೆಸಿ ದೂರು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.