Breaking News
recent

ಮೆಗಾಸ್ಟಾರ್ ಚಿರಂಜೀವಿ ಪುತ್ರಿಗೆ 2ನೇ ಮದ್ವೆ ಫಿಕ್ಸ್!

ಮೆಗಾಸ್ಟಾರ್ ಚಿರಂಜೀವಿ ತಮ್ಮ ಪುತ್ರಿ ಶ್ರೀಜಾ ಅವರ ಎರಡನೇ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರಹಸ್ಯವಾಗಿ ಮಗಳ ನಿಶ್ಚಿತಾರ್ಥ ಮಾಡಲು ಚಿರು ನಿರ್ಧರಿಸಿದ್ದು, ಮದುವೆಗೆ ಕೆಲವು ಗಣ್ಯರಿಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
CHIRANJEEVI DOUGHTER

ಎರಡನೇ ಮದುವೆಗೆ ಶ್ರೀಜಾ ಒಪ್ಪಿಗೆ ನೀಡಿದ್ದರಿಂದ ಅಮೆರಿಕಾದಲ್ಲಿ ವ್ಯವಹಾರ ಮಾಡುತ್ತಿರುವ ಸೂಕ್ತ ವರನ ಜೊತೆ ಶ್ರೀಜಾ ನಿಶ್ಚಿತಾರ್ಥವನ್ನು ಮಾಡಲು ಚಿರು ಕುಟುಂಬ ನಿರ್ಧರಿಸಿದೆ. ಆದರೆ ಕಾರ್ಯಕ್ರಮ ಗುಪ್ತವಾಗಿದ್ದು ಸೀಮಿತ ವ್ಯಕ್ತಿಗಳನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೊದಲ ಪತಿಯೊಂದಿಗೆ ವಿಚ್ಛೇದನ: 2007ರಲ್ಲಿ ತನ್ನ ಹೆತ್ತವರನ್ನು ಎದುರು ಹಾಕಿಕೊಂಡು ಪ್ರಿಯಕರ ಸಿರಿಶ್ ಭಾರದ್ವಾಜ್ ಜೊತೆ ಶ್ರೀಜಾ ಮದುವೆಯಾಗಿದ್ದರು. ಜೊತೆಗೆ ಮದುವೆಯಾಗಿದ್ದಕ್ಕೆ ತನ್ನ ಕುಟುಂಬದವರು ಜೀವ ಬೆದರಿಕೆ ಒಡ್ಡಿದ್ದ ಆರೋಪವನ್ನು ಮಾಡಿದ್ದರು. ಇದಾದ ನಂತರದಲ್ಲಿ ಸಿರಿಶ್ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಕೇಸ್ ದಾಖಲಿಸಿದ್ದ ಶ್ರೀಜಾ ಆತನಿಂದ ಡೈವೋರ್ಸ್ ಪಡೆದಿದ್ದರು. ಈ ವಿಚ್ಛೇದಿತ ದಂಪತಿಗೆ ಒಂದು ಹೆಣ್ಣು ಮಗು ಇದ್ದು, ಶ್ರೀಜಾ ಮಗುವಿನ ಜೊತೆ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ.
ಸದ್ಯ ತನ್ನ ಕಂಬ್ಯಾಕ್ ಹಾಗೂ 150ನೇ ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಚಿರು, ಮೊದಲು ಮಗಳ ನಿಶ್ಚಿತಾರ್ಥ ಮಾಡಿ ಮುಗಿಸಿ, ಸಿನಿಮಾ ಮುಗಿದ ನಂತರ ಮಗಳ ಎರಡನೇ ಮದುವೆ ಮಾಡಿ ಮುಗಿಸಲಿದ್ದಾರಂತೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.