Breaking News
recent

ಅಂತೂ ಇಂತೂ ಗೆದ್ದೇಬಿಟ್ರು ಶೃತಿ ಅಕ್ಕ

ಬಿಗ್‍ಬಾಸ್ ಕನ್ನಡ ಸೀಸನ್ ಮೂರರ ಕಿರೀಟವನ್ನು ನಟಿ ಶೃತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡದ ಬಿಗ್ ಬಾಸ್ ನಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಶಸ್ತಿ ಪಡೆದುಕೊಂಡಂತಾಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ 98 ದಿನಗಳನ್ನ ಪೂರೈಸಿದವರಲ್ಲಿ ಚಂದನ್ ಎರಡನೇ ಸ್ಥಾನ ಮತ್ತು ಮಾಸ್ಟರ್ ಆನಂದ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫಿನಾಲೆ ಹಂತವನ್ನು ತಲುಪಿದ್ದ ರೆಹಮಾನ್ ಮತ್ತು ಪೂಜಾಗಾಂಧಿ ಅಂತಿಮ ಹಂತದಲ್ಲಿ ಎಲಿಮಿನೆಟ್ ಆಗಿ ಮನೆಯಿಂದ ಹೊರಬಂದರು.
ಬಿಗ್ ಬಾಸ್ ಮನೆಯಲ್ಲಿ ಇತರೆ ಸ್ಪರ್ಧಿಗಳ ಪಾಲಿಗೆ ಅಮ್ಮ ಮತ್ತು ಅಕ್ಕನ ಸ್ಥಾನದಲ್ಲಿದ್ದ ಶೃತಿ ಎಲ್ಲ ಸಂಕಷ್ಟಗಳನ್ನೂ ದಾಟಿ ಬಿಗ್ ಬಾಸ್ ಮನೆಯಲ್ಲಿ 98 ದಿನಗಳ ವನವಾಸವನ್ನ ಕಳೆದ್ರು. ಶೃತಿ ಅವರು ಓಪನ್ ಅಪ್ ಆಗುತ್ತಿಲ್ಲ, ಅವರು ಹೊರಗಡೆ ಇದ್ದಂತೆ ಬಿಗ್‍ಬಾಸ್ ಮನೆಯಲ್ಲಿ ಇಲ್ಲ, ತುಂಬಾ ನಾಟಕ ಮಾಡ್ತಾರೆ ಅಂತೆಲ್ಲ ಸ್ಪರ್ಧಿಗಳು ಶೃತಿ ಅವರ ಬಗ್ಗೆ ಮಾತಾಡಿದ್ದರು.
ಇದನ್ನೆಲ್ಲಾ ಕೇಳಿ ಶೃತಿ ಅವರು ಕೆಲವೊಮ್ಮೆ ಬೇಜಾರಾಗಿ ನಾನು ಯಾಕಾದರೂ ಬಿಗ್ ಬಾಸ್‍ಗೆ ಬಂದೆನೋ ಎಂದಿದ್ದರು. ಆದರೂ ಕೊನೆಯ ವಾರ ಅವರ ಮಗಳು ಗೌರಿ ಮನೆಗೆ ಬಂದು, ಅಮ್ಮಾ ನೀನು ಗೆದ್ದು ಬಾ ಎಂದು ಹೇಳಿದ ಮಾತು ಶೃತಿ ಅವರನ್ನು ಗಟ್ಟಿ ಮಾಡಿತ್ತು. ನನ್ನ ಮಗಳಿಗಾಗಿ ನಾನು ಗೆಲ್ಲಲೇಬೇಕು ಎನ್ನುತ್ತಿದ್ದ ಶೃತಿ ಈಗ ಬಿಗ್‍ಬಾಸ್‍ನ ವಿನ್ನರ್ ಆಗಿ 50 ಲಕ್ಷ ರೂ. ಬಹುಮಾನವನ್ನೂ ಪಡೆದಿದ್ದಾರೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.