Breaking News
recent

ವೆಂಕಟ್ ಮನೆಯವರು ಯಾಕೆ ಶ್ಯೂರಿಟಿ ಕೊಡ್ಲಿಲ್ಲ?

ವೆಂಕಟ್‍ಗೆ ಶ್ಯೂರಿಟಿ ನೀಡಲು ನಾವು ಎಲ್ಲ ತಯಾರಿ ನಡೆಸಿದ್ದೆವು, ಆದರೆ ಕೆಲವು ಕಾರಣಗಳಿಂದ ತಡವಾಯಿತು ಎಂದು ವೆಂಕಟ್ ಅವರ ಅಣ್ಣ ಕುಶಾಲ್ ಬಾಬು ಹೇಳಿದ್ದಾರೆ.
ವೆಂಕಟ್ ಮನೆಯವರು ಯಾಕೆ ಶ್ಯೂರಿಟಿ ಕೊಡ್ಲಿಲ್ಲ?

ನನಗೆ ಶ್ಯೂರಿಟಿ ನೀಡಲು ಮನೆಯವರು ಮುಂದೆ ಬಂದಿಲ್ಲ ಎನ್ನುವ ವೆಂಕಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವೆಂಕಟ್‍ಗೆ ಸಿಜೋಫ್ರೇನಿಯಾ ಖಾಯಿಲೆ ಇದೆ ಎಂದು ವೈದ್ಯರು ಹೇಳಿದ ಕಾರಣ ಆತನಿಗೆ ಜೈಲಿನಲ್ಲೇ ಚಿಕಿತ್ಸೆ ಕೊಡಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು, ಆದ್ದರಿಂದ ಆತ ಅಲ್ಲೇ ಇದ್ದು ಚಿಕಿತ್ಸೆ ಪಡೆದು ಬಳಿಕ ಮಾಧ್ಯಮದ ಮುಂದೆ ಬರಲಿ ಎಂದು ಸುಮ್ಮನಾಗಿದ್ದೇವೆ ಎಂದು ಅವರು ಹೇಳಿದರು.
ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿ ಜೈಲು ಪಾಲಾಗಿದ್ದ ವೆಂಕಟ್ ಅವರಿಗೆ ಮಂಜೇಗೌಡ ಅವರು ನೀಡಿದ ಶ್ಯೂರಿಟಿಯಿಂದಾಗಿ ನಿನ್ನೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದರು. ಈ ವೇಳೆ ನಾನು ಅತಿಯಾಗಿ ನಂಬಿದ್ದ ಮನೆಯವರೇ ನನಗೆ ಮೋಸ ಮಾಡಿದರು ಎಂದು ವೆಂಕಟ್ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: ನಾನು ಹುಚ್ಚ ಅಲ್ಲ, ಸರಿ ಇದ್ದೇನೆ
Fresh Kannada

Fresh Kannada

No comments:

Post a Comment

Google+ Followers

Powered by Blogger.