Breaking News
recent

ಸುದೀಪ್ ಬಳಿ ಕ್ಷಮೆ ಕೇಳಿದ ನೇಹಾ

 ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಂತೆ ಮನೆಯಿಂದ ಹೊರಬಂದಿರುವ ನೇಹಾ ಗೌಡ ತಾವು ಸುದೀಪ್ ಅವರ ಮೇಲೆ ಮಾಡಿದ್ದ ಆರೋಪಕ್ಕಾಗಿ ಬಿಗ್‍ಬಾಸ್ ವೇದಿಕೆಯಲ್ಲಿ ಕ್ಷಮೆ ಕೋರಿದರು.

ಕಳೆದ ವಾರ ಕರೆ ಮಾಡಿ ಮಾತನಾಡಿದ್ದ ಅಭಿಮಾನಿಯೊಬ್ಬರು ರೆಹಮಾನ್ ಮತ್ತು ನೇಹಾ ವಿಚಾರವಾಗಿ ಪ್ರಶ್ನಿಸಿದ್ದರು. ಅದಕ್ಕೆ ರೆಹಮಾನ್ ಕೂಡ ಉತ್ತರ ನೀಡಿದ್ದರು. ಈ ಕಾರ್ಯಕ್ರಮ ಮುಗಿದ ಬಳಿಕ ನೇಹಾ ಕರೆ ಮಾಡಿದ್ದವರಿಗಿಂತ ಸುದೀಪ್ ಅವರೇ ನಮ್ಮ ಬಗ್ಗೆ ಹೆಚ್ಚು ಮಾತನಾಡಿದರು ಎಂದು ಆರೋಪಿಸಿದ್ದರು.
ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಸುದೀಪ್, ನಿಮ್ಮಿಬ್ಬರ ಸಂಬಂಧದ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನೀವೇ ಉತ್ತರಿಸಿದ್ದೀರಿ. ಆ ಸಂದರ್ಭದಲ್ಲಿ ನಾನು ಮಧ್ಯ ಪ್ರವೇಶಿಸಲಿಲ್ಲ ಎಂದು ನೇಹಾಗೆ ಸ್ಪಷ್ಟೀಕರಣ ನೀಡಿದರು. ಇದರಿಂದ ತಮ್ಮ ಆರೋಪ ಸರಿಯಲ್ಲ ಎಂದು ಮನಗಂಡ ನೇಹಾ ಎಲಿಮಿನೇಷನ್ ಆಗುವ ಮುನ್ನ ಸುದೀಪ್ ಅವರಿಗೆ ಕ್ಷಮೆ ಕೇಳಿದರು.
ಅಲ್ಲದೆ ನಿನ್ನೆಯ ಸೂಪರ್ ಸಂಡೇ ಸಂಚಿಕೆಯಲ್ಲಿ ಸುದೀಪ್ ಅವರಿಗೆ ಮುಖಾಮುಖಿಯಾದ ನೇಹಾ ಮತ್ತೊಮ್ಮೆ ಈ ವಿಷಯವಾಗಿ ಬಿಗ್‍ಬಾಸ್ ವೇದಿಕೆಯಲ್ಲಿಯೇ ಕ್ಷಮೆ ಯಾಚಿಸಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.