Breaking News
recent

ಸೈನಿಕರು ಹೆಲಿಕಾಪ್ಟರ್‍ನಲ್ಲಿ ಬಂದು ಗರ್ಭಿಣಿಯನ್ನು ರಕ್ಷಿಸಿದ್ರು

ಸೈನಿಕರು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದ್ದ ಗರ್ಭಿಣಿ ಇಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ರಾಮನಾಥಪುರಂ ನಲ್ಲಿ ಪ್ರವಾಹಕ್ಕೆ ಸಿಲುಕಿ ಕಟ್ಟಡದ ಮೂರನೇ ಮಹಡಿಯಲ್ಲಿ ತುಂಬು ಗರ್ಭಿಣಿಯೊಬ್ಬಳು ಆಶ್ರಯ ಪಡೆದಿದ್ದಳು. ಚಳಿ, ಗಾಳಿ, ಆಹಾರವಿಲ್ಲದೇ ಈಕೆ ಕಂಗಲಾಗಿ ಹೋಗಿದ್ದಳು.
ಸೈನಿಕರು ಹೆಲಿಕಾಪ್ಟರ್‍ನಲ್ಲಿ ಬಂದು ಗರ್ಭಿಣಿಯನ್ನು ರಕ್ಷಿಸಿದ್ರು

ಈಕೆಯನ್ನು ಆಸ್ಪತ್ರೆಗೆ ಹೇಗೆ ಸೇರಿಸುವುದು ಎನ್ನುವುದೇ ಕಟ್ಟಡದಲ್ಲಿದ್ದ ಸಾರ್ವಜನಿಕರಿಗೆ ದೊಡ್ಡ ಚಿಂತೆಯಾಗಿತ್ತು. ಆದರೆ ಈ ವಿಚಾರ ವಾಯು ಸೇನಾ ಯೋಧರಿಗೆ ತಿಳಿದ ಕೂಡಲೇ ಶನಿವಾರ ಹೆಲಿಕಾಪ್ಟರ್‍ನಲ್ಲಿ ಈಕೆ ತಂಗಿದ್ದ ಕಟ್ಟಡಕ್ಕೆ ಬಂದಿದ್ದಾರೆ.
ಈ ವೇಳೆ ನೀರಿನ ಟ್ಯಾಂಕ್ ಮೇಲೆ ನಿಂತಿದ್ದ ಗರ್ಭಿಣಿಯನ್ನು ಯೋಧರು ಹೆಲಿಕಾಪ್ಟರ್‍ನಲ್ಲಿ ಕರೆದುಕೊಂಡು ಹೋಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮಹಿಳೆ ಭಾನುವಾರ ಬೆಳಗ್ಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.