Breaking News
recent

ಪುನೀತ್ ಗೆ ಅಪ್ಪ ಆಗ್ತಾರಂತೆ, ತಮಿಳಿನ ಶರತ್ ಕುಮಾರ್

ಚಂದನವನದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಚಿತ್ರ 'ರಾಜಕುಮಾರ' ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ತಂದೆಯಾಗಿ ಇದೇ ಮೊದಲ ಬಾರಿಗೆ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
Puneethrajkumar upcoming kannada movie

ಪವರ್ ಸ್ಟಾರ್ ಪುನೀತ್ ಅವರ ಬಹುನಿರೀಕ್ಷಿತ ಚಿತ್ರಗಳಾದ 'ಚಕ್ರವ್ಯೂಹ' ಮತ್ತು 'ದೊಡ್ಮನೆ ಹುಡುಗ' ತೆರೆಗೆ ಬರಲು ಸಿದ್ಧವಾಗಿದ್ದು, ಈ ಎರಡು ಸಿನಿಮಾಗಳು ತೆರೆ ಕಂಡ ಮೇಲೆ ನಿರ್ದೇಶಕ ಸಂತೋಷ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಹೊಸ ಸಿನಿಮಾ 'ರಾಜಕುಮಾರ' ಸೆಟ್ಟೇರಲಿದೆ.[16ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿ ಪವರ್ ಸ್ಟಾರ್.!]

ಹೊಸ ಚಿತ್ರಕ್ಕೆ ಸಹಕಲಾವಿದರ ಹುಡುಕಾಟದಲ್ಲಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಮೊದಲಿಗೆ ಪುನೀತ್ ತಂದೆಯಾಗಿ ತಮಿಳು ನಟ ಶರತ್ ಅವರನ್ನು ಆಯ್ಕೆ ಮಾಡಿದ್ದಾರೆ. 'ಮೈನಾ' ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಮಿಂಚಿದ್ದ ನಟ ಶರತ್ ಅವರು ಈ ಬಾರಿ ಪುನೀತ್ ತಂದೆಯಾಗಿ ನಟಿಸಿದ್ದಾರೆ.[ಅಪ್ಪುಗೆ, 'ಚಕ್ರವ್ಯೂಹ' 25ನೇ ಚಿತ್ರನಾ, ಅಥವಾ 'ದೊಡ್ಮನೆ ಹುಡುಗ'ನಾ?]

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಸ್ಟ್ರೇಲಿಯಾ, ಗೋವಾ, ಮೈಸೂರು, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೆಹಲಿಯಲ್ಲಿ ಚಿತ್ರೀಕರಣ ನಡೆಯಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.