Breaking News
recent

ಭಾರೀ ಚಿನ್ನ ತುಂಬಿದ್ದ ಹಡಗು ಕೊಲಂಬಿಯಾದಲ್ಲಿ ಪತ್ತೆ

ಕೊಲಂಬಿಯಾ: 1708 ರಲ್ಲಿ ಕೆರಿಬಿಯನ್ ಸಮುದ್ರದಲ್ಲಿ ಮುಳುಗಿಹೋಗಿದ್ದ ದಿ ಸ್ಯಾನ್ ಜೋಸ್ ಎಂಬ ಹಡಗು ಇದೀಗ
Colombia 1708 ship demo

ಪತ್ತೆಯಾಗಿರುವ ವಿಷಯವನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಟ್ವಿಟ್ಟರಿನಲ್ಲಿ ತಿಳಿಸಿದ್ದಾರೆ.
ಅಂದಿನ ಬಾರು(ಈಗಿನ ಕೊಲಂಬಿಯಾ) ಬಂದರಿನ ರೊಸಾರಿಯೋ ದ್ವೀಪದಲ್ಲಿ ಪತ್ತೆಯಾಗಿರುವ ಈ ಹಡಗಿನಲ್ಲಿ ಭಾರೀ ಪ್ರಮಾಣದ ಪಚ್ಚೆ, ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
5ನೇ ಫಿಲಿಪ್ ಎಂಬ ರಾಜನ ನೌಕಾ ಪಡೆಯ ಭಾಗವಾಗಿದ್ದ ಈ ಹಡಗು ಸ್ಪಾನಿಶ್ ಯುದ್ಧದ (ದಿ ವಾರ್ ಆಫ್ ಸ್ಪಾನಿಶ್ ಸಕ್ಸೆಷನ್) ಸಂದರ್ಭದಲ್ಲಿ ಬ್ಟಿಟೀಷರ ದಾಳಿಗೆ ಸಿಲುಕಿ ನೀರಿನಲ್ಲಿ ಮುಳುಗಡೆಯಾಗಿತ್ತು.
ಇದೀಗ ಸ್ಯಾನ್ ಜೋಸ್ ಹಡಗು ಪತ್ತೆಯಾಗಿದ್ದು ಇದರ ಬಗ್ಗೆ ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ನಡೆಸುತ್ತೇವೆ ಎಂದು ಅಧ್ಯಕ್ಷರಾದ ಸ್ಯಾಂಟೋಸ್ ಟ್ವೀಟ್ ಮಾಡಿದ್ದಾರೆ.
ಆದರೆ ಇದಕ್ಕೂ ಹಿಂದೆಯೇ 1981 ರಲ್ಲಿ ಸೀ ಸರ್ಚ್ ಅರ್ಮಾಡಾ ಎಂಬ ಅಮೆರಿಕದ ರಕ್ಷಣಾ ಸಂಸ್ಥೆಯೊಂದು ಹಡಗು ಮುಳುಗಡೆಯಾಗಿದ್ದ ಜಾಗವನ್ನು ಪತ್ತೆಹಚ್ಚಿತ್ತು. ಆಗ ಕಂಪನಿ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದ್ದರಿಂದ ನಿಧಿ ದೊರಕಿದರೆ ಅದನ್ನು ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಹಂಚಿಕೊಳ್ಳುವುದು ಎಂದು ಒಪ್ಪಂದವಾಗಿತ್ತು. ಅನಂತರ 2011 ರಲ್ಲಿ ಅಮೆರಿಕ ನ್ಯಾಯಾಲಯ ಹಡಗಿನ ಸ್ವಾಮ್ಯತೆ ಕೊಲಂಬಿಯಾಗೆ ಸೇರಿದ್ದು ಎಂದು ಆದೇಶ ಹೊರಡಿಸಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.