Breaking News
recent

ನಾನು ಹುಚ್ಚ ಅಲ್ಲ, ಸರಿ ಇದ್ದೇನೆ: ವೆಂಕಟ್ ಕಣ್ಣೀರು

ನಾನು ಹುಚ್ಚ ಅಲ್ಲ, ನಾನು ಸರಿ ಇದ್ದೇನೆ. ಒಂದು ಪದ ಬಳಕೆಯಿಂದಾಗಿ ನನಗೆ ಈ ಗತಿ ಬಂದಿದೆ. ಇನ್ನು ಮುಂದೆ ಜೀವನ ಪೂರ್ತಿ ಆ ಪದವನ್ನು ಬಳಕೆ ಮಾಡುವುದಿಲ್ಲ. ಅಭಿಮಾನಿಗಳಿಗೆ ನೋವುಂಟು ಮಾಡುವುದಿಲ್ಲ ಎಂದು ವೆಂಕಟ್ ಹೇಳಿದ್ದಾರೆ.
hucch venkat jail

ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂವಿಧಾನ ಬರೆದ ಅಂಬೇಡ್ಕರ್ ಬಗ್ಗೆ ನನಗೆ ಗೌರವವಿದೆ. ಡಿಎಸ್‍ಎಸ್ ಬಗ್ಗೆ ನನಗೆ ಪ್ರೀತಿ ಇದೆ. ಕರ್ನಾಟಕದ ಜನರನ್ನು ನಾನು ಸಾಯುವರೆಗೂ ಮರೆಯುದಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.
ನನ್ನನ್ನು ಬಿಡುಗಡೆ ಮಾಡಲು ಮನೆಯವರು ಯಾರು ಬಂದಿಲ್ಲ. ಕರ್ನಾಟಕದ ಜನತೆಯಿಂದ ನಾನು ಬಿಡುಗಡೆಯಾಗಿದ್ದೆನೆ. ನಾನು 2011ರಲ್ಲೇ ಸಿನಿಮಾ ರಂಗಕ್ಕೆ ಬಂದಿದ್ದೇನೆ. ಆದರೆ ಈಗ ಸ್ಟಾರ್ ಆಗಿದ್ದೇನೆ. ಮಾಧ್ಯಮಗಳು ಕಲಾವಿದರನ್ನು ಸಂದರ್ಶನ ಮಾಡುವುದು ಅವರ ಕರ್ತವ್ಯ. ಹೀಗಾಗಿ ಈ ವಿಚಾರಲ್ಲಿ ಮಾಧ್ಯಮಗಳನ್ನು ಯಾವುದೇ ಕಾರಣಕ್ಕೆ ದೂರಬೇಡಿ ಎಂದು ತಿಳಿಸಿದರು. ವೀಡಿಯೊ ನೋಡಿ


ಜೈಲು ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಒಂದು ದಿನ ನನ್ನನ್ನು ಹುಚ್ಚ ವೆಂಕಟ್ ಎಂದು ಕರೀಲಿಲ್ಲ. ಆದರೆ ನಾನು ಅತಿಯಾಗಿ ನಂಬಿದ್ದ ಮನೆಯವರೇ ನನಗೆ ಮೋಸ ಮಾಡಿದರು. ಅತ್ಯಾಚಾರಿಗಳನ್ನು ನೇಣಿಗೆ ಹಾಕುವುದು ತಪ್ಪಾ, ಸೈನಿಕರನ್ನು ಹೊಗಳುವುದು ತಪ್ಪಾ? ಪೊಲೀಸ್, ವೈದ್ಯರಿಗೆ ಗೌರವ ನೀಡುವುದು ತಪ್ಪಾ? ನಾನು ಇಷ್ಟು ಹೊತ್ತು ಮಾತನಾಡಿದ್ದಲ್ಲಿ ಹುಚ್ಚುತನ ಇದೆಯೇ ಎಂದು ಹೇಳಿ ಅವರು ಕಣ್ಣೀರು ಹಾಕಿದರು.
ಮುಂದೆ 2 ವಾರದಲ್ಲಿ ಪೊರ್ಕಿ ಹುಚ್ಚ ವೆಂಕಟ್ ಸಿನಿಮಾ ಹಾಡು ಶೂಟಿಂಗ್ ಮಾಡುತ್ತೇನೆ. ನಾನು ಎಲ್ಲಿಯು ಕುಗ್ಗಿಲ್ಲ. ಸ್ವಲ್ಪ ಬೇಸರವಾಗಿದೆ ಎಂದು ವೆಂಕಟ್ ದುಃಖ ವ್ಯಕ್ತಪಡಿಸಿದರು. 
Fresh Kannada

Fresh Kannada

No comments:

Post a Comment

Google+ Followers

Powered by Blogger.