Breaking News
recent

ದೋಸ್ತಿಗಳಾಗಿದ್ದ ಅಯ್ಯಪ್ಪ ಚಂದನ್ ದುಷ್ಮನ್ ಆಗ್ತಿದ್ದಾರಾ!?

ಬಿಗ್‍ಬಾಸ್ ಮನೆಗೆ ಬಂದ ಹೊಸತರಲ್ಲಿ ಎಲ್ಲರಿಗಿಂತ ಹೆಚ್ಚು ಆತ್ಮೀಯತೆ ಹೊಂದಿದ್ದವರು ಅಯ್ಯಪ್ಪ ಮತ್ತು ಚಂದನ್. ಆದರೆ ಈಗೀಗ ಕೆಲವೊಂದು ಕಾರಣಗಳಿಂದ ಅವರಿಬ್ಬರ ನಡುವೆ ದಿನೇ ದಿನೇ ಮನಸ್ತಾಪಗಳು ಹೆಚ್ಚಾಗುತ್ತಿವೆ.
ದೋಸ್ತಿಗಳಾಗಿದ್ದ ಅಯ್ಯಪ್ಪ ಚಂದನ್ ದುಷ್ಮನ್ ಆಗ್ತಿದ್ದಾರಾ!?

ಅಯ್ಯಪ್ಪ ಮತ್ತು ಪೂಜಾ ನಡುವೆ ಸಲಿಗೆ ಬೆಲೆಯಲು ಕಾರಣರಾಗಿದ್ದ ಚಂದನ್ ಈಗ ಅದೇ ಪೂಜಾ ಕಾರಣದಿಂದ ಅಯ್ಯಪ್ಪ ಮೇಲೆ ಕೋಪಗೊಂಡಿದ್ದಾರೆ.
ಮನೆಯಿಂದ ಹೊರಹೋಗುವ ಮುನ್ನ ಪೂಜಾಗೆ ಸಿಕ್ಕ ವಿಶೇಷ ಅಧಿಕಾರದಿಂದ ಅವರು ಚಂದನ್‍ಗೆ ಮನೆಯವರ ಬಟ್ಟೆ ಒಗೆಯುವ ಶಿಕ್ಷೆ ನೀಡಿ ಹೋಗಿದ್ದರು. ಸೀಕ್ರೆಟ್ ರೂಮಿನಲ್ಲಿದ್ದು ಮತ್ತೆ ಮನೆಗೆ ವಾಪಸ್ಸಾದ ಪೂಜಾ ಚಂದನ್ ಮೇಲಿನ ಸಿಟ್ಟಿನಿಂದ ತಮ್ಮ 35 ಜೊತೆ ಬಟ್ಟೆಗಳನ್ನು ಒಗೆಯಲು ಹಾಕಿದ್ದು ಈಗ ಚಂದನ್ ಅವರ ಕೋಪಕ್ಕೆ ಕಾರಣವಾಗಿದೆ. ಈ ವಿಷಯವಾಗಿ ಪೂಜಾರನ್ನು ಸಮರ್ಥಿಸಿಕೊಂಡ ಕಾರಣ ಅಯ್ಯಪ್ಪ ಮತ್ತು ಚಂದನ್ ಸ್ನೇಹದಲ್ಲಿ ಬಿರುಕು ಮೂಡಿಸಿದೆ.
ಅಲ್ಲದೆ ಟಾಸ್ಕ್ ಸಂದರ್ಭಗಳಲ್ಲಿ ನಾಯಕರಾಗಿ ಅಯ್ಯಪ್ಪ ಹೇಳುವ ಮಾತನ್ನು ಚಂದನ್ ಕೇಳುತ್ತಿಲ್ಲ ಎಂಬುದೂ ಕೂಡ ಇವರಿಬ್ಬರ ಮನಸ್ತಾಪಕ್ಕೆ ಕಾರಣವಾಗಿದೆ. ಮನೆಗೆ ಬಂದಾಗ ದೋಸ್ತಿಗಳಾಗಿದ್ದ ಅಯ್ಯಪ್ಪ ಚಂದನ್ ಮನಸ್ಸುಗಳು ಈಗ ದೂರವಾಗುತ್ತಿವೆ. ಹಾಗೆ ಆನಂದ್ ಮತ್ತು ಚಂದನ್ ನಡುವಿದ್ದ ಶೀತಲ ಸಮರ ನಿನ್ನೆಯ ಟಾಸ್ಕಿನಿಂದ ಕೊಂಚ ಕಡಿಮೆಯಾಗಿದೆ. ಮುಂದೆ ಬಿಗ್‍ಬಾಸ್ ಮನೆಯಲ್ಲಿ ಯಾರು ದೋಸ್ತಿಗಳಾಗುತ್ತಾರೆ ಮತ್ತ್ಯಾರು ದುಷ್ಮನ್‍ಗಳಾಗುತ್ತಾರೆ ಎಂದು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.