Breaking News
recent

ಮಾತೂ ಬರಲ್ಲ, ಕಿವಿನೂ ಕೇಳಿಸಲ್ಲ ಆದ್ರೆ ಸಾಧನೆಗೆನೂ ಕಮ್ಮಿ ಇಲ್ಲ

ಕಲಬುರಗಿ: ಈ ಹೆಣ್ಣು ಮಕ್ಕಳಿಗೆ ಕಿವಿ ಕೇಳಲ್ಲ ಮಾತೂ ಬರಲ್ಲ ಆದರೂ ಅವರು ಯಾರಿಗೂ ಕಮ್ಮಿಯಿಲ್ಲ. ಅಂತಹ ಮಕ್ಕಳು ಕರಾಟೆ ಸ್ಪರ್ಧೆಯಲ್ಲಿ ನ್ಯಾಷನಲ್ ಚಾಂಪಿಯನ್ ಟ್ರೋಫಿ ಗೆದ್ದು ಇಡೀ ಶಾಲೆಗೆ ಕೀರ್ತಿ ತಂದಿದ್ದಾರೆ.
ಮಾತೂ ಬರಲ್ಲ, ಕಿವಿನೂ ಕೇಳಿಸಲ್ಲ ಆದ್ರೆ ಸಾಧನೆಗೆನೂ ಕಮ್ಮಿ ಇಲ್ಲ

ಕಲಬುರಗಿಯಲ್ಲಿರುವ ಅಂಜನಾ ಕಿವುಡ ಮತ್ತು ಮೂಕ ವಸತಿ ಶಾಲೆಯ ವಿದ್ಯಾರ್ಥಿಗಳು. ಮಾತನಾಡಲೂ ಬರಲ್ಲ ಮಾತೂ ಕೇಳಿಸಲ್ಲ. ಆದರೂ ಇವರೆಲ್ಲ ಪ್ರತಿಭೆಯಲ್ಲಿ ನಂಬರ್ ಒನ್. ಡಿಸೆಂಬರ್ 3 ಎಂದರೆ ವಿಶ್ವ ಅಂಗವಿಕಲರ ದಿನ. ಇಂತಹ ದಿನದದಂದು ಇವರ ಪ್ರತಿಭೆಯನ್ನು ಕೊಂಚ ಹೇಳಲೇಬೇಕು. ಕಾರಣ ಇದೇ ಶಾಲೆಯ ಪುಟ್ಟ ಬಾಲಕಿ ಮಾಯಾಶ್ರೀ ಮತ್ತು ಗಿರಿಜಾ ಎಂಬ ಇವರಿಬ್ಬರೂ ಇತ್ತೀಚೆಗಷ್ಟೇ ಚಿಕ್ಕಮಂಗಳೂರಿನ ಕಡೂರಿನಲ್ಲಿ ನಡೆದ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಟ್ರೋಫಿ ಗೆದ್ದು ಬಂದಿದ್ದಾರೆ.
ಅಂದಹಾಗೇ ಕೇವಲ ಓದುವುದು ಬರೆಯುವರದಲ್ಲಿ ಮಾತ್ರವಲ್ಲದೇ ಪ್ರತಿಭೆಯಲ್ಲಿ ಎಕ್ಸಪರ್ಟ್ ಆಗಿದ್ದು ಈ ಮಕ್ಕಳ ವಿಶೇಷ. ಈ ಹಿಂದೆ ಕಲಬುರಗಿ ಜಿಲ್ಲಾ ಪಂಚಾಯತ ಸಿಇಓ ಆಗಿದ್ದ ಪಲ್ಲವಿ ಆಕುರುತಿ ಈ ಮಕ್ಕಳ ಪ್ರತಿಭೆಯನ್ನು ನೋಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿದರು. ಇದೀಗ ಜ್ಯೋತಿ ಎಂಬ ಕರಾಟೆ ಟೀಚರ್ ಇವರೆಗೆಲ್ಲ ಮೂರು ವರ್ಷಗಳಿಂದ ಕರಾಟೆ ಹೇಳಿಕೊಡುತ್ತಿದ್ದಾರೆ.
ಅದಕ್ಕಾಗಿ ನವೆಂಬರ್ 28 ರಂದು ಕಡೂರಿಗೆ ತೆರಳಿದ ಮಾಯಾಶ್ರೀ ಮತ್ತು ಗಿರಿಜಾ ಇಬ್ಬರೂ ಅಂಗವಿಕಲರಾಗಿದ್ದರೂ ನಾರ್ಮಲ್ ಸ್ಪರ್ಧಿಗಳ ಜೊತೆ ಫೈಟ್ ಮಾಡಿ ಕರಾಟೆ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಆತ್ಮರಕ್ಷಣೆಗಾಗಿ ಮಾತ್ರವಲ್ಲ ಶಾಲೆಗೂ ಕೀರ್ತಿ ತಂದ ಈ ಮಕ್ಕಳ ಸಾಧನೆ ಎಲ್ಲರಿಗೂ ಖುಷಿ ತಂದಿದೆ. ಕೇವಲ ಕರಾಟೆ ಮಾತ್ರವಲ್ಲ ಚಿತ್ರಕಲೆ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಈ ಪ್ರತಿಭೆಗಳು ಸ್ಪರ್ಧೆಗಿಳಿದು ಹೆಸರು ಮಾಡುತ್ತಿವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.