Breaking News
recent

ಆಸ್ತಿ ವಿವಾದ: ಮೀನಾ ತೂಗುದೀಪ್ ವಿರುದ್ಧ ದೂರು ದಾಖಲು

ದಿವಂಗತ ನಟ ತೂಗುದೀಪ್ ಶ್ರೀನಿವಾಸ್ ಅವರ ಪತ್ನಿ ಮೀನಾ ತೂಗುದೀಪ್ ಅವರ ಕುಟುಂಬ ಆಸ್ತಿ ವಿವಾದ ಸದ್ದು ಮಾಡುತ್ತಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಾನು ಇದ್ದ ಮನೆಯನ್ನು ಮೀನಾ ತೂಗುದೀಪ್ ಧ್ವಂಸ ಮಾಡಿಸಿದ್ದಾರೆ ಎಂದು ಸೋದರ ಚಾಮರಾಜನಾಯ್ಡು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
meena thoogudeepa

ನನ್ನ ಮೇಲೆ ಬಂದಿರುವ ಆರೋಪಕ್ಕೆ ಸ್ವತಃ ಮೀನಾ ತೂಗುದೀಪ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನನ್ನ ಮಕ್ಕಳು ದೊಡ್ಡ ಸ್ಟಾರ್ಸ್ ಎನ್ನುವ ಕಾರಣಕ್ಕೆ ಈಗ ನನ್ನ ಮೇಲೆ ಇಂತಹ ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಆಸ್ತಿ ಪ್ರಕರಣ, 5 ವರ್ಷಗಳ ಹಿಂದೆಯೇ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಚಾಮರಾಜ ನಾಯ್ಡು ಯಾರು ಎನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಈಗ ಸುಮ್ಮನೆ ಈ ವಿಚಾರವನ್ನು ತೆಗೆದಿದ್ದಾರೆ. ನನ್ನ ಮೇಲೆ ಇಂಥಾ ಆರೋಪ ಮಾಡುತ್ತಿದ್ದಾರೆ ಎಂದು ಮೀನಾ ತೂಗದೀಪ್ ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ? ಆಸ್ತಿ ವಿಚಾರ ಕೋರ್ಟ್‍ನಲ್ಲಿ ಇತ್ಯರ್ಥವಾಗಿದೆ. ಆದರೆ ಇತ್ಯರ್ಥದ ಬಳಿಕ ನನಗೆ ಸೇರಿದ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿದ್ದಾರೆ. ಅಕ್ರಮ ಪ್ರವೇಶ ಮಾಡಿ ನನಗೆ ಸೇರಿದ ಮನೆ ಕೆಡವಲಾಗಿದೆ. ಮನೆಯಲ್ಲಿನ ಪಿಠೋಪಕರಣಗಳು ಮತ್ತು ನನಗೆ ಸೇರಿದ ಜಾಗದಲ್ಲಿದ್ದ ಬೀಟೆ, ತೇಗದ ಮರಗಳು ಕಳ್ಳತನ ವಾಗಿದೆ. ಮನೆಗೆ ಹಾಕಲಾಗಿದ್ದ ಹೆಂಚುಗಳನ್ನು ಸಹ ಕಳ್ಳತನಮಾಡಲಾಗಿದೆ ಇದರಿಂದ ನನಗೆ ಸುಮಾರು 6 ಲಕ್ಷ ರೂ. ನಷ್ಟ ಉಂಟಾಗಿದೆ. ಹೀಗಾಗಿ ಮೀನಾ ಶ್ರೀನಿವಾಸ್, ಪಾರ್ವತಿ ರವಿಕುಮಾರ್, ದಮಯಂತಿ, ಮಕರಂದ ನಾಯ್ಡು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚಾಮರಾಜನಾಯ್ಡು ದೂರಿನಲ್ಲಿ ಮನವಿ ಮಾಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.