Breaking News
recent

'ಜೋಗಿ ಗುಡ್ಡ'ದ ಮೇಲೆ ಧರ್ಮ ಕೀರ್ತಿರಾಜ್-ನಿಖಿತಾ

'ಮುಮ್ತಾಜ್' ಸಿನಿಮಾ ನಂತರ ಧರ್ಮ ಕೀರ್ತಿರಾಜ್ ಗೆ ಗೋಲ್ಡನ್ ಟೈಮ್ ಶುರುವಾಗಿದೆ. ಹಾಗಂತ ಬಂದ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ, ಪಾತ್ರ ಮತ್ತು ಚಿತ್ರಕಥೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಧರ್ಮ ಕೀರ್ತಿರಾಜ್ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.
'ಜೋಗಿ ಗುಡ್ಡ'ದ ಮೇಲೆ ಧರ್ಮ ಕೀರ್ತಿರಾಜ್-ನಿಖಿತಾ

ಆ ಚಿತ್ರವೇ 'ಜೋಗಿಗುಡ್ಡ'. ಶೀರ್ಷಿಕೆ ಕೇಳಿದ ಕೂಡಲೆ ಶಿವರಾಜ್ ಕುಮಾರ್ ಅಭಿನಯದ 'ಜೋಗಿ' ಚಿತ್ರದ ಟೈಪ್ ಇರಬಹುದಾ ಅಂತ ತಾಳೆಹಾಕಬೇಕಿಲ್ಲ. ಯಾಕಂದ್ರೆ, ಇದು ಅಪ್ಪಟ ಲವ್ ಸ್ಟೋರಿ ಸಿನಿಮಾ.

ಧರ್ಮ ಕೀರ್ತಿರಾಜ್ ಜೊತೆ ಇಲ್ಲಿ 'ಜೋಗಿಗುಡ್ಡ' ಹತ್ತಲು ರೆಡಿಯಾಗಿರುವುದು ನಟಿ ನಿಖಿತಾ ನಾರಾಯಣ್. ಮೂಲತಃ ಕನ್ನಡತಿ ಆಗಿರುವ ನಿಖಿತಾ ಈಗಾಗಲೇ ಶ್ರೀನಗರ ಕಿಟ್ಟಿ ನಾಯಕರಾಗಿ ನಟಿಸಿದ್ದ 'ಗೀತಾಂಜಲಿ', 'ಸಾಧು' ಮತ್ತು 'ದಂಡಂ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಾಗಚಂದ್ರ 'ಜೋಗಿಗುಡ್ಡ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಜೋಗಿಗುಡ್ಡ' ಫೋಟೋಶೂಟ್ ಈಗಾಗಲೇ ನಡೆದದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.