Breaking News
recent

ರೆಹಮಾನ್‍ರಂತೆ ಕೃತಿಕಾಗೂ ಶಿಕ್ಷೆ

ಅನ್ನ ನೀರು ಬಿಟ್ಟು ಬೇರೆ ಯಾವುದೇ ಆಹಾರವನ್ನು ಸೇವಿಸಬಾರದು ಎಂದು ನೇಹಾ ಮನೆಯಿಂದ ಹೊರಡುವಾಗ ತಮಗೆ ಸಿಕ್ಕಿದ ವಿಶೇಷ ಅಧಿಕಾರದಿಂದ ರೆಹಮಾನ್ ಅವರಿಗೆ ಶಿಕ್ಷೆ ಕೊಟ್ಟು ಹೋಗಿದ್ದರು. ಇದೀಗ ಅದೇ ಶಿಕ್ಷೆ ಕೃತ್ತಿಕಾಗೂ ಸಿಕ್ಕಿದೆ.
ರೆಹಮಾನ್‍ರಂತೆ ಕೃತಿಕಾಗೂ ಶಿಕ್ಷೆ

ನಾಮಿನೇಷನ್ ಪ್ರಕ್ರಿಯೆಯ ಬಗ್ಗೆ ಮನೆಯವರು ಪರಸ್ಪರ ಚರ್ಚಿಸಬಾರದು ಎಂಬ ನಿಯಮವಿದ್ದರೂ ಕೃತ್ತಿಕಾ ಈ ನಿಯಮವನ್ನು ಉಲ್ಲಂಘಿಸಿದರು. ಚಂದನ್ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ನನ್ನನು ನಾಮಿನೇಟ್ ಮಾಡುವಾಗ ಮನೆಯವರು ಏನು ಕಾರಣ ನೀಡಿರಬಹುದು ಎಂಬ ಬಗ್ಗೆ ಕೃತಿಕಾ ಚರ್ಚಿಸಿದರು. ಹೀಗಾಗಿ ಬಿಗ್‍ಬಾಸ್, ಕೃತಿಕಾ ಕೂಡ ರೆಹಮಾನ್ ಅವರಂತೆ ಅನ್ನ ನೀರು ಬಿಟ್ಟು ಬೇರೆ ಯಾವುದೇ ಆಹಾರ ಸೇವಿಸಬಾರದು ಎಂಬ ಶಿಕ್ಷೆ ಕೊಟ್ಟಿದ್ದಾರೆ.
ಕಳೆದ ವಾರ ಇದೇ ರೀತಿ ನೇತ್ರಾ ಅವರು ನಾಮಿನೇಷನ್ ಬಗ್ಗೆ ಚರ್ಚಿಸಿದ ಕಾರಣಕ್ಕೆ ಮನೆಯ ನಾಯಕತ್ವ ಸ್ಥಾನದಿಂದ ಅವರನ್ನು ಕೆಳಗಿಳಿಸಿ ಬಿಗ್ ಬಾಸ್ ಅಯ್ಯಪ್ಪ ಅವರಿಗೆ ನಾಯಕ ಸ್ಥಾನವನ್ನು ನೀಡಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.