Breaking News
recent

ಹೊಸ ಹಾಡಿನ ಮೂಲಕ ಮತ್ತೆ ಮೋಡಿದ ಗಂಗ್‍ನಮ್ ಸ್ಟಾರ್

ಸಿಯೋಲ್: ಗಂಗ್‍ನಮ್ ಸ್ಟೈಲ್ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಕೊರಿಯನ್ ಪಾಪ್ ಸಿಂಗರ್ ಪಿಎಸ್‍ವೈ, ಓಪನ್ ಗಂಗ್‍ನಮ್ ಸ್ಟೈಲ್ ಹಾಡಿನ ಮೂಲಕ ಯುವಕರನ್ನು ಹುಚ್ಚೆಬ್ಬಿಸಿದ್ದರು.

ಅಷ್ಟೆ ಯಾಕೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಈ ಹಾಡಿಗೆ ಎಲ್ಲರೂ ಫ್ಯಾನ್ ಆಗಿಬಿಟ್ಟರು. 2012 ರಲ್ಲಿ ಬಿಡುಗಡೆಯಾದ ಈ ಹಾಡನ್ನು ಯೂಟೂಬಿನಲ್ಲಿ 250 ಕೋಟಿ ಬಾರಿ ವೀಕ್ಷಿಸಲಾಗಿತ್ತು.
ಇದೀಗ ಅದೇ ಗಂಗ್‍ನಮ್ ಖ್ಯಾತಿಯ ಪಿಎಸ್‍ವೈ, ಡ್ಯಾಡಿ ಮತ್ತು ನಪ್ಪಳ್ ಭಾಜಿ ಎಂಬ ಎರಡು ಹೊಸ ಹಾಡುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಐ ಗಾಟ್ ಇಟ್ ಫ್ರಮ್ ಮೈ ಡ್ಯಾಡಿ ಎಂಬ ಹಾಡಿನಲ್ಲಿ ಪಿಎಸ್‍ವೈ ಚಿಕ್ಕ ಮಗುವಿನ ವೇಷದಲ್ಲಿ, ವಯಸ್ಸಾದ ಅಪ್ಪನಂತೆ ಹೀಗೆ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ನಪ್ಪಳ್ ಭಾಜಿ ಹಾಡಿನ ವಿಚಿತ್ರವಾದ ಸಾಲುಗಳಿಗೆ ಬೆಲ್ ಬಾಟಮ್ ಪ್ಯಾಂಟ್ ತೊಟ್ಟು ಕುಣಿದಿದ್ದಾರೆ.
ಸೋಮವಾರ ಬಿಡುಗಡೆಯಾದ ಈ ಎರಡು ಹಾಡುಗಳಲ್ಲಿ ಡ್ಯಾಡಿ ಹಾಡನ್ನು ಈಗಾಗಲೇ 60 ಲಕ್ಷ ಬಾರಿ ವೀಕ್ಷಿಸಿದ್ದಾರೆ. ಜಗತ್ತಿನಾದ್ಯಂತ ಹಿಟ್ ಆಗಿದ್ದ ಗಂಗ್‍ನಮ್ ಹಾಡಿನಂತೆ ಈ ಹಾಡುಗಳೂ ಕೂಡ ಮೋಡಿ ಮಾಡಲಿದೆಯಾ ಎಂದು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.