Breaking News
recent

`ಆಸೆ ಇದ್ದರೆ ಸೆಕ್ಸ್ ಚಿತ್ರ ಮಾಡಲಿ'

ತುಪ್ಪದ ಬೆಡಗಿ ನಟಿ ರಾಗಿಣಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದ ‘ನಾಟಿ ಕೋಳಿ’ಚಿತ್ರದ ಪೋಟೋಶೂಟ್ ವಿವಾದ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ‘ನಾಟಿ ಕೋಳಿ’ ಚಿತ್ರದ ಹೆಸರೆತ್ತಿದ್ದರೆ ಸಾಕು, ರಾಗಿಣಿ, ‘ಹುಲಿ’ಯಂತೆ ಮೇಲೆಬಿಳುತ್ತಾರೆ.
`ಆಸೆ ಇದ್ದರೆ ಸೆಕ್ಸ್ ಚಿತ್ರ ಮಾಡಲಿ'

ಉರಿಯುವ ಬೆಂಕಿಗೆ ತುಪ್ಪ ಸುರಿದರು ಎನ್ನುವ ಹಾಗೆ, ನಿರ್ದೇಶಕ ಶ್ರೀನಿವಾಸ ರಾಜು ವಿರುದ್ಧ ಕೆಂಡಕಾರಿದ್ದಾರೆ. ‘ಆ ಚಿತ್ರದ ನಿರ್ಮಾಪಕ ವೆಂಕಟ್‌ರವರು ತುಂಬಾ ಒಳ್ಳೆಯವರು. ಇಲ್ಲಿ ತನಕ ಸ್ಯಾಂಡಲ್‌ವುಡ್‌ನಲ್ಲಿ ನಾನು ನಿರ್ಮಾಪಕರ ನಟಿಯಾಗಿ ಅಭಿನಯಿಸುತ್ತಾ ಬಂದಿದ್ದೇನೆ. ಅವರು ಒಪ್ಪಿದರೆ, ಈಗಲೂ ಆ ಚಿತ್ರದಲ್ಲಿ ಅಭಿನಯಿಸಲು ಸಿದ್ಧ. ಆದರೆ ನಿರ್ದೇಶಕ ಶ್ರೀನಿವಾಸರಾಜು ಹೊರ ಹೋದರೆ ಮಾತ್ರ’ಎನ್ನುತ್ತಾರೆ ರಾಗಿಣಿ.

‘ನಾಟಿ ಕೋಳಿ’ ಚಿತ್ರದ ನಿರ್ಮಾಪಕರ ವಿಚಾರದಲ್ಲಿ ಅನುಕಂಪ ಹೊಂದಿರುವ ರಾಗಿಣಿ, ನಿರ್ದೇಶಕ ಶ್ರೀನಿವಾಸರಾಜು ವಿರುದ್ಧ ಕೆಂಡಕಾರಿ ಮಸಾಲೆ ಅರೆಯುತ್ತಾರೆ. ‘ಪಬ್ಲಿಸಿಟಿಗಾಗಿ ನಾಯಕಿಯರನ್ನು ಕೆಟ್ಟದಾಗಿ ತೋರಿಸುವ ಆಸಕ್ತಿ ಇದ್ದರೆ, ಇಂಥವರು ಸೆಕ್ಸ್ ಚಿತ್ರಗಳನ್ನು ಮಾಡಲಿ, ಅದಕ್ಕೂ ಬೇಡಿಕೆ ಹೆಚ್ಚಿದೆ ’ ಎನ್ನುವ ಮೂಲಕ ಶ್ರೀನಿವಾಸರಾಜು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹುಲಿ ದೇವರ ಕಾಡು’ ಚಿತ್ರದ ಸಾಂಗ್ ರೆಕಾರ್ಡಿಂಗ್ ಪೂಜೆಯ ವೇಳೆ ಮಾತಿಗೆ ಸಿಕ್ಕ ರಾಗಿಣಿ, ‘ನಾಟಿ ಕೋಳಿ‘ ಚಿತ್ರದ ವಿಚಾರದ ಬಂದಾಗ ಸಿಡಿದೆದ್ದರು.‘ಆ ದಿನ ಶೀತನ್ ಜೈನ್ ಸ್ಟುಡಿಯೋದಲ್ಲಿ ಏನು ನಡೆಯಿತೋ ನನಗೂ ಗೊತ್ತಿಲ್ಲ. ಸ್ಟುಡಿಯೋ ಒಳಗಡೆ ನಾನಿದ್ದೆ. ಹೊರಗಡೆ ಬಂದಾಗ ಗಲಾಟೆ ನಡೆಯುತ್ತಿತ್ತು.ಆ ನಂತರವೇ ನನಗೂ ಗೊತ್ತಾಗಿದ್ದು ’ಎಂದು ಘಟನೆಯ ವಿವರ ನೀಡಿದರು.

‘ಇಂಡಸ್ಟ್ರಿಯಲ್ಲಿ ಕೆಲವರು ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಕಾಣುತ್ತಾರೆ. ಪಬ್ಲಿಸಿಟಿಗಾಗಿ ಏನ್ ಮಾಡೋದಿಕ್ಕೂ ಇವರು ಅಂಜುವುದಿಲ್ಲ. ನನ್ನ ವಿಚಾರದಲ್ಲೂ ನಿರ್ದೇಶಕ ಶ್ರೀನಿವಾಸರಾಜು ಹೀಗೆ ನಡೆದುಕೊಂಡಿದ್ದಾರೆ. ಕಥೆಗೆ ತಕ್ಕಂತೆ ಪೋಟೋ ನಡೆಸಲು ನಾನು ಒಪ್ಪಿಕೊಂಡಿದ್ದು ನಿಜ. ಆದರೆ ಪೋಟೋಶೂಟ್‌ನಲ್ಲಿ ಎಡಿಟ್ ಆಗದ ಪೋಟೋಗಳನ್ನು ಮೀಡಿಯಾಗಳಿಗೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಅಗತ್ಯವಿರಲಿಲ್ಲ. ಇದನ್ನು ಅವರು ಯಾಕಾಗಿ ಮಾಡಿದರು? ಚಿತ್ರದ ಪ್ರಚಾರಕ್ಕೆ ಬೇಕಿದ್ದರೆ ಎಡಿಟ್ ಮಾಡಿದ ಪೋಟೋಗಳನ್ನೇ ನೀಡಬಹುದಿತ್ತು. ಅವರ ಉದ್ದೇಶ ಅದು ಆಗಿರಲಿಲ್ಲ. ನನ್ನ ಇಮೇಜ್‌ಗೆ ಧಕ್ಕೆ ತರುವುದೇ ಆಗಿತ್ತು. ಇದು ನನಗೆ ಬೇಸರ ತಂದಿತ್ತು’ ಎಂದು ಸ್ಪಷ್ಟನೆ ನೀಡಿದರು ರಾಗಿಣಿ. ಒಂದು ಹಂತದಲ್ಲಿ ನಿರ್ದೇಶಕ ಶ್ರೀನಿವಾಸ ರಾಜು ಅವರನ್ನು ರಾಗಿಣಿ ‘ಚೀಟೆಡ್ ’ಎಂದು ಝರಿದರು.

ನಿರ್ದೇಶಕ ಶ್ರೀನಿವಾಸರಾಜು ಅವರು ‘ದಂಡು ಪಾಳ್ಯ’ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಅವರನ್ನು ಅರೆಬೆತ್ತಲೆಯಾಗಿ ತೋರಿಸಿದ್ದಾಗಲೂ ನೀವು ಅವರ ನಿರ್ದೇಶನದ ‘ನಾಟಿ ಕೋಳಿ’ಗೆ ಒಪ್ಪಿದ್ದು ಯಾಕೆ? ಒಪ್ಪಿಕೊಳ್ಳುವಾಗ ಅದರ ಅರಿವಿರಲಿಲ್ಲವೇ? ಎನ್ನುವ ಪ್ರಶ್ನೆಗೆ ರಾಗಿಣಿ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ‘ ನಟಿ ಪೂಜಾ ಗಾಂಧಿ ಒಳ್ಳೆಯ ನಟಿ. ಅವರಿಗೂ ಬೇಸರವಾಗಿರಬಹುದು. ನನಗೆ ಕಥೆ ಹೇಳುವಾಗ ಇದೆಲ್ಲವೂ ಇರಲಿಲ್ಲ. ಸಾಮಾನ್ಯವಾಗಿ ಕಥೆ ಕೇಳುವಾಗ ಅದರ ಬೇಡಿಕೆಗೆ ತಕ್ಕಂತೆ ಅಗತ್ಯತೆಗಳನ್ನು ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಚಿತ್ರದ ವಿಚಾರದಲ್ಲೂ ಅಷ್ಟೇ ಗ್ಲಾಮರಸ್ ಪಾತ್ರ ಎನ್ನುವುದು ಇತ್ತಾದರೂ, ಪೋಟೋ ಶೂಟ್‌ಗಳನ್ನು ಆ ರೀತಿ ಬಳಸಿಕೊಳ್ಳುವ ಅಗತ್ಯವಿರಲಿಲ್ಲ’ ಎನ್ನುವುದು ರಾಗಿಣಿ ಮಾತು.

ಈ ವಿವಾದದಲ್ಲಿ ರಾಗಿಣಿ ಇಮೇಜ್ ಹಾಳಾಗಿಲ್ಲವೇ? ಎನ್ನುವುದಕ್ಕೂ ರಾಗಿಣಿ ಬಳಿ ಉತ್ತರವಿತ್ತು.‘ ನನ್ನ ಇಮೇಜ್ ಖಂಡಿತವಾಗಿಯೂ ಹಾಳಾಗಿಲ್ಲ. ಬದಲಿಗೆ ಜನತೆಯ ಮುಂದೆ ನಾನೇನು ಎನ್ನುವುದು ಗೊತ್ತಾಗಿದೆ. ಇಂಥ ಘಟನೆಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ’ ಎಂದು ಸಮರ್ಥಿಸಿಕೊಂಡರು. ಒಟ್ಟಿನಲ್ಲಿ ಗಾಂಧಿನಗರದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ‘ನಾಟಿಕೋಳಿ’ ಈಗಲೂ ಬಡಿದಾಡುತ್ತಿದೆ.


`ಆಸೆ ಇದ್ದರೆ ಸೆಕ್ಸ್ ಚಿತ್ರ ಮಾಡಲಿ'
http://www.freshkannada.com/2015/12/blog-post_73.html

'ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?
http://www.freshkannada.com/2015/12/blog-post_39.html

ಸ್ಯಾಂಡಲ್‍ವುಡ್ ನಟಿ ರಾಗಿಣಿ ವಿರುದ್ಧ ದೂರು
http://www.freshkannada.com/2015/12/blog-post_14.html


Fresh Kannada

Fresh Kannada

No comments:

Post a Comment

Google+ Followers

Powered by Blogger.