Breaking News
recent

ಬಿಗ್‍ಬಾಸ್ ಸ್ಪರ್ಧಿಯಾಗಲು ಶಿವಣ್ಣ ರೆಡಿ!

ಶಿವಣ್ಣ ಬಿಗ್ ಬಾಸ್‍ಗೆ ಹೋಗಲು ರೆಡಿ ಎಂದಿದ್ದಾರೆ. ಕನ್‍ಫ್ಯೂಸ್ ಆಗಬೇಡಿ. ಈ ಮಾತನ್ನು ಸ್ವತಃ ಶಿವಣ್ಣನೇ ಹೇಳಿದ್ದಾರೆ. ಆದ್ರೆ ನಾನು ಪಾಲ್ಗೊಳ್ಳುವ ಬಿಗ್‍ಬಾಸ್ ಸ್ಪರ್ಧೆಯಲ್ಲಿ ಯಾರನ್ನೂ ಎಲಿಮಿನೇಟ್ ಮಾಡಬಾರದು. ಮೂರು ತಿಂಗಳು ಎಂಜಾಯ್ ಮಾಡಬೇಕು ಎನ್ನುವ ವಿಶೇಷ ಕಂಡೀಷನ್ ಹಾಕಿದ್ದಾರೆ.
bigg boss 3 kannada shivarajkumar

ವಾರಾಂತ್ಯದ ಸಂಚಿಕೆಗೆ ಅಥಿತಿಯಾಗಿ ಬಂದಿದ್ದ ನಟ ಶಿವರಾಜ್ ಕುಮಾರ್ ಬಿಗ್‍ಬಾಸ್ ಮನೆಗೆ ಹೋಗುವುದಾದರೆ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಯಶ್, ಪುನೀತ್ ರಾಜ್‍ಕುಮಾರ್ ಮತ್ತು ನಟಿಯರಾದ ರಮ್ಯಾ, ಮಾಲಾಶ್ರೀ, ರಾಧಿಕಾ ಪಂಡಿತ್ ಎಲ್ಲರೂ ಇರಬೇಕು. ಆಗ ಆಟದ ಮಜವೇ ಬೇರೆ ಎಂದರು.
ಅಲ್ಲದೆ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲಾ ಒಂದೇ ಮನೆಯಲ್ಲಿದ್ದರೆ ಹೇಗಿರಬಹುದು ಎಂದು ಶಿವರಾಜ್‍ಕುಮಾರ್ ಕಲ್ಪನೆ ಮಾಡಿಕೊಂಡರು. ಎಲ್ಲರೂ ಒಂದೇ ಮನೆಯಲ್ಲಿ ಇರುವುದು, ಒಟ್ಟಿಗೆ ಟಾಸ್ಕ್ ಮಾಡುವುದು ಊಹಿಸಿಕೊಂಡರೆ ಮಜ ಎನಿಸುತ್ತದೆ ಎಂದು ಹೇಳಿದರು.
ಮೂರು ತಿಂಗಳು ಚಿತ್ರೋದ್ಯಮ ಬಂದ್!
ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಸುದೀಪ್, ಹಾಗೇನಾದರೂ ಆದರೆ ಅಭಿಮಾನಿಗಳೆಲ್ಲಾ ನಮ್ಮೆಲ್ಲರಿಗೂ ಸಮಾನವಾಗಿ ಮತ ಹಾಕಿ ಮನೆಯಲ್ಲೇ ಉಳಿಸುತ್ತಾರೆ. ನಮ್ಮಲ್ಲಿ ಯಾರೂ ಎಲಿಮಿನೇಟ್ ಆಗುವುದೇ ಇಲ್ಲ. ಮೂರು ತಿಂಗಳು ಕನ್ನಡ ಚಿತ್ರರಂಗ ಬಂದ್ ಮಾಡಿ ಬಿಗ್‍ಬಾಸ್ ಮನೆಯೊಳಗೆ ಹೋಗುವುದು ಎಂದು ನಿಮ್ಮ ಅಭಿಪ್ರಾಯವೇ ಎಂದು ಹಾಸ್ಯ ಮಾಡಿದರು.
ಇವರ ಈ ಮಾತಿಗೆ ದನಿಗೂಡಿಸಿದ ನಿರ್ದೇಶಕ ದಿನಕರ್ ತೂಗುದೀಪ್, ನಿಮ್ಮೆಲ್ಲರನ್ನೂ ಒಟ್ಟಿಗೆ ನೋಡಿದರೆ ಟಿವಿಗೆ ಬೆಂಕಿ ಹತ್ತಿಕೊಳ್ಳಬಹುದು. ನೋಡುತ್ತಿರುವುದು ನಿಜವೋ ಸುಳ್ಳೋ ಎನ್ನುವುದೇ ತಿಳಿಯುವುದಿಲ್ಲ. ಒಂದು ಗಂಟೆ ಕಾರ್ಯಕ್ರಮ ಮುಗಿಯುವವರೆಗೆ ಜನ ಟಿವಿ ಬಿಟ್ಟು ಕದಲುವುದಿಲ್ಲ ಎಂದರು.
ಶಿವರಾಜ್ ಕುಮಾರ್ ಅವರು ಹೇಳಿದ ಹಾಗೆ ಈ ಎಲ್ಲಾ ಘಟಾನುಘಟಿ ನಟರು ಬಿಗ್‍ಬಾಸ್ ಮನೆಗೆ ಹೋದರೆ ಹೇಗಿರಬಹುದು ಎಂದು ಊಹಿಸಿಕೊಂಡರೆ ರೋಮಾಂಚನವಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇವರಲ್ಲಿ ಒಬ್ಬರಾದರೂ ಬಿಗ್‍ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರವೇಶ ಮಾಡುತ್ತಾರಾ ಎಂದು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.