Breaking News
recent

ಬಿಗ್‍ಬಾಸ್ ಮನೆಯಲ್ಲಿ ಇದ್ದವರಲ್ಲಿ ಕದ್ದವರು ಯಾರು?

ಬಿಗ್‍ಬಾಸ್ ಮಂದಿಗೆ ವಾರಕ್ಕೊಂದು ಲಕ್ಸುರಿ ಬಜೆಟ್ ಟಾಸ್ಕ್ ಸಿಗುತ್ತಿರುತ್ತದೆ. ಅದರಂತೆ ಈ ವಾರ ಸ್ಪರ್ಧಿಗಳಿಗೆ ಸಿಕ್ಕಿರುವ ಟಾಸ್ಕ್ ಕಳ್ಳ ಪೊಲೀಸ್.

ಈ ಟಾಸ್ಕಿನಲ್ಲಿ ಗೌತಮಿ ಮುಖ್ಯ ಪೊಲೀಸ್ ಅಧಿಕಾರಿಯಾದರೆ, ರೆಹಮಾನ್ ಮತ್ತು ಅಯ್ಯಪ್ಪ ಪೇದೆಗಳಾಗಿ ಖಾಕಿ ಖದರ್ ತೋರಿಸುತ್ತಿದ್ದಾರೆ. ಹಾಗೆ ಚಂದನ್, ಶೃತಿ ಮತ್ತು ಆನಂದ್ ಬಿಗ್‍ಬಾಸ್ ಸೂಚನೆಯಂತೆ ಮನೆಯವರ ಕೆಲವು ವಸ್ತುಗಳನ್ನು ಕದ್ದು ಕಳ್ಳರಾಗಿದ್ದಾರೆ.
ಕೃತಿಕಾ ಭಾವನಾ ಮತ್ತು ಮಿತ್ರಾ ಜನಸಮಾನ್ಯರಾಗಿ ಪೊಲೀಸರ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಾ ತನಿಖೆ ದಿಕ್ಕು ತಪ್ಪುವಂತೆ ಮಾಡುತ್ತಿದ್ದಾರೆ. ಇನ್ನು ಉಳಿದ ಸ್ಪರ್ಧಿಗಳಾದ ನೇತ್ರಾ, ಪೂಜಾ ಮತ್ತು ಸುನಾಮಿ ಕಿಟ್ಟಿ ಕಳ್ಳರು ಯಾರು? ಜನಸಾಮಾನ್ಯರು ಯಾರು ಎಂದು ತಿಳಿಯದೆ ತಬ್ಬಿಬ್ಬಾಗಿದ್ದಾರೆ.
ಈ ಕಳ್ಳ ಪೊಲೀಸ್ ಆಟದಲ್ಲಿ ಚಂದನ್ ಮತ್ತು ರೆಹಮಾನ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪೊಲೀಸರಿಗೆ ಕಳ್ಳರು ಲಂಚ ಕೊಟ್ಟಿದ್ದೂ ಆಯಿತು. ಮುಂದೆ ಬಿಗ್‍ಬಾಸ್ ಮನೆಯ ಪೊಲೀಸರು ನಿಜವಾದ ಕಳ್ಳ ಯಾರು ಎಂದು ಪತ್ತೆ ಹಚ್ಚಿ ಜನಸಾಮಾನ್ಯರಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.