Breaking News
recent

'ಎದೆಗಾರಿಕೆ' ಬಗ್ಗೆ ಸುಮನಾ ಕಿತ್ತೂರು ಜೊತೆ ಬೆಳ್ಳಿ ಮಾತು

ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ (ಡಿಸೆಂಬರ್ 05) 'ಎದೆಗಾರಿಕೆ' ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು ಅವರು 'ಬೆಳ್ಳಿಮಾತು' ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
 'ಎದೆಗಾರಿಕೆ' ಬಗ್ಗೆ ಸುಮನಾ ಕಿತ್ತೂರು ಜೊತೆ ಬೆಳ್ಳಿ ಮಾತು

ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

'ಭೂಗತ ಜಗತ್ತಿನ ಘಟನೆಗಳನ್ನು ಹೆಣೆಯಲಾದ 'ಎದೆಗಾರಿಕೆ' ಕಥೆಯಲ್ಲಿ ಕೊಲ್ಲುವವನ ಮತ್ತು ಸಾಯಲಿಕ್ಕೆ ಬಂದವನ ನಡುವಿನ ವಾಸ್ತವ ವಿಚಾರಗಳನ್ನು ತೋರುವ ಚಿತ್ರ, ಪತ್ರಕರ್ತ ಮತ್ತು ಚಿಂತಕ ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ' ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಅನಾಥನೊಬ್ಬನ ಬದುಕಿನಲ್ಲಿ ಜರುಗುವ ತವಕ-ತಲ್ಲಣಗಳನ್ನು ಚಿತ್ರಿಸುತ್ತದೆ.

ಕಾದಂಬರಿ ಆಧರಿಸಿ ತಯಾರಾದ 'ಎದೆಗಾರಿಕೆ' ಚಿತ್ರ 2012ನೇ ಸಾಲಿನ ತೃತೀಯ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದೆ.

'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಈ ವಾರದ ಕಾರ್ಯಕ್ರಮ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಗಸ್ಟ್ 8 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದು, ನಿರ್ದೇಶಕಿ ಸುಮನಾ ಕಿತ್ತೂರು, ನಟ ಆದಿತ್ಯ, ಧರ್ಮ, ನಿರ್ಮಾಪಕರಾದ ಎಂ.ಎಸ್. ರವೀಂದ್ರ ಅವರು ಉಪಸ್ಥಿತರಿರುತ್ತಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.