Breaking News
recent

ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು

ನಾನು ಡಾ ರಾಜ್ ಕುಮಾರ್ ಅಲ್ಲ. ಡಾ ರಾಜ್ ಅವರ ಮಗ ಅಷ್ಟೇ, ದಯಮಾಡಿ ನನ್ನನ್ನು ಡಾ ರಾಜ್ ಅವರಿಗೆ ಹೋಲಿಸಬೇಡಿ. ಈ ರೀತಿ ಭಾವುಕರಾಗಿ ಪ್ರತಿಕ್ರಿಯಿಸಿದವರು ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್.
Shiva Rajkumar

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸೋಮವಾರ (ನವೆಂಬರ್ 30) ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಸಮಾರಂಭದ ಸಂವಾದದಲ್ಲಿ ಡಾ ಶಿವರಾಜ್ ಕುಮಾರ್ ಅವರು ಪಾಲ್ಗೊಂಡು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.

ಡಾ ರಾಜ್ ಅವರು ಪಕ್ಷಾತೀತವಾಗಿದ್ದರು. ಹಾಗೆ ತಾವು ಕೂಡ ಪಕ್ಷಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದೀರಿ. ಆದರೆ, ನೀವು ನಿಮ್ಮ ಪತ್ನಿಯನ್ನು ಚುನಾವಣಾ ಕಣಕ್ಕೆ ಏಕೆ ಇಳಿಸಿದಿರಿ? ಎಂಬ ಪ್ರೇಕ್ಷಕರೋರ್ವರ ನೇರ ಪ್ರಶ್ನೆಗೆ ಉತ್ತರಿಸಿದ ಡಾ ಶಿವರಾಜ್ ಕುಮಾರ್ ಅವರು ಚುನಾವಣೆಯಲ್ಲಿ ಪತ್ನಿಯ ಸೋಲು-ಗೆಲುವಿನ ಬಗ್ಗೆ ಚಿಂತಿಸುವುದಿಲ್ಲ.

ನಾನು ಸತ್ತರೂ ಸಂತೋಷದಿಂದ ಸಾಯಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಸಾಯಬೇಕು. ಪತ್ನಿಯೂ ಸೇರಿದಂತೆ ಯಾರ ಮನಸ್ಸು ನೋಯಿಸಬಾರದು ಎಂಬ ಕಾರಣಕ್ಕೆ ಗಂಡನಾಗಿ ನನ್ನ ಪತ್ನಿ ಗೀತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು. ಮುಂದೆ ಓದಿ..

Shiva Rajkumar


1. ಮದರಾಸಿನ ಕಾಲೇಜು ದಿನಗಳು 
ಮದರಾಸಿನಲ್ಲಿ ಕಾಲೇಜಿನಲ್ಲಿ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ವಾತಾವರಣದ ಬಗ್ಗೆ ಬಾಲ್ಯದ ಗೆಳೆಯ ಚಿ. ಗುರುದತ್ ಅವರು ಪ್ರಶ್ನಿಸಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಮನೆಯಲ್ಲಿನ ವಾತಾವರಣ ಚೆನ್ನಾಗಿತ್ತು, ಜಾತಿ-ವರ್ಗದ ಅರಿವೇ ಇರಲಿಲ್ಲ. ಅದಕ್ಕೇ ಇಂದಿಗೂ ನಾವೆಲ್ಲರೂ ಚೆನ್ನಾಗಿದ್ದೇವೆ, ಎಂದು ಶಿವಣ್ಣ ನುಡಿದರು.

2. ಬಸ್ಸಲ್ಲಿ ಕಾಲೇಜಿಗೆ ಹೋಗುತ್ತಿದ್ದ ಶಿವಣ್ಣ 
ಹಿರಿಯ ನಟನ ಮಗನಾಗಿಯೂ ಸಾಮಾನ್ಯನಂತೆ ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ದಿನಗಳ ನೆನಪಿನ ಬುತ್ತಿಯನ್ನು ಬಿಚ್ಚಿಡುವಂತೆ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ತಿಳಿಸಿದಾಗ, ಅವೆಲ್ಲವೂ ನನ್ನ ಹೃದಯದ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಟ್ಟುಕೊಂಡಿರುವ ಸಂಗತಿಗಳು ಎಂದರಲ್ಲದೆ, ಹುಡುಗಿಯೊಬ್ಬಳು ಟೈಮ್ ಕೇಳಿದಾಗ, ಕೈ ಗಡಿಯಾರ ನೋಡಿ ವಾಚ್ ಓಡುತ್ತಿಲ್ಲ ಎಂದು ತುಂಟ ಉತ್ತರ ಕೊಟ್ಟಿದ್ದನ್ನು ತಮ್ಮ ನೆನಪಿನಂಗಳದಿಂದ ಹೊರಹಾಕಿದರು ಶಿವಣ್ಣ.

3. ಕನ್ನಡ ಚಿತ್ರರಂಗದ ಮಾನ್ಯತೆಗೆ ಡಾ.ರಾಜ್ ಕಾರಣ 
ಕನ್ನಡ ಚಿತ್ರರಂಗಕ್ಕೆ ವಿಶ್ವ ವ್ಯಾಪಿ ಮಾನ್ಯತೆ ದೊರೆಯಲು ಡಾ ರಾಜ್ ಕುಮಾರ್ ಅವರೇ ಕಾರಣ ಎಂದ ಅವರು ತಮ್ಮ ತಂದೆ ಡಾ ರಾಜ್ ಅವರ ಯಶಸ್ಸಿನ ಹಿಂದೆ ತಾಯಿ ಡಾ ಪಾರ್ವತಮ್ಮ ರಾಕ್ ಕುಮಾರ್ ಅವರು ಇದ್ದಂತೆ, ತಮ್ಮ ಯಶಸ್ಸಿನ ಹಿಂದೆ ಪತ್ನಿ ಗೀತಾ ಅವರ ಪಾಲು ಇದೆ. ಗೀತಾ ತಮ್ಮ ಬಾಳಲ್ಲಿ ಬೆಳಕು ತಂದಿದ್ದಾರೆ ಎಂದು ಹೇಳಲು ಮರೆಯಲಿಲ್ಲ.

4. ಸ್ನೇಹದ ಅರ್ಥ ಏನು ? 
ಇದು ಶಿವಣ್ಣ ಅವರಿಗೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಅವರ ಪ್ರಶ್ನೆ. ಮದುವೆಯಾದ ಮೇಲೂ ಗೆಳೆಯರೊಂದಿಗೆ ಸ್ನೇಹ ಮುಂದುವರೆಯಲೇಬೇಕು. ಹೆಂಡತಿಯೊಂದಿಗೆ ಒಡನಾಟ ಮತ್ತು ಗೆಳೆಯನೊಂದಿಗೆ ಸ್ನೇಹ ಎರಡೂ ರೈಲ್ವೇ ಹಳಿಯಂತೆ, ಸಮಾನಾಂತರವಾಗಿ ಮುಂದುವರೆಯಬೇಕು. ಎಂದು ಶಿವಣ್ಣ ಉತ್ತರಿಸಿದರು.

5. ಬಾಂಧವ್ಯಕ್ಕೆ ಬೆಲೆ ಕೊಡುತ್ತಿದ್ದ ಶಿವಣ್ಣ 
15 ದಿನ ಮೈಸೂರಿನಲ್ಲಿ ಶೂಟಿಂಗ್ ಇದ್ದಾಗಲೂ, ಮಗಳ ಪರೀಕ್ಷೆಯ ಸಂದರ್ಭದಲ್ಲಿ ಶಿವಣ್ಣ ಪ್ರತಿದಿನವೂ ಬೆಂಗಳೂರಿಗೆ ಬರುತ್ತಿದ್ದರಂತೆ. ಯಾರೇ ಆಗಲಿ ಸಂಸಾರಕ್ಕೂ ಟೈಮ್ ಕೊಡಬೇಕು. ಬಾಂಧವ್ಯಕ್ಕೂ ಬೆಲೆ ಕೊಡಬೇಕು. ಇದನ್ನು ನಾನು ಅಪ್ಪಾಜಿಯಿಂದ ಕಲಿತೆ ಎಂಬುದು ಶಿವಣ್ಣನ ಸ್ಪಷ್ಟ ಉತ್ತರ.

6. ತಾಲೀಮು ಇಲ್ಲದೆ ನೃತ್ಯ ! 
ಸ್ಟೂಡಿಯೋ ಒಂದರಲ್ಲಿ ಸ್ಟೂಡಿಯಸ್ಸಾಗಿ ನೃತ್ಯ ಮಾಡುತ್ತಿದ್ದ ಶಿವಣ್ಣನನ್ನು ಕಂಡ ಹಿಂದಿಯ ಜನಪ್ರಿಯ ನಟ ಸಂಜಯ್ ದತ್ ಅವರು ನೀವು ಎಷ್ಟು ದಿನಗಳು ತಾಲೀಮು ಮಾಡಿದ್ದೀರಿ ಎಂದರಂತೆ. ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದೆ ಎಂಬ ಶಿವಣ್ಣನ ಉತ್ತರಕ್ಕೆ ಸಂಜಯ್ ದತ್ ನಿಬ್ಬೆರಗಾದರಂತೆ.

7. ಕ್ರಿಕೆಟರ್ ಆಗದ್ದಕ್ಕೆ ನಟ 
ಶಿವರಾಜ್ ಕುಮಾರ್ ಅವರು ಕ್ರಿಕೆಟ್ ಪಟು ಆಗಬೇಕಿತ್ತಂತೆ, ಆಯ್ಕೆಯಲ್ಲಿ ನಡೆದ ರಾಜಕೀಯ ಶಿವಣ್ಣನನ್ನು ಕ್ರಿಕೆಟರ್ ಮಾಡಲಿಲ್ಲ ನಿಜ. ಆದರೆ ಉತ್ತಮ ನಟನಾದೆ ಎಂದರು. ಇದು ಸಂವಾದದಲ್ಲಿ ಬಹಿರಂಗಗೊಂಡ ಸತ್ಯ ಸಂಗತಿ.

8. ಯಾರ ಅಭಿನಯವನ್ನು ಅನುಕರಿಸಿದ ಶಿವಣ್ಣ 
ಅಮಿತಾಭ್ ಬಚ್ಚನ್ ಅಭಿಮಾನಿ, ಕಮಲ್ ಹಾಸನ್ ಅಂದ್ರೆ ತಮಗೆ ಪ್ರಾಣ ಎಂದು ಹೇಳಿದ ಶಿವಣ್ಣ, ಯಾರ ಅಭಿನಯವನ್ನೂ ಅನುಕರಿಸಲಿಲ್ಲವಂತ.. ಸ್ವಂತಿಕೆಯನ್ನೇ ನಂಬಿದ್ದೇನೆ ಎಂದರು. ಶಿವಣ್ಣನಿಗೆ ಮೊದಲು ಆಹ್ವಾನ ಬಂದದ್ದು ಮಲೆಯಾಳಂ ಚಿತ್ರದಲ್ಲಿನ ಅಭಿನಯಕ್ಕೆ. ಇದನ್ನು ನಯವಾಗಿ ತಿರಸ್ಕರಿಸಿದ ಶಿವಣ್ಣ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯವನ್ನು ಕಲಿತು, ಕುಚಿಪುಡಿ ನೃತ್ಯ ಕಲಿತು ಕನ್ನಡ ಚಿತ್ರರಂಗದಲ್ಲಿ ದೊಡ್ಡ ತಾರೆಯಾದದ್ದು ಇದೀಗ ಇತಿಹಾಸ.

9. ಏಟು ತಿಂದದ್ದಕ್ಕೆ ದುಃಖ ಆಗಲಿಲ್ಲ ! 
ಎಲ್ಲರಂತೆ ಶಿವಣ್ಣ ಕೂಡಾ ತಮ್ಮ ತಂದೆ ಡಾ.ರಾಜ್ ಅವರಿಂದ ಒಮ್ಮೆ ಏಟು ತಿಂದಿದ್ದರಂತೆ. ಆದರೆ ತಾವು ಏಟು ತಿಂದದ್ದಕ್ಕೆ ದುಃಖ ಆಗಲಿಲ್ಲ. ನನ್ನನ್ನು ಹೊಡೆದ ನಂತರ ಅಪ್ಪಾಜಿ ಊಟ ಮಾಡಲಿಲ್ಲ. ಅದಕ್ಕಾಗಿ ದುಃಖವಾಯಿತು ಎಂಬ ತಮ್ಮ ಖಾಸಗಿ ಬದುಕನ್ನೂ ಶಿವಣ್ಣ ಪ್ರೇಕ್ಷಕರ ಮುಂದೆ ಹಂಚಿಕೊಂಡರು.

10. ಸಲಹೆ ಸ್ವೀಕರಿಸಿದ ಶಿವಣ್ಣ 
ಇತರೆ ಭಾಷೆಗಳಂತೆಯೇ ಕನ್ನಡ ಚಿತ್ರರಂಗದಲ್ಲೂ ಬಹುತಾರಾ ಚಿತ್ರಗಳು ಬರಬೇಕು ಎಂಬ ಹಿರಿಯ ನಟಿ ಶ್ರೀಮತಿ ಬಿ. ಸರೋಜಾ ದೇವಿ ಅವರ ಸಲಹೆಯನ್ನು ಮುಕ್ತವಾಗಿ ಸ್ವೀಕರಿಸಿ, ಪಾಲಿಸುವುದಾಗಿ ಶಿವಣ್ಣ ಭರವಸೆ ನೀಡಿದರು. ಶಿವಣ್ಣ ಅವರು ಅತಿ ವೇಗದಲ್ಲಿ ವಾಹನವನ್ನು ಚಲಿಸುತ್ತಾರೆ ಎಂದು ನಟಿ ಸುಧಾರಾಣಿ ಹೇಳಿದ್ದಕ್ಕೆ, ವೇಗಕ್ಕೆ ಮಿತಿ ಇರಲಿ ಎಂಬ ಹಿರಿಯ ನಿರ್ದೇಶಕ ಶ್ರೀ ಎಸ್. ಕೆ. ಭಗವಾನ್ ಅವರ ಸಲಹೆಯನ್ನೂ ಶಿವಣ್ಣ ಸ್ವೀಕರಿಸಿದರು.

11. 'ಆನಂದ'ದ ಜೀವನ 
ಚಿತ್ರ ಬದುಕಿಗೆ ಪ್ರವೇಶಿಸಿದ ಮೊದಲ ದಿನದ ಮೊದಲ ಕ್ಷಣ ಭಯ ಮೂಡಿಸಿತ್ತಾದರೂ, ಆನಂದ್ ಎಂಬ ಹೆಸರು ಕೊಟ್ಟು 'ಆನಂದ್' ಚಿತ್ರವನ್ನು ನಿರ್ದೇಶಿಸಿದ ಸಿಂಗೀತಂ ಶ್ರೀನಿವಾಸರಾವ್ ಅವರ ಕೃಪೆಯಿಂದ ನಾನು 'ಆನಂದ'ವಾಗಿದ್ದೇನೆ. ಆ ಚಿತ್ರದ ಚಿತ್ರೀಕರಣ ನನಗೆ ಒಂದು ಪಿಕ್ ನಿಕ್ ಅನುಭವವನ್ನು ನೀಡಿತು ಎಂದು ತಿಳಿಸಿದ ಶಿವಣ್ಣ, ತಮ್ಮ ಮೊದಲ ಚಿತ್ರ 'ಆನಂದ್' ನ ನಾಯಕಿ ಸುಧಾರಾಣಿ ಅವರನ್ನು ಅತ್ಯುತ್ತಮ ನಟಿ ಎಂದು ಬಣ್ಣಿಸಿದರು.

12. ಮಗಳ ಮದುವೆ ಹೋಟೆಲ್ ನಲ್ಲಿ ಊಟ 
ತಮ್ಮ ಮಗಳ ಮದುವೆಗೆ ಎಲ್ಲಾ ಅಭಿಮಾನಿಗಳಿಗೆ ಹೃದಯ ಪೂರ್ವಕವಾಗಿ ಆಮಂತ್ರಣ ನೀಡಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ಹಾಕಿದ್ದ ಶಿವಣ್ಣ ಆ ದಿನ ತಮಗೆ ಊಟ ದೊರೆಯದೆ, ಹೋಟೆಲ್ ಹೋಗಿ ಊಟ ಮಾಡಿದ್ದಾರೆ. ಏನೂ ಬೇಜಾರಿಲ್ಲ ಬಿಡಿ, ನನ್ನ ಮದುವೆಯ ಸಂದರ್ಭದಲ್ಲೂ ಅಪ್ಪಾಜಿಗೆ ಊಟ ದೊರೆತಿರಲಿಲ್ಲ ಎಂದರು ಶಿವಣ್ಣ. ಆ ಸಂದರ್ಭದಲ್ಲಿ ಚರಿತ್ರೆ ಪುನರಾವರ್ತನೆಗೊಂಡಿದೆ, ಎಂಬ ನಿರೂಪಕರ ಮಾತಿಗೆ ಶಿವಣ್ಣ ನಗು ನಗುತ್ತಲೇ ತಲೆದೂಗಿದರು.

ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು
http://www.freshkannada.com/2015/12/blog-post_66.html

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಜ್ಜ ಆದಾಗ..!
http://www.freshkannada.com/2015/12/blog-post_38.html

Killing Veerappan (2015) Kannada Movie Songs Free Download
http://www.freshkannada.com/2015/11/killing-veerappan-2015-kannada-movie.html

Killing Veerappan Kannada Movie Spot Spot Video Teaser
http://www.freshkannada.com/2015/11/killing-veerappan-kannada-movie-spot.html

'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ
http://www.freshkannada.com/2015/09/blog-post_28.html

Killing Veerappan Kannada Movie Theatrical Trailer
http://www.freshkannada.com/2015/07/killing-veerappan-kannada-movie.html

Upcoming Movies Of Hatrick Hero Shivarajkumar
http://www.freshkannada.com/2015/07/upcoming-movies-of-hatrick-hero.html

'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು
http://www.freshkannada.com/2015/10/10.html

ಶಿವಣ್ಣ ಓಕೆ ಅಂದ್ರು ; ಮಧು ಬಂಗಾರಪ್ಪ ಬೇಡ ಅಂದ್ರು.!
http://www.freshkannada.com/2015/10/blog-post_91.html

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?
http://www.freshkannada.com/2015/10/blog-post_79.html

Killing Veerappan Kannada Movie Spot Spot Video Teaser
http://www.freshkannada.com/2015/11/killing-veerappan-kannada-movie-spot.html

Killing Veerappan Kannada Movie Trailer 2
http://www.freshkannada.com/2015/10/killing-veerappan-kannada-movie-trailer.html

ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್
http://www.freshkannada.com/2015/10/2.html

ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್'
http://www.freshkannada.com/2015/09/6.html

'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ
http://www.freshkannada.com/2015/09/blog-post_28.html

ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?
http://www.freshkannada.com/2015/08/blog-post_25.html

ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದಲ್ಲಿ ಪಾರುಲ್ ಯಾದವ್‍ಗೆ ಗಾಯ
http://www.freshkannada.com/2015/08/blog-post_5.html

Killing Veerappan Kannada Movie Theatrical Trailer
http://www.freshkannada.com/2015/07/killing-veerappan-kannada-movie.html

Upcoming Movies Of Hatrick Hero Shivarajkumar
http://www.freshkannada.com/2015/07/upcoming-movies-of-hatrick-hero.html

Killing Veerappan  Kannada Movie Reviews, Killing Veerappan  Movie Reviews, Killing Veerappan  songs Reviews, Killing Veerappan  Reviews, Killing Veerappan  Reviews, Kannada Movie Reviews, Kannada Movie Killing Veerappan Reviews, Killing Veerappan  (2015) Kannada Mp3 Songs Free Download, Killing Veerappan , Killing Veerappan  songs, Killing Veerappan Kannada songs, Killing Veerappan 2015 songs, Killing Veerappan Kannada mp3 songs, Killing Veerappan mp3 songs download, Killing Veerappan 2015 Kannada mp3 songs free download, Killing Veerappan  audio cd rip, Killing Veerappan mp3 free download, Killing Veerappan Kannada movie songs download, Killing Veerappan audio songs download, Killing Veerappan Kannada movie audio songs free download, Killing Veerappan  2015 Kannada audio mp3 songs free download, Killing Veerappan  320kbps, Killing Veerappan 128kbps, Killing Veerappan songs download 320kbps, Killing Veerappan 128kbps Kannada songs free download, Killing Veerappan  audio music songs download, Killing Veerappan Kannada audio music songs mp3 download, Killing Veerappan  songs mp3 download, Killing Veerappan  video songs, Killing Veerappan HD video, Killing Veerappan mp4 video, Killing Veerappan 3gp, Killing Veerappan Kannada video songs, Killing Veerappan  movie songs mp3,mp4, Killing Veerappan  Killing Veerappan all video songs, Killing Veerappan official video songs, Killing Veerappan Hd download mp4, Killing Veerappan iTunes video, Killing Veerappan 720p video,download Killing Veerappan mp4 HD, Killing Veerappan Officil video Killing Veerappan movie, Killing Veerappan mp3,mp4, Killing Veerappan video watch online
Fresh Kannada

Fresh Kannada

No comments:

Post a Comment

Google+ Followers

Powered by Blogger.