Breaking News
recent

'ಫಸ್ಟ್‌ ರ‍್ಯಾಂಕ್‌ ರಾಜು' ತಮಿಳಿಗೆ ರಿಮೇಕ್ ಆಗುತ್ತಾ?

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾ ಭಾರಿ ಸದ್ದು ಮಾಡುತ್ತಿದ್ದು, 'ರಂಗಿತರಂಗ' ನಂತರ ಇದೀಗ ಹೊಸ ಸೇರ್ಪಡೆ ಚೊಚ್ಚಲ ನಿರ್ದೇಶಕ ನರೇಶ್ ಕುಮಾರ್ ಅವರ 'ಫಸ್ಟ್‌ ರ‍್ಯಾಂಕ್‌ ರಾಜು'.
'ಫಸ್ಟ್‌ ರ‍್ಯಾಂಕ್‌ ರಾಜು' ತಮಿಳಿಗೆ ರಿಮೇಕ್ ಆಗುತ್ತಾ?

ಹೌದು ಟೆಕ್ಕಿಯಾಗಿದ್ದ ನರೇಶ್ ಕುಮಾರ್ ಅವರು ಮಾಡಿದ ಚೊಚ್ಚಲ ಪ್ರಯತ್ನವೇ ಕೈ ಹಿಡಿದು ನಡೆಸಿದ್ದು, ಹೊಸಬರನ್ನು ರಾಜು ಕೈ ಹಿಡಿದು ಮುನ್ನಡೆಸುತ್ತಿದ್ದಾನೆ.[ಫಸ್ಟ್‌ ರ‍್ಯಾಂಕ್‌ ರಾಜು ಏಕೆ ನೋಡಬೇಕು?, ಇಲ್ಲಿದೆ ಕಾರಣಗಳು]

ಅಂದಹಾಗೆ ವಿಷ್ಯಾ ಇದಲ್ಲಾ, ವಿಶೇಷ ಏನಪ್ಪಾ ಅಂದ್ರೆ ಈ ಸಿನಿಮಾವನ್ನು ಅನೇಕ ಸ್ಟಾರ್ ನಟರು ನೋಡಿ ವಾವ್ ಎಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರ ಸಾಲಿಗೆ ಮತ್ತೊಂದು ವಿಶೇಷ ಸೇರ್ಪಡೆ ತಮಿಳು ನಟ ಸೂರ್ಯ ಅವರು.

ಕೇವಲ ಕನ್ನಡದ ಸ್ಟಾರ್ ನಟರು ಮಾತ್ರವಲ್ಲದೇ, ದಕ್ಷಿಣ ಭಾರತದ ಸ್ಟಾರ್ ಕೂಡ ಈ ಸಿನಿಮಾವನ್ನು ಮೆಚ್ಚಿ ಹೊಗಳಿದ್ದಾರೆ. ಇನ್ನು 'ಸಿಂಗಂ' ನಟ ಸೂರ್ಯ ಅವರು ಚಿತ್ರ ನೋಡಿ ಮೆಚ್ಚಿಕೊಂಡಿದ್ದು ಮಾತ್ರವಲ್ಲದೇ ತಮಿಳಿಗೆ ರಿಮೇಕ್ ಮಾಡಿದರೆ ಹೇಗೆ ಅಂತ ಪ್ಲ್ಯಾನ್ ಕೂಡ ಮಾಡುತ್ತಿದ್ದಾರಂತೆ.

ಹೇಗಿದೆ ನೋಡಿ ಹೊಸಬರ ಹವಾ. ಸಖತ್ ಎಂರ್ಟಟೈನರ್ ಸಿನಿಮಾ 'ಫಸ್ಟ್ ರ್ಯಾಂಕ್ ರಾಜು' ಸದ್ಯಕ್ಕೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಚಂದನವನಕ್ಕೆ ಕಾಲಿಟ್ಟ ಹೊಸ ಪ್ರತಿಭೆಗಳಾದ ನಟ ಗುರುನಂದನ್, ಅಪೂರ್ವ ಗೌಡ ಮತ್ತು ತನಿಷ್ಕಾ ಕಪೂರ್ ಕೂಡ ಸಖತ್ತಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.[ನ.27 ರಂದು ಹುಟ್ಟೋ ಮಗುವಿಗೆ 2 ಲಕ್ಷ ಕೊಡ್ತಾರಂತೆ!]

ಒಟ್ನಲ್ಲಿ ಒಂದರಂತೆ ಒಂದು ಹೊಸಬರ ಸಿನಿಮಾ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಚಿತ್ರರಂಗಕ್ಕೆ ಕಾಲಿಡಲು ಬಯಸುತ್ತಿರುವ ಹೊಸ ಪ್ರತಿಭೆಗಳಿಗೆ ಇದು ಶುಭ ಸೂಚನೆ ಅಂದರೂ ತಪ್ಪಾಗ್ಲಿಕ್ಕಿಲ್ಲ.

Fresh Kannada

Fresh Kannada

No comments:

Post a Comment

Google+ Followers

Powered by Blogger.