Breaking News
recent

ಬಿಗ್ ಬಾಸ್ ಮನೆಯಲ್ಲಿ ಎಲ್ರದ್ದೂ ನಾಟಕ!

ಬಿಗ್‍ಬಾಸ್ ಮನೆಯ ಹೊಸ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿರುವ ಮಿತ್ರಾ ಮನೆಯವರೆಲ್ಲಾ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ರದ್ದೂ ನಾಟಕ!

ನಿನ್ನೆಯ ಸಂಚಿಕೆಯಲ್ಲಿ ನಟ ಸುದೀಪ್ ಹೊಸದಾಗಿ ಮನೆಗೆ ಬಂದಿರುವ ಮಿತ್ರಾ ಅವರಿಗೆ ತಮ್ಮ 2 ದಿನದ ಅನುಭವ ಹಂಚಿಕೊಳ್ಳಿ ಎಂದು ಕೇಳಿದಾಗ ಮಿತ್ರಾ, ಮನೆಯಲ್ಲಿ ಎಲ್ಲರೂ ಮೈಂಡ್ ಗೇಮ್ ಆಡುತ್ತಿದ್ದಾರೆ, ಶೃತಿ ಅವರು ಅಮ್ಮ ಸಂಬಂಧದ ಮೂಲಕ ಎಲ್ಲರನ್ನೂ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆನಂದ್, ಅಯ್ಯಪ್ಪ ಹೀಗೆ ಎಲ್ಲರೂ ತಮ್ಮದೇ ಶೈಲಿಯಲ್ಲಿ ಆಟವಾಡುತ್ತಿದ್ದಾರೆ. ತೋರಿಕೆಯಲ್ಲಿ ಸ್ನೇಹ ಸಂಬಂಧ ತೋರುತ್ತಿದ್ದಾರೆ. ಆದರೆ ಆಟ ಎಂದು ಬಂದಾಗ ಎಲ್ಲರೂ ಆಟಗಾರರಾಗುತ್ತಿದ್ದಾರೆ ಎಂದರು.
ಅಲ್ಲದೆ ಮಿತ್ರಾ ಅವರು ಮನೆಗೆ ಬಂದ ಮೊದಲ ದಿನವೇ ನಿಮ್ಮ ನಾಟಕವನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ್ದರು. ಇದರಿಂದ ಶೃತಿ ಅವರಿಗೆ ಬೇಜಾರಾಗಿದ್ದೂ ನಿಜ.
ಹೊಸ ಸ್ಪರ್ಧಿಯಾಗಿ ಮಿತ್ರಾ ಯಾರ ಮುಲಾಜೂ ನೋಡದೆ ತಮ್ಮ ಅಭಿಪ್ರಾಯವನ್ನು ಸುದೀಪ್ ಅವರ ಮುಂದಿಟ್ಟರು. ಆದರೆ ಇದರಿಂದ ಮುಂದೆ ಮನೆಯಲ್ಲಿ ಏನೆಲ್ಲಾ ಪರಿಣಾಮ ಉಂಟಾಗಬಹುದು ಎನ್ನುವುದನ್ನು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.