Breaking News
recent

ಘನಘೋರವಾಗಿದೆ ಚೆನ್ನೈ ಮಹಾನಗರದ ಸ್ಥಿತಿ

ಒಂದೆಡೆ ಎಡಬಿಡದೇ ಸುರಿಯುತ್ತಿರುವ ಮಳೆ. ಮತ್ತೊಂದೆಡೆ ತೊಟ್ಟು ನೀರಿಗೆ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಜನ.
ಘನಘೋರವಾಗಿದೆ ಚೆನ್ನೈ ಮಹಾನಗರದ ಸ್ಥಿತಿ

ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ರಕ್ಷಿಸಲು ಸಮರೋಪಾದಿಯಲ್ಲಿ ಧಾವಿಸಿರುವ ಭಾರತೀಯ ಸೇನೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ. ಈ ಎಲ್ಲ ದೃಶ್ಯಗಳು ಕಂಡು ಬರುತ್ತಿರುವುದು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ. ನೀರು ನೋಡಲು ಸಮುದ್ರ ತಟಕ್ಕೆ ಧಾವಿಸುತ್ತಿದ್ದ ಜನ, ತಮ್ಮ ಮನೆಯ ಮುಂದೆಯೇ ಕಾಣುತ್ತಿರುವ ನೀರಿನ ಸಾಗರ ಕಂಡು ಕಂಗೆಟ್ಟು ಹೋಗಿದ್ದಾರೆ. 100 ವರ್ಷಗಳಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡು ಕರಾವಳಿ ಭಾಗದಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ಸಮುದ್ರದ ಪಕ್ಕದಲ್ಲಿದ್ದ ಚೆನ್ನೈ, ಸಮುದ್ರದ ಭಾಗವೇ ಆಗಿಹೋಗಿದೆ. ಮಹಾಮಳೆಗೆ ಚೆನ್ನೈನ ಸ್ಲಮ್‍ಗಳು ಮುಳುಗಿದ್ದರೆ, ಬಹುತೇಕ ತಳಮಹಡಿ ಹಾಗೂ ಮೊದಲ ಮಹಡಿ ಮನೆಗಳು ಜಲಾವೃತವಾಗಿವೆ. ಭಾನುವಾರದವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ 5 ಕೋಟಿ ರೂಪಾಯಿ ನೆರವು ಘೋಷಿಸಿದೆ. ಮಹಾ ಮಳೆಗೆ ಕಳೆದ ತಿಂಗಳಿನಿಂದ 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ದೋಣಿಗಳು, ಡ್ರಮ್‍ಗಳಲ್ಲಿ ಜನರನ್ನು ರಕ್ಷಿಸಲಾಗುತ್ತಿದೆ. ಇಂದು ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ  1 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡುವುದಾಗಿ ಪ್ರಕಟಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.