Breaking News
recent

ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ (ನಿಖಿಲ್ ಗೌಡ) ಸ್ಯಾಂಡಲ್ ವುಡ್ ಗೆ ರೆಡ್ ಕಾರ್ಪೆಟ್ ಎಂಟ್ರಿಕೊಡುವ ವಿಚಾರ ನಿಮಗೆ ಗೊತ್ತಿದೆ.

ಎಚ್.ಡಿ.ಕುಮಾರಸ್ವಾಮಿ ರವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು (ಡಿಸೆಂಬರ್ 16) ಸಂಜೆ 4.30ರ ಸುಮಾರಿಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಿಖಿಲ್ ಕುಮಾರ್ ರವರ ಚೊಚ್ಚಲ ಸಿನಿಮಾ 'ಜಾಗ್ವಾರ್' ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಲಿದೆ.

ಇದೇ ಸಂದರ್ಭದಲ್ಲಿ 'ಜಾಗ್ವಾರ್' ಚಿತ್ರದ ಮೇಕಿಂಗ್ ಟೀಸರ್ ಕೂಡ ಬಿಡುಗಡೆ ಆಗಲಿದೆ. ಇಷ್ಟೆಲ್ಲ ಸಂಭ್ರಮವಿದ್ದರೂ, ನಿಖಿಲ್ 'ಸ್ಯಾಂಡಲ್ ವುಡ್ ಎಂಟ್ರಿ' ಬಗ್ಗೆ ದೇವೇಗೌಡರ ಕುಟುಂಬದಲ್ಲಿ ಅಸಮಾಧಾನ ಇದ್ದಂತಿದೆ. ಮುಂದೆ ಓದಿ....

1. ಮೊಮ್ಮಗ ಹೀರೋ ಆಗುವುದು ಅಜ್ಜಿಗೆ ಇಷ್ಟವಿಲ್ಲ!
ಮಾಧ್ಯಮಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ದೇವೇಗೌಡ ಹೇಳಿಕೆ ನೀಡಿರುವ ಪ್ರಕಾರ, ಮೊಮ್ಮಗ ನಿಖಿಲ್ ಕುಮಾರ್ ಬಣ್ಣ ಹಚ್ಚಿ ಹೀರೋ ಆಗಿರುವುದು ಖುಷಿ ನೀಡಿಲ್ಲ.

2. ಚೆನ್ನಮ್ಮ ದೇವೇಗೌಡ ರವರ ಹೇಳಿಕೆ ಏನು? 
''ನಿಖಿಲ್ ರಾಜಕೀಯಕ್ಕೆ ಬರಬೇಕು ಎನ್ನುವ ಆಸೆ ಇತ್ತು. ಸಿನಿಮಾ ಹೀರೋ ಆಗಿರುವುದು ಇಷ್ಟ ಇಲ್ಲ. ಎಲ್ಲರೂ ರಾಜಕೀಯದಲ್ಲೇ ಇದ್ದಾರೆ. ಇವನೂ ಬಂದು ಜನ ಸೇವೆ ಮಾಡಿದ್ದರೆ ಖುಷಿ ಇರುತ್ತಿತ್ತು. ಆದ್ರೂ, ಹೀರೋ ಆಗ್ಬೇಕು ಅಂತ ಆಸೆ ಪಟ್ಟಿದ್ದಾನೆ. ಒಳ್ಳೆಯದಾಗಲಿ. ದೇವರು ಆಶೀರ್ವಾದ ಮಾಡಲಿ'' - ಚೆನ್ನಮ್ಮ ದೇವೇಗೌಡ.

3. ಎಚ್.ಡಿ.ಕುಮಾರಸ್ವಾಮಿ ಏನಂತಾರೆ?
''ರಾಜಕಾರಣಕ್ಕೆ ನನ್ನ ಮಗ ಬರಬೇಕು ಎನ್ನುವ ಅಭಿಪ್ರಾಯ ನನಗಿಲ್ಲ. ಇವತ್ತಿನ ರಾಜಕಾರಣ ಅಷ್ಟು ಸುಲಭವಲ್ಲ. ಅವನು ಹೀರೋ ಆಗ್ಬೇಕು ಅಂತ ತೀರ್ಮಾನ ಮಾಡಿದ್ದಾನೆ. ಅವನ ನಿರ್ಧಾರಕ್ಕೆ ತಂದೆಯಾಗಿ ಶಕ್ತಿ ತುಂಬಿದ್ದೇನೆ'' - ಎಚ್.ಡಿ.ಕುಮಾರಸ್ವಾಮಿ.

4. ನಿಖಿಲ್ ಆಸೆ ಏನು? 
''ನನ್ನ Concentration ಈಗ ಮೂವಿ ಮಾತ್ರ. ಅದು ಚೆನ್ನಾಗಿ ಬರಬೇಕು. ನಾನು ಚೆನ್ನಾಗಿ ಪರ್ಫಾಮ್ ಮಾಡಬೇಕು. ನಾನು ಉತ್ತಮ ನಟನಾಗಬೇಕು. ಇದರಲ್ಲಿ ನಾನು ಗುರುತಿಸಿಕೊಂಡು ರಾಜಕೀಯಕ್ಕೆ ಬರುವಂಥದ್ದು ಏನೂ ಇಲ್ಲ. ಅಂತಹ ಯಾವುದೇ ಒತ್ತಡ ಇಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎನ್ನುವ ಆಸೆ ಇದೆ'' - ನಿಖಿಲ್ ಕುಮಾರ್

5. ನಿಖಿಲ್ ಗೌಡ ಅಲ್ಲ ನಿಖಿಲ್ ಕುಮಾರ್! 
ಚೊಚ್ಚಲ ಚಿತ್ರ ಆರಂಭದ ಮುನ್ನ ನಿಖಿಲ್ ಗೌಡ ಅಂತ ಕರೆಯಿಸಿಕೊಳ್ಳುತ್ತಿದ್ದ ಕುಮಾರಸ್ವಾಮಿ ಪುತ್ರ, ನಿಖಿಲ್ ಕುಮಾರ್ ಎಂದು ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ. 'ಗೌಡ' ಎನ್ನುವುದು ಜಾತಿ ಸೂಚಕ ಪದವಾದ್ದರಿಂದ ಖುದ್ದು ಕುಮಾರಸ್ವಾಮಿಯವರು ಜ್ಯೋತಿಷಿಗಳ ಸಲಹೆ ಮೇರೆಗೆ ಮಗನಿಗೆ ನಿಖಿಲ್ ಕುಮಾರ್ ಅಂತ ಮರು ನಾಮಕರಣ ಮಾಡಿದ್ದಾರೆ.

6. 'ಜಾಗ್ವಾರ್'ಗೆ ಇಂದು ಅದ್ದೂರಿ ಮುಹೂರ್ತ 
ನಿಖಿಲ್ ಕುಮಾರ್ ಚೊಚ್ಚಲ ಚಿತ್ರ 'ಜಾಗ್ವಾರ್' ಮುಹೂರ್ತ ಸಮಾರಂಭ ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಪ್ಪನ ಹುಟ್ಟುಹಬ್ಬದಂದೇ ಸಿನಿಮಾ ಮುಹೂರ್ತ ನಡೆಯುತ್ತಿರುವುದು ನಿಖಿಲ್ ಕುಮಾರ್ ಗೆ ಖುಷಿ ವಿಚಾರ.

7. ಸಂತಸ ಹಂಚಿಕೊಂಡ ನಿಖಿಲ್ 
''ಅಪ್ಪನ ಬರ್ತಡೆಗೆ ನಾನು ಇದನ್ನ ಪ್ಲಾನ್ ಮಾಡಿದ್ದು. ಯಾಕಂದ್ರೆ, ಇದಕ್ಕಿಂತ ದೊಡ್ಡ ಉಡುಗೊರೆ ಅವರಿಗೆ ಮತ್ತೊಂದಿಲ್ಲ'' - ನಿಖಿಲ್ ಕುಮಾರ್

ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?
http://www.freshkannada.com/2015/12/blog-post_57.html

ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ..!
http://www.freshkannada.com/2015/12/blog-post_22.html

ನಾಳೆ ಕಂಠೀರವದಲ್ಲಿ ನಿಖಿಲ್ ಗೌಡರ ಜಾಗ್ವಾರ್ ಅದ್ಧೂರಿ ಮುಹೂರ್ತ
http://www.freshkannada.com/2015/12/blog-post_51.html

Jaguar (2016) Kannada Mp3 Songs Free Download, Jaguar , Jaguar songs, Jaguar Kannada songs, Jaguar 2016 songs, Jaguar Kannada mp3 songs, Jaguar mp3 songs download, Jaguar 2016 Kannada mp3 songs free download, Jaguar audio cd rip, Jaguar mp3 free download, Jaguar Kannada movie songs download, Jaguar audio songs download, Jaguar Kannada movie audio songs free download, Jaguar 2016 Kannada audio mp3 songs free download, Jaguar 320kbps, Jaguar 128kbps, Jaguar songs download 320kbps, Jaguar 128kbps Kannada songs free download, Jaguar audio music songs download, Jaguar Kannada audio music songs mp3 download, Jaguar songs mp3 download, Jaguar video songs, Jaguar HD video, Jaguar mp4 video, Jaguar 3gp, Jaguar Kannada video songs, Jaguar movie songs mp3,mp4, Jaguar Jaguar all video songs, Jaguar official video songs, Jaguar Hd download mp4, Jaguar iTunes video, Jaguar 720p video,download Jaguar mp4 HD, Jaguar Officil video Jaguar movie, Jaguar mp3,mp4, Jaguar video watch online, Jaguar Kannada Movie Reviews, Jaguar Movie Reviews, Jaguar songs Reviews, Jaguar Reviews, Jaguar Reviews, Kannada Movie Reviews, Kannada Movie Jaguar Reviews, Jaguar (2016) Kannada Movie Songs Free Download, Jaguar Kannada Movie Trailer, Kannada Jaguar videos, Kannada Jaguar 2016 Mp3 Songs,Jaguar Songs Free Download,Jaguar 2016 Kannada Songs,Kannada Jaguar Songs Download,Jaguar 2016 Kannada Movie Songs,Jaguar Mp3 Songs Free Download,Jaguar Movie Mp3 Songs,Kannada Jaguar 2016 Movie Songs,Jaguar Audio Songs,Jaguar Film Mp3 Songs
Fresh Kannada

Fresh Kannada

No comments:

Post a Comment

Google+ Followers

Powered by Blogger.