Breaking News
recent

'ನಾನು ಹುಚ್ಚ ಅಲ್ಲ, ಫೈರಿಂಗ್ ಸ್ಟಾರ್' ಎಂದು ಕಣ್ಣೀರಿಟ್ಟ ವೆಂಕಟ್

ಬೆಂಗಳೂರಿನ ಗಾಂಧಿನಗರದ ಗ್ರೀನ್ ಹೌಸ್ ನಲ್ಲಿ ಹುಚ್ಚ ವೆಂಕಟ್ ಅವರು ಡಿಸೆಂಬರ್ 18 ರಂದು ಮರು ಬಿಡುಗಡೆಯಾಗುತ್ತಿರುವ " ಹುಚ್ಚ ವೆಂಕಟ್ " ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಕೂತುಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.
'ನಾನು ಹುಚ್ಚ ಅಲ್ಲ, ಫೈರಿಂಗ್ ಸ್ಟಾರ್' ಎಂದು ಕಣ್ಣೀರಿಟ್ಟ ವೆಂಕಟ್

ಈ ಮಧ್ಯೆ ಫ್ರೆಶ್ ಕನ್ನಡ ತಂಡದ ಜೊತೆ ಮಾತಿಗೆ ಸಿಕ್ಕ ವೆಂಕಟ್ ಬಿಡುಗಡೆಯಾಗುತ್ತಿರುವ ತಮ್ಮ ಚಿತ್ರವನ್ನು ಜನ ಯಾಕೆ ನೋಡಬೇಕೆಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ ಏನೆಂದು ತಿಳಿಯಲು ಮುಂದೆ ಓದಿ ..

ಹುಚ್ಚ ವೆಂಕಟ್ ಸದ್ಯ 6 ರಿಂದ 60 ವರ್ಷದ ಎಲ್ಲಾ ವರ್ಗದವರ ಮತ್ತು ಜರ್ಮನಿಯಿಂದ ಹಿಡಿದು ಪರಪ್ಪನ ಅಗ್ರಹಾರ ಜೈಲಿನ ವರೆಗೂ ಎಲ್ಲರ ಬಾಯಲ್ಲಿ ಹರಿದಾಡುತ್ತಿರುವ ಹೆಸರು.

ನನ್ ಮಗಂದ್, ನನ್ ಎಕ್ಕಡ, ಬ್ಯಾನ್ ಆಗ್ಬೇಕ್ ಹೀಗೆ ತನ್ನದೇ ವಿಚಿತ್ರ, ವಿಭಿನ್ನ ಸ್ಟೈಲ್ ನಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ ವೆಂಕಟ್ ಸಿನಿರಸಿಕರನ್ನು ಬೈಯುತ್ತಲೇ ರಾತ್ರೋರಾತ್ರಿ ಯೂಟ್ಯೂಬ್ ಸ್ಟಾರ್ ಆಗಿ ಫೇಮಸ್ ಆದವರು.

ವೆಂಕಟ್ ಹೇಳುವಂತೆ, 2001 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷದ ವನವಾಸದ ನಂತರ "ಸ್ವತಂತ್ರ ಪಾಳ್ಯ" ಚಿತ್ರವನ್ನು ನಟಿಸಿ, ನಿರ್ದೇಶಿಸಿ ಕೈ ಸುಟ್ಟುಕ್ಕೊಂಡ ನಂತರ ಮತ್ತೊಮ್ಮೆ ಹುಚ್ಚ ವೆಂಕಟ್ ಚಿತ್ರ ತಯಾರಿಸಿ ಪರೀಕ್ಷೆಗಿಳಿದ ವೆಂಕಟ್ ಅಲ್ಲೂ ಸೋತ ಮೇಲೆ ಮಾನಸಿಕವಾಗಿ ನೊಂದವರು.

'ಸಿನಿಮಾ ಹೃದಯದಿಂದ ಮಾಡಬೇಕು ಮೆದುಳಿನಿಂದಲ್ಲಾ' ಎಂದು ಹೇಳುವ ವೆಂಕಟ್ ತಮ್ಮ ಈಗಿನ ಜನಪ್ರಿಯತೆಗೆ ಜನ ಮನ್ನಣೆ ನೀಡುತ್ತಾರೆ ಎಂಬ ನಂಬಿಕೆ, ವಿಶ್ವಾಸದೊಂದಿಗೆ "ಹುಚ್ಚ ವೆಂಕಟ್" ಚಿತ್ರವನ್ನು ಮತ್ತೆ ತೆರೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರಂತೆ.

ಚಿತ್ರಮಂದಿರದಲ್ಲಿ ಎತ್ತಂಗಡಿಯಾಗಿ ಯೂಟ್ಯೂಬ್ ಗೆ ಬಂದ "ಹುಚ್ಚ ವೆಂಕಟ್" ಚಿತ್ರವನ್ನು ಜನ ನೋಡಿ ಇಷ್ಟ ಪಟ್ಟಿದ್ದಾರೆ. ಈಗ ಬಿಡುಗಡೆಯಾದರೆ ಖಂಡಿತ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಇಷ್ಟಪಡುತ್ತಾರೆ ಎನ್ನುತ್ತಾರೆ ವೆಂಕಟ್.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮತ್ತು ಒಂದು ಹಾಡಿಗೆ ವೆಂಕಟ್ ರವರೇ ರಾಗ ಸಂಯೋಜನೆ ಮಾಡಿದ್ದು ಈ ಸಿನಿಮಾ ಸಮಾಜಕ್ಕೆ ಹಲವಾರು ರೀತಿಯ ಸಂದೇಶವನ್ನು ರವಾನಿಸುತ್ತದೆ ಇದೊಂದು ಸಾಮಾಜಿಕ ಕಳಕಳಿ ಇರುವ ಉತ್ತಮ ಸಿನಿಮಾ ಆಗುತ್ತದೆ ಎನ್ನುವುದು ವೆಂಕಟ್ ಉವಾಚ.

ಈ ಚಿತ್ರಕ್ಕೆ ಆರ್ಯ ಮೌರ್ಯ ರವರು ಹಣ ಕೊಟ್ಟಿದ್ದು ಟಿ ವಿ ರೈಟ್ಸ್ ಗೆ ಕಲರ್ಸ್ ಕನ್ನಡದ ಜೊತೆ ಒಂದು ಸುತ್ತಿನ ಮಾತುಕತೆಯಾಗಿದೆ ಎಂದು ಹುಚ್ಚ ವೆಂಕಟ್ ಹೇಳಿದರು.

ಜನವರಿ 1 ಕ್ಕೆ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾದ ಮುಹೂರ್ತ ಸಮಾರಂಭವಿದ್ದು ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದಲ್ಲದೆ ಜನವರಿ 8 ಕ್ಕೆ "ಸ್ವತಂತ್ರ ಪಾಳ್ಯ" ಚಿತ್ರವನ್ನೂ ಸಹ ಮರು ಬಿಡುಗಡೆ ಮಾಡುವ ಸುಳಿವು ನೀಡಿದರು.

ಜೈಲಿನ ಖೈದಿಗಳ ಅಭಿಮಾನಕ್ಕೆ ಮನಸೋತಿರುವ ವೆಂಕಟ್ ಜೈಕಾರ ಹಾಕುತ್ತಿದ್ದುದ್ದನ್ನು ನೆನಪಿಸಿಕೊಂಡು ಅಲ್ಲಿನ ಖೈದಿಗಳಿಗೆ ದಿನಗೂಲಿಯನ್ನು 200 ರಿಂದ 250ಕ್ಕೆ ಹೆಚ್ಚಿಸಬೇಕು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ನೆರವು ಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಈ ಮಧ್ಯೆ ಪ್ರಧಾನಿ ಮೋದಿಯವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದರು.

ಮುಂದೊಮ್ಮೆ ಹುಚ್ಚ ವೆಂಕಟ್ ಸೇನೆ ಒಂದು ರಾಜಕೀಯ ಪಕ್ಷವಾಗಿ ಮಾರ್ಪಾಡು ಮಾಡಿ ಎರಡು ದಿನವಾದರೂ ಸಿ ಎಂ ಮತ್ತು ಪಿ ಎಂ ಆಗುತ್ತೇನೆ ಎಂದು ಹೇಳುತ್ತಾ ವೆಂಕಟ್ ಒಂದು ಸಣ್ಣ ನಗೆ ಬೀರಿದರು.

ಕೊನೆಯಾದಾಗಿ ಮಾತನಾಡಿದ ವೆಂಕಟ್, ಇನ್ನು ಮುಂದೆ ಕೋಪ ಕಡಿಮೆ ಮಾಡಿಕೊಳ್ಳುತ್ತೇನೆ ಮತ್ತು 'ಎಕ್ಕಡ' ಪದವನ್ನು ಸಾಯುವವರೆಗೂ ಬಳಸುವುದಿಲ್ಲ ಎಂದು ಪ್ರಮಾಣ ಮಾಡಿ ಇನ್ನೂ ಮುಂದೆ ನನ್ನನು "ಹುಚ್ಚ ವೆಂಕಟ್" ಎಂದು ಕರೆಯಬೇಡಿ ಬದಲಾಗಿ ಅಭಿಮಾನಿಗಳೆಲ್ಲಾ ಸೇರಿ ಕೊಟ್ಟಿರುವ "ಫೈರಿಂಗ್ ಸ್ಟಾರ್ ವೆಂಕಟ್" ಎಂದು ಕರೆಯಿರಿ ಎಂದು ವೆಂಕಟ್ ಹೇಳಿ ತಮ್ಮ ಮಾತು ಮುಗಿಸಿದರು ..

ಹುಚ್ಚ ವೆಂಕಟ್ ಅಣ್ಣ ಬಾಬು ರವರು ಮಾತನಾಡುತ್ತ ತಮ್ಮನ ಈ ಜನಪ್ರಿಯತೆ, ಯಶಸ್ಸು ಕಂಡು ಕೆಲಕಾಲ ಗದ್ಗದಿತರಾದರು.

ಎನಿವೇ, ಮರು ಬಿಡುಗಡೆಯಾಗುತ್ತಿರುವ ವೆಂಕಟ್ ರ "ಹುಚ್ಚ ವೆಂಕಟ್" ಸಿನಿಮಾ ಯಶಸ್ಸು ಗಳಿಸಲಿ ಎಂದು ನಾವೆಲ್ಲರೂ ಈ ಮೂಲಕ ಹಾರೈಸೋಣ ಎಲ್ಲಾರೂ ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡೋಣ ..
Fresh Kannada

Fresh Kannada

No comments:

Post a Comment

Google+ Followers

Powered by Blogger.