Breaking News
recent

ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ ಹಿರಿಯ ನಟಿ ಲಕ್ಷ್ಮಿ

ಚೆನ್ನೈ/ಬೆಂಗಳೂರು: ಕುಂಭದ್ರೋಣ ಮಳೆಯ ಆರ್ಭಟದಿಂದಾಗಿ ಚೆನ್ನೈ ಜಲಪ್ರಳಯದಿಂದ ತತ್ತರಿಸಿ ಹೋಗಿದೆ. ಸದ್ಯ ಮಳೆಯ ಅಬ್ಬರ ನಿಂತಿದೆ. ಆದರೆ ಪ್ರವಾಹ ಪರಿಸ್ಥಿತಿ ಹಾಗೆಯೇ ಇದೆ.



ಹಿರಿಯ ನಟಿ ಲಕ್ಷ್ಮಿ ನೆರೆಯಿಂದ ತತ್ತರಿಸಿಹೋಗಿದ್ದಾರೆ. ಚೆನ್ನೈ ನಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅವರನ್ನು ದೋಣಿ ಮೂಲಕ ರಕ್ಷಣೆ ಮಾಡಲಾಗಿದೆ.
ಚೆನ್ನೈ ಪ್ರವಾಹದಲ್ಲಿ ಹಲವು ಕನ್ನಡಿಗರು ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯ ಸುಧೀಂದ್ರ ಚೆನ್ನೈನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ.
ಬಾಗಲಕೋಟೆ ಸುಚಿತ್ರಾ ಸಂಪರ್ಕವೂ ಕಡಿತವಾಗಿದೆ. ಐಟಿಐ ಕಾಲೇಜ್‍ನ ಉಪನ್ಯಾಸಕಿಯಾದ ಸುಚಿತ್ರಾ, 6 ತಿಂಗಳ ಹಿಂದೆ ತರಬೇತಿಗಾಗಿ ಚೆನ್ನೈಗೆ ಹೋಗಿದ್ದರು
ಬೆಂಗಳೂರಿನ 24 ವರ್ಷದಕಾರ್ತಿಕ್ ಸಂಪರ್ಕ ಸಿಕ್ಕಿದೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಕಾರ್ತಿಕ್, ಎರಡು ದಿನಗಳಿಂದ ಸಂಪರ್ಕ ಸಾಧ್ಯವಾಗಿರಲಿಲ್ಲ. ಇವತ್ತು ಕೊನೆಗೂ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಇತ್ತ ರಾಯಚೂರಿನ ಎಂಜಿನಿಯರ್ ಸುರೇಶ್ ವಜೆ ಎಂಜಿನಿಯರ್ ಕೂಡ ಸಂಪರ್ಕಕ್ಕೆ ಬಂದಿದ್ದಾರೆ. source publictv
Fresh Kannada

Fresh Kannada

No comments:

Post a Comment

Google+ Followers

Powered by Blogger.