Breaking News
recent

ಸೀಕ್ರೆಟ್ ರೂಮಲ್ಲಿ ಮಳೆ ಹುಡುಗಿ ಪೂಜಾ ಕಣ್ಣೀರ ಮಳೆ!

ಪೂಜಾಗಾಂಧಿ ಬಿಗ್‍ಬಾಸ್ ಮನೆಯಲ್ಲಿದ್ದಾಗ ಬಿಗ್‍ಬಾಸ್ ಮನೆಯ ಇತರೆ ಸದಸ್ಯರು ಅವರಿಗೆ ತೋರಿಸುತ್ತಿದ್ದ ಕಾಳಜಿ, ಪ್ರೀತಿ ಎಲ್ಲಾ ಕೇವಲ ನಾಟಕೀಯ ಎಂದು ಸೀಕ್ರೆಟ್ ರೂಮಿನಲ್ಲಿರುವ ಪೂಜಾಗೆ ಈಗ ಅರಿವಾಗುತ್ತಿರುವಂತಿದೆ.
ಸೀಕ್ರೆಟ್ ರೂಮಲ್ಲಿ ಮಳೆ ಹುಡುಗಿ ಪೂಜಾ ಕಣ್ಣೀರ ಮಳೆ!

ಮನೆಯಲ್ಲಿದ್ದಾಗ ಪೂಜಾ ಜೊತೆ ಹೆಚ್ಚು ಆತ್ಮೀಯತೆ ಹೊಂದಿದ್ದ ಭಾವನಾ, ಪೂಜಾ ಹೊರಹೋದ ಮೇಲೆ ಚಂದನ್ ಮತ್ತು ಅಯ್ಯಪ್ಪರೊಂದಿಗೆ ಮಾತನಾಡುತ್ತಾ ಪೂಜಾ ನಡವಳಿಕೆ ನೋಡಿ ಅವರ ಮನೆಯವರೇ ಪೂಜಾರನ್ನು ಹೊರಗೆ ಕರೆಸಿಕೊಂಡಿರಬಹುದು ಎಂದರು. ಇವರ ಈ ಸಂಭಾಷನೆಯನ್ನು ಸೀಕ್ರೆಟ್ ರೂಮಿನಲ್ಲಿದ್ದುಕೊಂಡು ನೋಡುತ್ತಿದ್ದ ಪೂಜಾಗೆ ಬಹಳ ನೋವಾಗಿದೆ.
ಮನೆಯಲ್ಲಿದ್ದಾಗ ಎಲ್ಲರೂ ಪ್ರೀತಿಯಿಂದ ಇದ್ದರು. ಈಗ ಅದೆಲ್ಲಾ ಫೇಕ್ ಎನಿಸುತ್ತಿದೆ ಎಂದು ಕಣ್ಣೀರಿಟ್ಟರು ಪೂಜಾ. ಅದರಲ್ಲೂ ಅಯ್ಯಪ್ಪ ಪೂಜಾರ ಗೈರಿನಲ್ಲಿ ಅವರ ಬಗ್ಗೆ ಮಾತನಾಡಿದ್ದು, ಈ ಪ್ರೀತಿ ಪ್ರೇಮ ಎಲ್ಲ ಕ್ಷಣಿಕ, ಬಿಗ್‍ಬಾಸ್ ಮನೆಯಲ್ಲಿ ಇರುವವರೆಗೆ ಮಾತ್ರ ಎಂದು ಹೇಳಿದ್ದು ಈಗ ಪೂಜಾರ ಕಣ್ಣು ತೆರೆಸಿದೆ.
ಬಿಗ್ ಬಾಸ್‍ನ ಸದಸ್ಯರ ಬಗ್ಗೆ ಇಷ್ಟೆಲ್ಲಾ ಸತ್ಯಗಳು ಗೊತ್ತಾದ ಬಳಿಕ ಪೂಜಾ ಮತ್ತೆ ಮನೆಯೊಳಗೆ ಪ್ರವೇಶ ನೀಡಿ ಎಲ್ಲರೊಂದಿಗೆ ಮೊದಲಿನಂತೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಮತ್ತೆ ಮನೆಗೆ ಹೋದಾಗ ಮನೆಯವರು ಹೇಗೆ ಪ್ರತಿಕ್ರಿಯಿಸುತ್ತಾರೆ, ಪೂಜಾ ಹೇಗೆ ಮತ್ತೆ ಅವರೊಂದಿಗೆ ಹೊಂದಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.