Breaking News
recent

ಈ ವರ್ಷ ಹಸೆಮಣೆ ಏರಿ ಚತುರ್ಭಜರಾದ ತಾರೆಯರು

ಅಂತೂ ಇಂತೂ 2015ಕ್ಕೆ ಟಾಟಾ ಹೇಳೋ ಸಮಯ ಹತ್ತಿರ ಆಗ್ತಾ ಇದೆ. ಇಲ್ಲಿಯವರೆಗೆ ನಮ್ಮ ಚಂದನವನದಲ್ಲಿ ಯಾರು ಅತ್ರು, ಯಾರು ನಕ್ರು, ಯಾರು ಜಗಳ ಆಡಿದ್ರು ಅಂತ ಮಾತ್ರ ನಾವು ಹೇಳೋದಾ? ಅಥವಾ ಸ್ಯಾಂಡಲ್ ವುಡ್ ಮಂದಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದನ್ನು ಕೂಡ ನಾವು ನಿಮಗೆ ಹೇಳ್ಬೇಕಲ್ವಾ?.
ಈ ವರ್ಷ ಹಸೆಮಣೆ ಏರಿ ಚತುರ್ಭಜರಾದ ತಾರೆಯರು

ಈ ಬಾರಿ ಸ್ಯಾಂಡಲ್ ವುಡ್ ತಾರೆಯರು ಮಾತ್ರವಲ್ಲದೇ, ತಾರೆಯರ ಮಕ್ಕಳು ಕೆಲವರು ಎಂಗೇಜ್ ಆದರೆ ಇನ್ನು ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಮುಂದಿನ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ.

ಅಂದಹಾಗೆ ನಮ್ಮ ಗಾಂಧಿನಗರದ ಕೆಲವಾರು ಸೆಲೆಬ್ರಿಟಿಗಳು ಈ ಬಾರಿ ನೂತನ ಜೀವನಕ್ಕೆ ಕಾಲಿಟ್ಟು ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ಜಂಟಿ ಜೀವನಕ್ಕೆ ಹಾಯ್ ಹಾಯ್ ಹೇಳಿದ್ದಾರೆ. 2015 ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಯರ ಪಟ್ಟಿ ಇಲ್ಲಿದೆ.

ಯಾರೆಲ್ಲಾ ಈ ವರ್ಷ ಸಪ್ತಪದಿ ತುಳಿದ್ರು, ಯಾರೆಲ್ಲಾ ಈ ವರ್ಷ ಎಂಗೇಜ್ ಆಗಿ ಮುಂದಿನ ವರ್ಷಕ್ಕೆ ಮದುವೆ ಆಗ್ತಾರೆ ಅನ್ನೋದನ್ನ ನೋಡಲು ಕೆಳಗಿನ ಆಲ್ಬಮ್ ಕ್ಲಿಕ್ ಮಾಡಿ ಮತ್ತು ಅಪ್ಡೇಟ್ ಓದಿ ..
2015 Sandalwood Actors and Actress Marriage Photos


1. ನೂತನ ಜೀವನಕ್ಕೆ ಕಾಲಿಟ್ಟ ಶಿವಣ್ಣ-ಗೀತಾ ದಂಪತಿಗಳ ಪುತ್ರಿ ನಿರುಪಮಾ 
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮೊಮ್ಮಗಳು, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ ಮಗಳು ಡಾ.ನಿರುಪಮ ಅವರ ವಿವಾಹ ಮಹೋತ್ಸವವು ಅವರ ಪ್ರಿಯತಮ ಡಾ. ದಿಲೀಪ್ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ 31 ರಂದು ಅದ್ದೂರಿಯಾಗಿ ನೆರವೇರಿದೆ.

2. ನವ ಬಾಳಿಗೆ ಕಾಲಿಟ್ಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್
ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಮಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತಮ್ಮ ಧೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ಅವರನ್ನು ಶುಭ ಧನುರ್ ಲಗ್ನದಲ್ಲಿ ಅಕ್ಟೋಬರ್ 25 ರಂದು ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಅದ್ಧೂರಿಯಾಗಿ ಮದುವೆಯಾದರು.

3. ಹಸೆಮಣೆ ಏರಿದ ನಟ ರಾಮಕೃಷ್ಣ ಮಗ ಅಕ್ಷತ್ 
'ರಂಗನಾಯಕಿ', 'ಪಡುವಾರಹಳ್ಳಿ ಪಾಂಡವರು', 'ಮಾನಸ ಸರೋವರ' ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ರಾಮಕೃಷ್ಣ ಹಿರಿಯ ಪುತ್ರ ಅಕ್ಷತ್ ಫ್ರಾನ್ಸ್ ನಲ್ಲಿ ಇಂಟರ್ಪೋಲ್ ಆಫೀಸರ್. ಅಕ್ಷತ್ ಅವರು ವಿದೇಶಿ ಹುಡುಗಿ ಎಮ್ಮಾ ಫ್ರಾನ್ಸ್ ಅವರನ್ನು ಆರ್ ಟಿ ನಗರದ ತರಳಬಾಳು ಸಮುದಾಯ ಭವನದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮದುವೆಯಾದರು.

4. ಸಪ್ತಪದಿ ತುಳಿದ ನಟಿ ರೂಪಶ್ರೀ 
ಸಂಕ್ರಾಂತಿ', 'ಜಟಾಯು', 'ಸಿಗರೇಟ್', 'ಚಡ್ಡಿದೋಸ್ತ್' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ಅವರು ತಾವು ಪ್ರೀತಿಸಿದ ಉದ್ಯಮಿ ನೀರಜ್ ಅವರನ್ನು ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನವೆಂಬರ್ 26 ರಂದು ಕೊಲ್ಕತ್ತಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

5. ನವ ಜೀವನಕ್ಕೆ ಅಡಿಯಿಟ್ಟ ಮಯೂರ್ ಪಟೇಲ್ 
ನಟ-ನಿರ್ಮಾಪಕ ಮದನ್ ಪಟೇಲ್ ಅವರ ಪುತ್ರ ಮಯೂರ್ ಪಟೇಲ್ ಅವರು ಮಂಗಳೂರು ಸಿಟಿ ಕಾರ್ಪೊರೇಷನ್ ನ ಡೆಪ್ಯುಟಿ ಕಮಿಷನರ್ ಎನ್.ಶಿವಶಂಕರ್ ಸ್ವಾಮಿ ಅವರ ಮಗಳು ಕಾವ್ಯ ಅವರನ್ನು ಶುಭ ಲಗ್ನದಲ್ಲಿ ಹಿರಿಯರ ಇಚ್ಛೆಯಂತೆ ಕೈ ಹಿಡಿದರು.

6. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗತಿಹಳ್ಳಿ ಪುತ್ರಿ ಕನಸು ನಾಗತಿಹಳ್ಳಿ 
ಕನ್ನಡದ 'ಅಮೃತಧಾರೆ' ಖ್ಯಾತಿಯ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಗಳು ಕನಸು ನಾಗತಿಹಳ್ಳಿ ಅವರು ಸಾಯಿ ವಿವಸ್ವತ್ ಓಂಕಾರ ಎನ್ನುವ ವರನನ್ನು ಚಂದ್ರಶೇಖರ್ ಅವರ ಹುಟ್ಟೂರಾದ ನಾಗತಿಹಳ್ಳಿಯಲ್ಲಿ ಮಾರ್ಚ್ 28 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು.

7. ಸಪ್ತಪದಿ ತುಳಿದ ಗಾಯಕಿ ಶ್ರೇಯಾ ಘೋಷಾಲ್
ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಉದ್ಯಮಿ ಶೈಲಾದಿತ್ಯ ಮುಖ್ಯೋಪಾಧ್ಯಾಯ ಅವರ ಜೊತೆ (ಫೆಬ್ರವರಿ 5, 2015) ರಂದು ಸದ್ದಿಲ್ಲದೇ, ಬೆಂಗಾಲಿ ಶೈಲಿಯಲ್ಲಿ ಸಪ್ತಪದಿ ತುಳಿದು ನೂತನ ಜೀವನಕ್ಕೆ ಅಡಿ ಇಟ್ಟಿದ್ದರು.

8. ಎಸ್ ನಾರಾಯಣ್ ಮಗಳ ಶುಭವಿವಾಹ 
ಸ್ಯಾಂಡಲ್ ವುಡ್ ನ ನಟ-ನಿರ್ದೇಶಕ-ನಿರ್ಮಾಪಕ ಎಸ್ ನಾರಾಯಣ್ ಅವರ ಪುತ್ರಿ ವಿದ್ಯಾಶ್ರೀ ಅವರು ಶುಭ ಮುಹೂರ್ತದಲ್ಲಿ, ವರ ಶ್ರೀನಿವಾಸ್ ಅವರ ಕೈ ಹಿಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಫೆಬ್ರವರಿ 9, 2015 ರಂದು ವಿದ್ಯಾಶ್ರೀ ಮತ್ತು ಶ್ರೀನಿವಾಸ್ ಅವರ ಮದುವೆ ನೆರವೇರಿತು. ಮದುವೆ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು.

9. ಎಂಗೇಜ್ ಆದ ನಿಖಿಲ್ ಗೌಡ 
ಮಾಜಿ ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಅವರು ನಿರ್ಮಾಪಕ ಕೆ.ಸಿ.ಎನ್ ಮೋಹನ್ ಅವರ ಪುತ್ರಿ ಸ್ವಾತಿ ಗೌಡ ಅವರ ಜೊತೆ ಮೇ 20, 2015 ರಂದು ಬೆಂಗಳೂರಿನಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನೇನು ಸದ್ಯದಲ್ಲೇ ನವ ಜೀವನಕ್ಕೆ ಕಾಲಿಡಲಿದ್ದಾರೆ.

10. ಮದುವೆಯ ಸಂಭ್ರಮದಲ್ಲಿ 'ರಂಗಿತರಂಗ' ಚೆಲುವ ನಿರುಪ್ ಭಂಡಾರಿ 
'ರಂಗಿತರಂಗ' ಖ್ಯಾತಿಯ ಯಶಸ್ವಿ ನಟ ನಿರುಪ್ ಭಂಡಾರಿ ಅವರು ತಮ್ಮ ಗೆಳತಿ ಸಾಫ್ಟ್ ವೇರ್ ಉದ್ಯೋಗಿ ಧನ್ಯ ಅವರ ಜೊತೆ ಸೆಪ್ಟೆಂಬರ್ 9ರಂದು ಮೈಸೂರಿನಲ್ಲಿ, ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಮದುವೆ ಯಾವಾಗ ಅನ್ನೋದು ಇನ್ನು ಗೊತ್ತಾಗಿಲ್ಲ.

11. ನಿಖಾ ಮಾಡಿಕೊಂಡ ನಟಿ ಮೋನಿಕಾ 
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ದೇವರು ಕೊಟ್ಟ ತಂಗಿ' ಸಿನಿಮಾದಲ್ಲಿ ನಟಿಸಿದ್ದ ನಟಿ ಮೋನಿಕಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಹೀಮಾ ಎಂದು ಬದಲಾಯಿಸಿಕೊಂಡ ನಂತರ ಚೆನ್ನೈ ಮೂಲದ ಉದ್ಯಮಿ ಮಲಿಕ್ ಅವರನ್ನು ಜನವರಿ 2015 ರಲ್ಲಿ ನಿಖಾ ಮಾಡಿಕೊಂಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.