Breaking News
recent

ರವಿ ಮುರೂರು, ವೆಂಕಟ್‍ ಪಬ್ಲಿಕ್ ಟಿವಿಯಲ್ಲಿ ರಾಜಿಯಾದ್ರು

ಗಾಯಕ ರವಿ ಮುರೂರು ಮತ್ತು ನಟ, ನಿರ್ದೇಶಕ ವೆಂಕಟ್ ಅವರು ರಾಜಿಯಾಗಿದ್ದಾರೆ.
ರವಿ ಮುರೂರು, ವೆಂಕಟ್‍ ಪಬ್ಲಿಕ್ ಟಿವಿಯಲ್ಲಿ ರಾಜಿಯಾದ್ರು

ಪಬ್ಲಿಕ್ ಟಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟ್ ಅವರು ರವಿ ಅವರ ಜೊತೆ ಮಾತನಾಡಿ ಚಿತ್ರದಲ್ಲಿ ಅಭಿನಯಿಸುವಂತೆ ಆಹ್ವಾನ ನೀಡಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೆಂಕಟ್ ಅವರು ರವಿ ಮುರೂರು ಅವರ ಕಪಾಳಕ್ಕೆ ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಆಲ್ ದಿ ಬೆಸ್ಟ್ ವೆಂಕಟ್ ಕಾರ್ಯಕ್ರಮದಲ್ಲಿ ರವಿ ಅವರ ಜೊತೆ ಮಾತನಾಡಿದ ವೆಂಕಟ್, ಬಿಗ್ ಬಾಸ್ ಮನೆಯಲ್ಲಿ ನನ್ನನ್ನು ನೀನು ಸಾಕಷ್ಟು ನಗಿಸಿದ್ದಿ, ಹೀಗಾಗಿ ನನ್ನ ಮುಂದಿನ ಚಿತ್ರದಲ್ಲಿ ನೀನು ನಟಿಸಬೇಕು ಎಂದು ರವಿ ಅವರಿಗೆ ಆಹ್ವಾನ ನೀಡಿದರು.
ಆರಂಭದಲ್ಲಿ ರವಿ ಅವರ ಧ್ವನಿ ಕೇಳಿದ ಕೂಡಲೇ, ಬೇಜಾರ್ ಮಾಡಿಕೊಳ್ಳಬೇಡ. ಹಳೆಯದು ಕೆದಕ ಬೇಡ. ಮನಸ್ತಾಪ ಬರುತ್ತೆ ಹೋಗುತ್ತೆ ಎಂದು ವೆಂಕಟ್ ಹೇಳಿದರು. ನಂತರ ನನ್ನ ಸಹೋದರಿ ಪೂಜಾ ಗಾಂಧಿ ಮತ್ತು ನನ್ನ ಡೈಲಾಗ್ ಹೊಡಿ ಎಂದು ಹೇಳಿದರು. ಇದರಂತೆ ರವಿ ಅವರು ಇಬ್ಬರ ಡೈಲಾಗ್ ಹೇಳಿ ವೆಂಕಟ್ ಅವರನ್ನು ನಗಿಸಿದರು.
ಇದಾದ ಬಳಿಕ ರವಿ ಅವರ ಪತ್ನಿಯನ್ನು ಸಹೋದರಿ ಎಂದು ಕರೆದು, ಸಹೋದರಿ, ನಿಮ್ಮ ತಾಯಿ ಮಗಳನ್ನು ಕೇಳಿದೆ ಎಂದು ಹೇಳು ಎಂದರು. ಅಷ್ಟೇ ಅಲ್ಲದೇ ಮನೆಗೆ ಊಟಕ್ಕೆ ಕರಿ ಬರುತ್ತೇನೆ ಎಂದು ವೆಂಕಟ್ ಹೇಳಿದರು. ಇದಕ್ಕೆ ರವಿ ಸರಿ ಮನೆಗೆ ಬಂದಾಗ ನಾನೇ ಚಿತ್ರಾನ್ನ ಮಾಡುತ್ತೇನೆ ಎಂದರು. ಇದಕ್ಕೆ ವೆಂಕಟ್ ನಾನೇ ಬಂದು ಚಿತ್ರಾನ್ನ ಮಾಡ್ತೀನಿ ಎನ್ನುವ ಡೈಲಾಗ್ ಹೊಡೆದರು.
ಈ ವೇಳೆ ಯಾಕೆ ನೀವು ರವಿ ಅವರಿಗೆ ನಿಮ್ಮ ಚಿತ್ರದಲ್ಲಿ ಹಾಡು ಹೇಳಲು ಅವಕಾಶ ಕೊಡಬಾರದು ಎಂದು ಪ್ರಶ್ನಿಸಲಾಯಿತು. ಇದಕ್ಕೆ ನಮ್ದು ಮಾಸ್ ಸಿನಿಮಾ, ರವಿ ಅವ್ರು ಕ್ಲಾಸಿಕಲ್ ಸಿಂಗರ್. ಹೀಗಾಗಿ ಸಿನಿಮಾ ಹಾಡಲು ಅವಕಾಶ ಇಲ್ಲ. ನಟಿಸಲು ಅವಕಾಶ ನೀಡುತ್ತೇನೆ ಎಂದು ವೆಂಕಟ್ ಆಫರ್ ನೀಡಿದರು. source public tv
Fresh Kannada

Fresh Kannada

No comments:

Post a Comment

Google+ Followers

Powered by Blogger.