Breaking News
recent

'ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?

ನಟಿ ರಾಗಿಣಿ ದ್ವಿವೇದಿ ಆರಾಮಾಗೇ ಇದ್ದರು. ಹೊಸ ಸಿನಿಮಾ 'ಹುಲಿ ದೇವರ ಕಾಡು' ಪತ್ರಿಕಾಗೋಷ್ಠಿಗೆ ನಗು ನಗುತ್ತಲೇ ಎಂಟ್ರಿಕೊಟ್ಟರು. ಲವಲವಿಕೆಯಿಂದ ಮಾತಿಗೆ ಇಳಿದರು.
'ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?

ಆದ್ರೆ, ಎಲ್ಲೋ ಮೂಲೆಯಿಂದ ಇಣುಕಿ ಬಂದ 'ನಾಟಿ ಕೋಳಿ' ಪ್ರಶ್ನೆ ಕೇಳುತ್ತಿದ್ದಂತೆಯೇ ನಟಿ ರಾಗಿಣಿಗೆ ಪಿತ್ತ ನೆತ್ತಿಗೇರ್ತು. ಕಂಗೊಳಿಸುತ್ತಿದ್ದ ಅವರ ಕಣ್ಣು ಕೆಂಪಾಯ್ತು. ನಿರ್ದೇಶಕ ಶ್ರೀನಿವಾಸ್ ರಾಜು ಮೇಲೆ ಇಷ್ಟು ದಿವಸ ಅದುಮಿಟ್ಟುಕೊಂಡಿದ್ದ ಕೋಪ ಬ್ಲಾಸ್ಟ್ ಆಯ್ತು.
ragini and srinivas raju

ನಟಿ ರಾಗಿಣಿ 'ನಾಟಿ ಕೋಳಿ' ಚಿತ್ರದಿಂದ ಹೊರಬಂದು ಸುಮಾರು ದಿನಗಳೇ ಕಳೆದು ಹೋಗಿವೆ. ಆದ್ರೆ, ಆ ವಿವಾದ ಮಾತ್ರ ರಾಗಿಣಿ ತಲೆಯಲ್ಲಿ ಇನ್ನೂ ಕೊರೆಯುತ್ತಿದೆ ಅನ್ನುವುದಕ್ಕೆ ಇತ್ತೀಚೆಗಷ್ಟೇ ನಡೆದ 'ಹುಲಿ ದೇವರ ಕಾಡು' ಪತ್ರಿಕಾಗೋಷ್ಠಿ ಸಾಕ್ಷಿ. ಮುಂದೆ ಓದಿ.....

1. ನಿರ್ದೇಶಕ ಶ್ರೀನಿವಾಸ್ ರಾಜು ಮೇಲೆ ಹರಿಹಾಯ್ದ ರಾಗಿಣಿ 
'ನಾಟಿ ಕೋಳಿ' ಬಗ್ಗೆ ಪ್ರಶ್ನೆ ತೂರಿಬರುತ್ತಿದ್ದಂತೆ ಸಿಟ್ಟಾದ ರಾಗಿಣಿ, ''ಅವರು ಮೇಕರ್ರೇ ಅಲ್ಲ. ಅಷ್ಟೊಂದು ಆಸೆ ಇದ್ದರೆ ಸೆಕ್ಸ್ ಸಿನಿಮಾ ಮಾಡಬೇಕು. ಇಲ್ಲಿ ಆ ತರಹ ಸಿನಿಮಾಗಳನ್ನ ಮಾಡಬಾರದು. ಸ್ವಲ್ಪ ಡಿಗ್ನಿಫೈಡ್ ಆಗಿರ್ಬೇಕು. ಅದು ಬಿಟ್ಟು ಚೀಪಾಗೆಲ್ಲಾ ಆಡಬಾರದು'' ಅಂತ 'ನಾಟಿ ಕೋಳಿ' ನಿರ್ದೇಶಕ ಶ್ರೀನಿವಾಸ್ ರಾಜು ಬಗ್ಗೆ ರಾಗಿಣಿ ಹೇಳಿಬಿಟ್ಟರು.

2. ವಿವಾದದ ಬಗ್ಗೆ ರಾಗಿಣಿ ಹೇಳಿದ್ದೇನು? 
''ನಾನು ಮೇಕಪ್ ರೂಮ್ ನಲ್ಲಿದ್ದೆ. ಹೊರಗೆ ಸ್ಟುಡಿಯೋದಲ್ಲಿ ಗಲಾಟೆ ಆಯ್ತಂತೆ. ನನಗೆ ಅದು ಕೇಳಿಸಿರಲಿಲ್ಲ. ನಾನು ಹೊರಗೆ ಬಂದಾಗ ಅಲ್ಲಿ ಗಲಾಟೆ ಆಗಿರಬಹುದು ಅಂತ ಅನಿಸಿರಲಿಲ್ಲ. ಆದ್ರೆ, ಅದು ಅಷ್ಟಕ್ಕೆ ನಿಲ್ಲಲಿಲ್ಲ. ನನ್ನ ಬಗ್ಗೆ ಕೆಟ್ಟ ಪ್ರಚಾರ ಶುರುವಾಯ್ತು.'' - ರಾಗಿಣಿ ದ್ವಿವೇದಿ

3. ರಾಗಿಣಿಗೆ ಬೇಸರವಾಗಿದ್ದು ಯಾಕೆ? 
''ಚಿತ್ರತಂಡದವರೇ ಅದನ್ನ ಅಷ್ಟು ದೊಡ್ಡದು ಮಾಡಿದ್ದು ನನಗೆ ಬೇಸರವಾಯ್ತು. ಎಡಿಟ್ ಮಾಡದ ನನ್ನ ಫೋಟೋಗಳನ್ನ ಮೀಡಿಯಾದಲ್ಲಿ ಲೀಕ್ ಮಾಡಿದರು.'' - ರಾಗಿಣಿ ದ್ವಿವೇದಿ

4. ನನ್ನ ಕೆರಿಯರ್ ಮುಗಿಸುವುದಕ್ಕೆ.! 
''ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿರುವ ಫೋಟೋಗಳನ್ನ ಎಡಿಟ್ ಮಾಡದೆ ಲೀಕ್ ಮಾಡಿದ್ದು ಯಾಕೆ? ನನ್ನ ಕೆರಿಯರ್ ಮುಗಿಸುವುದಕ್ಕೆ ಹೀಗೆಲ್ಲಾ ಮಾಡಿದ್ದಾರೆ.'' - ರಾಗಿಣಿ ದ್ವಿವೇದಿ

5. ನಿರ್ಮಾಪಕರಿಗೆ ತೊಂದರೆ ಆಗ್ಬಾರ್ದು ಅಂತ.... 
''ನಿರ್ಮಾಪಕರಿಗೆ ತೊಂದರೆ ಆಗ್ಬಾರ್ದು ಅಂತ ಸಿನಿಮಾದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದೆ. ನಿರ್ದೇಶಕರನ್ನ ಚೇಂಜ್ ಮಾಡಿ ಅಂದೆ. ನನ್ನ ಡೇಟ್ಸ್ ತೆಗೆದುಕೊಂಡು ವೇಸ್ಟ್ ಮಾಡಿದರು. ಹೀಗಾಗಿ ನಾನು 'ನಾಟಿ ಕೋಳಿ'ಯಿಂದ ಹೊರಬಂದೆ'' - ರಾಗಿಣಿ ದ್ವಿವೇದಿ

6. ಫೋಟೋಶೂಟ್ ನಲ್ಲಿ ಆಗಿದ್ದೇನು? 
ವಿಲ್ಸನ್ ಗಾರ್ಡನ್ ಸ್ಟುಡಿಯೋದಲ್ಲಿ 'ನಾಟಿ ಕೋಳಿ' ಚಿತ್ರದ ಫೋಟೋಶೂಟ್ ನಡೆಯುತ್ತಿತ್ತು. ಅಲ್ಲಿ ಏಕಾಏಕಿ ಆಗಮಿಸಿದ 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ್, ನಿರ್ದೇಶಕ ಶ್ರೀನಿವಾಸ್ ರಾಜು ಮತ್ತು ನಿರ್ಮಾಪಕ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ರು. ಅಲ್ಲದೇ, ತಾನು ರಾಗಿಣಿ ಬಾಯ್ ಫ್ರೆಂಡ್ ಅಂತ ಎಚ್ಚರಿಕೆ ನೀಡಿದ್ರು.

7.  ಚೇಂಬರ್ ನಲ್ಲಿ ಕಂಪ್ಲೇಂಟ್ ಆಗಿತ್ತು
ರಾದ್ಧಾಂತದ ನಂತ್ರ ನಿರ್ಮಾಪಕ ವೆಂಕಟೇಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದರು. ಘಟನೆಗೆ ಪರೋಕ್ಷವಾಗಿ ರಾಗಿಣಿ ಕಾರಣ ಅಂತ ಬೆಟ್ಟು ಮಾಡಿ ತೋರಿಸಿದರು ಕೂಡ.! ಇದಾದ ಮೇಲೆ 'ನಾಟಿ ಕೋಳಿ' ಟೀಮ್ ಗೆ ರಾಗಿಣಿ ಗುಡ್ ಬೈ ಹೇಳಿದ್ರು. 
Fresh Kannada

Fresh Kannada

No comments:

Post a Comment

Google+ Followers

Powered by Blogger.