Breaking News
recent

ವಿವಾದದ ಸುಳಿಯಲ್ಲಿ `ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಚಿತ್ರ

ಸ್ಯಾಂಡಲ್‍ವುಡ್‍ನಲ್ಲಿ ಟೈಟಲ್‍ಗೆ ಸಂಬಂಧಿಸಿದಂತೆ ಈಗ ಮತ್ತೊಂದು ವಿವಾದ ಶುರುವಾಗಿದೆ. `ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಎನ್ನುವ ಚಿತ್ರಕ್ಕೆ ಸಂಬಂಧಿಸಿದಂತೆ ಇದೀಗ ವಿವಾದ ಹುಟ್ಟಿಕೊಂಡಿದ್ದು, ಚಿತ್ರದ ಟೈಟಲ್ ಬದಲಾಯಿಸುವಂತೆ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ಆಗ್ರಹಿಸಿದ್ದಾರೆ.
ವಿವಾದದ ಸುಳಿಯಲ್ಲಿ `ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಚಿತ್ರ

ಕೋಮಲ್ ಹಾಗು ಪ್ರಿಯಾಮಣಿ ಅಭಿನಯದ `ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಚಿತ್ರ ಶುರುವಾದಾಗಿನಿಂದಲೂ ಬಾರೀ ಸುದ್ದಿ ಮಾಡುತ್ತಿತ್ತು. ಅದರಲ್ಲೂ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಮೇಲೆ ಗಾಂಧಿನಗರದಲ್ಲಿ ಇದರ ಬಗ್ಗೆ ಮಾತುಗಳು ಮತ್ತಷ್ಟು ಹೆಚ್ಚಾಗಿತ್ತು.
ಆದರೆ ಚಿತ್ರದ ಟೈಟಲ್ ಬಗ್ಗೆ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಟ್ಟಣ್ಣ ಕಣಗಲ್ ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ದೇಶಕ, ಅವರ ಹೆಸರನ್ನು ಬಳಸಿಕೊಂಡು, ಅವರಿಗೆ ಅವಮಾನ ಮಾಡುವಂತ ಕೆಲಸ ಮಾಡಬಾರದು ಎಂದು ರಮೇಶ್ ಹೇಳಿದ್ದಾರೆ. ಈ ಕುರಿತಂತೆ ನಿರ್ದೇಶಕ ಶ್ರೀನಿವಾಸ್ ರಾಜು ಅವರ ಜೊತೆ ಫಿಲ್ಮ್ ಚೇಂಬರ್‍ನಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಮುಂದೆ ಮಾತು ಮಾತುಕತೆ ನಡೆಸಲಾಗಿದೆ.
ಆದರೆ ಸಿನಿಮಾದಲ್ಲಿ ಪಟ್ಟಣ್ಣನವರಿಗೆ ಯಾವುದೇ ರೀತಿಯ ಅವಮಾನ ಮಾಡಿಲ್ಲ. ಇದು ಅವರ ಜೀವನ ಚರಿತ್ರೆ ಅಲ್ಲ. ಈ ಸಿನಿಮಾ ಡೈರೆಕ್ಟರ್ ಆಗಬೇಕೆಂದು ಗಾಂಧಿನಗರಕ್ಕೆ ಬರುವ ಯುವಕನ ಕಥೆ, ಹಾಗಾಗಿ ಈ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ನಿನ್ನೆಯಷ್ಟೇ ಪುಟ್ಟಣ್ಣನವರ ಹುಟ್ಟುಹಬ್ಬವಿತ್ತು, ಅದನ್ನು ಸ್ಮರಿಸಿಕೊಳ್ಳದ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್, ಸುಮ್ಮನೆ ಚಿತ್ರದ ಕುರಿತಂತೆ ವಿವಾದ ಹುಟ್ಟುಹಾಕುತ್ತಿಸದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪುಟ್ಟಣ್ಣನವರ ಪತ್ನಿಯ ಜೊತೆ ಈಗಾಗಲೇ ಶ್ರೀನಿವಾಸ್ ಚರ್ಚಿಸಿದ್ದು, ಪುಟ್ಟಣ್ಣನವರ ಪತ್ನಿ, ಸಿನಿಮಾ ಬಿಡುಗಡೆಗೆ ನನ್ನ ಕಡೆಯಿಂದ ಯಾವುದೇ ರೀತಿಯ ಆಕ್ಷೇಪವಿಲ್ಲ, ಆದರೆ ಬಿಡುಗಡೆಗೂ ಮೊದಲು ನನಗೆ ಚಿತ್ರ ತೋರಿಸಬೇಕು ಎಂದಿದ್ದಾರೆ.`ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಸಿನಿಮಾ ಜನವರಿ 1 ರಂದು ಬಿಡುಗಡೆಯಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.