Breaking News
recent

ಪೂಜಾ ಮದುವೆ ಮುರಿದುಬಿದ್ದಿದ್ದು ಯಾಕೆ ಗೊತ್ತಾ?

ನಟಿ ಪೂಜಾಗಾಂಧಿ ಅವರಿಗೆ ಈ ಹಿಂದೆ ಆನಂದ್ ಗೌಡ ಎಂಬ ಉದ್ಯಮಿ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಅದಾಗಿ ಒಂದು ತಿಂಗಳಿಗೆ ಅವರ ಮದುವೆ ಮುರಿದು ಬಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಅದಕ್ಕೆ ಏನು ಕಾರಣ ಎಂದು ಪೂಜಾ ಬಿಗ್‍ಬಾಸ್ ಮನೆಯಲ್ಲಿ ಅಯ್ಯಪ್ಪ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.

ಪಂಜಾಬಿ ಹುಡುಗಿ ಪೂಜಾಗಾಂಧಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ಸಿನ ತುತ್ತ ತುದಿಯಲ್ಲಿರುವಾಗಲೇ ಕನ್ನಡದ ಹುಡುಗನನ್ನು ಮದುವೆಯಾಗಲು ನಿರ್ಧಾರ ಮಾಡಿದ್ದರು. ಅದರಂತೆ 2012 ರಲ್ಲಿ ಆನಂದ್ ಗೌಡ ಎಂಬ ಉದ್ಯಮಿ ಜೊತೆ ನಿಶ್ಚಿತಾರ್ಥವೂ ಆಗಿತ್ತು.
ಆದರೆ ನಿಶ್ಚಿತಾರ್ಥವಾದ ಒಂದು ತಿಂಗಳಲ್ಲೇ ಅವರ ಮದುವೆ ಮುರಿದುಬಿದ್ದಿದ್ದು ಎಲ್ಲರನ್ನೂ ಅಚ್ಚರಿಪಡಿಸಿತ್ತು. ನನ್ನ ಮದುವೆ ಮುರಿದು ಬೀಳಲು ಪೂಜಾ ಅವರ ತಾಯಿ ಜ್ಯೋತಿ ಗಾಂಧಿ ಕಾರಣ. ಅವರು ನನ್ನ ಆಹಾರ ಪದ್ದತಿ, ಜಾತಿ ಮತ್ತು ಇನ್ನು ಹಲವು ವಿಚಾರಗಳ ಬಗ್ಗೆ ಅವಮಾನಿಸುತ್ತಿದ್ದರು ಎಂದು ಆನಂದ್ ಆರೋಪಿಸಿದ್ದರು.
ಆದರೆ ಇದೀಗ ಬಿಗ್‍ಬಾಸ್ ಮನೆಯಲ್ಲಿ ತನ್ನ ಮದುವೆ ಮುರಿದು ಬೀಳಲು ಕಾರಣವೇನು ಎಂಬುದನ್ನು ಪೂಜಾ ಬಹಿರಂಗಪಡಿಸಿದ್ದಾರೆ. ನಿಶ್ಚಿತಾರ್ಥವಾದ ದಿನ ಸಂಜೆ ಪಾರ್ಟಿಯಲ್ಲಿ ರೋಹನ್ ನನ್ನನ್ನು ಅವಾಚ್ಯ ಶಬ್ದದಿಂದ ಬೈದಿದ್ದರು. ಅದಾದ ನಂತರ ಹೊರಗಡೆ ಸುತ್ತಾಡಲು ಹೋದಾಗೆಲ್ಲ ಸಾರ್ವಜನಿಕ ಸ್ಥಳದಲ್ಲಿ ನನ್ನನ್ನು ನಿಂದಿಸುತ್ತಿದ್ದರು. ಕೈಗೆ ಸಿಕ್ಕ ವಸ್ತುವನ್ನು ನನ್ನ ಮೇಲೆ ಎಸೆಯುತ್ತಿದ್ದರು. ಅಲ್ಲದೆ ನನ್ನ ಸಹ ಕಲಾವಿದರೊಂದಿಗೆ ಚಿತ್ರೀಕರಣದಲ್ಲಿರುವಾಗ ಅನುಮಾನ ಪಡುತ್ತಿದ್ದರು. ಕಾರ್ ಡ್ರೈವರೊಂದಿಗೆ ಸಂಬಂಧವಿದೆ ಎಂದೆಲ್ಲಾ ಮಾತನಾಡಿದ್ದರು. ಹಾಗಾಗಿ ಈ ಮದುವೆ ಬೇಡವೆಂದು ತೀರ್ಮಾನಿಸಿದೆ ಎಂದು ಅವರು ಮನೆಯ ಸದಸ್ಯರ ಜೊತೆ ಹೇಳಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.