Breaking News
recent

ಪ್ರೀತಿಸಿದ ಗಂಡನಿಗೆ ಕೈಕೊಟ್ಟ ಪತ್ನಿ-ಆತ್ಮಹತ್ಯಗೆ ಶರಣಾದ ಪತಿ

ಬೆಂಗಳೂರು: ಪ್ರೀತಿಸಿ ಮದುವೆಯಾದವಳು ಗಂಡನನ್ನು ಬಿಟ್ಟು ಮತ್ತೊಂದು ಮದುವೆಯಾದಳು. ಇದರಿಂದ ಬೇಸತ್ತ ಪತಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಾಗರಬಾವಿಯಲ್ಲಿ ನಡೆದಿದೆ.
ಪ್ರೀತಿಸಿದ ಗಂಡನಿಗೆ ಕೈಕೊಟ್ಟ ಪತ್ನಿ-ಆತ್ಮಹತ್ಯಗೆ ಶರಣಾದ ಪತಿ

ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮುಕುಂದ-ಚೂಡಾಮಣಿ ಮದುವೆಯಾಗಿದ್ದರು. ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿದ್ದ ಮುಕುಂದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ,  ಚೂಡಾಮಣಿ ಎಸ್‍ಜೆಬಿಐಟಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.
ಈ ವೇಳೆ ನಾನು ಕೆಎಎಸ್ ಮಾಡಬೇಕು, ಮನೆಯಲ್ಲಿದ್ದರೆ ಓದಲು ಆಗುವುದಿಲ್ಲ, ನಾನು ಪಿಜಿಗೆ ಸೇರುತ್ತೇನೆ ಎಂದು ಗಂಡನ ಬಳಿ ಹೇಳಿಕೊಂಡಿದ್ದಾರೆ. ಆಗ ಗಂಡ ಪತ್ನಿಯ ಆಸೆಗೆ ಹಿಂದೂ ಮುಂದು ನೋಡದೇ ಓಕೆ ಎಂದಿದ್ದಾರೆ. ಆದರೆ ಮೈಸೂರು ಮೂಲದ ಯುವಕನೊಂದಿಗೆ ಮತ್ತೊಂದು ಮದುವೆಯಾಗಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೆ ಮುಕುಂದ ರಾತ್ರಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್‍ನೋಟ್‍ನಲ್ಲಿ ಏನಿತ್ತು?:” ಐ ಲವ್ ಯೂ ಚೂಡಾಮಣಿ. ಐ ಮಿಸ್ ಯೂ, ಹೆಚ್ಚು ಓದಿದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದೀಯಾ, ಅವಳು ನಿನ್ನೊಂದಿಗೆ ಹೆಚ್ಚು ದಿನ ಇರಲ್ಲ, ನಿನಗೆ ಕೈ ಕೊಟ್ಟು ಹೋಗುತ್ತಾಳೆ ಎಂದು ನನ್ನ ಅಪ್ಪ-ಅಮ್ಮ ಹೇಳುತ್ತಿದ್ದರು. ಆದರೆ ನಾನು ನಿನ್ನ ಪ್ರೀತಿಯನ್ನೇ ನಂಬಿದ್ದೆ. ನನ್ನ ಪ್ರೀತಿಗೆ ಮೋಸ ಮಾಡ್ಬಿಟ್ಟೆ, ಆಲ್ ದಿ ಬೆಸ್ಟ್, ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಮುಕುಂದಾ ತನ್ನ ಪತ್ನಿಗೆ ಶುಭಾಶಯ ಕೋರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. source publictv news 
Fresh Kannada

Fresh Kannada

No comments:

Post a Comment

Google+ Followers

Powered by Blogger.