Breaking News
recent

ಉದ್ಯಮಿ ವಿಜಯ್ ಮಲ್ಯರ ಐಷಾರಾಮಿ ವಿಮಾನ ಖರೀದಿ ಮಾಡ್ತೀರಾ?

ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯರ ಐಷಾರಾಮಿ ಜೆಟ್ ವಿಮಾನ ಸದ್ಯದಲ್ಲೇ ಗುಜರಿ ಸೇರಲಿದೆ.
ಉದ್ಯಮಿ ವಿಜಯ್ ಮಲ್ಯರ ಐಷಾರಾಮಿ ವಿಮಾನ ಖರೀದಿ ಮಾಡ್ತೀರಾ?

ಮುಂಬೈ ಹೈಕೋರ್ಟ್ ಮಾರ್ಚ್ 1ರ ಒಳಗಡೆ ವಿಮಾನವನ್ನು ಹರಾಜು ಹಾಕಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೇವಾ ತೆರಿಗೆ ಇಲಾಖೆ ಸದ್ಯದಲ್ಲೇ ಈ ವಿಮಾನವನ್ನು ಹರಾಜು ಹಾಕಲು ಮುಂದಾಗುತ್ತಿದೆ. ಮಲ್ಯರವರ ಸ್ವಂತ ಉಪಯೋಗದ ಲಕ್ಸುರಿ ಜೆಟ್ 319 ವಿಟಿ-ವಿಜೆಎಂ ಏರ್ ಬಸ್ ಬಿಡಿ ಭಾಗ ಖರೀದಿಸಲು ಭಾರೀ ಆಸಕ್ತಿ ತೋರಿಸಿದ್ದಾರೆ.
ಮಲ್ಯ 186 ಕೋಟಿ ರೂ. ಸೇವಾ ತೆರಿಗೆ ಕಟ್ಟದ ಕಾರಣ ಇಲಾಖೆ ಮೂರು ವರ್ಷದ ಹಿಂದೆ ಈ ವಿಮಾನವನ್ನು ಜಪ್ತಿ ಮಾಡಿಕೊಂಡಿತ್ತು. 2006ರಲ್ಲಿ ತಯಾರಾಗಿರುವ ಈ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
27 ಆಸನಗಳುಳ್ಳ ವಿಮಾನವನ್ನು ಮಲ್ಯ 25 ದಶಲಕ್ಷ ಡಾಲರ್(ಅಂದಾಜು 166 ಕೋಟಿ ರೂ.) ನೀಡಿ ಖರೀದಿಸಿದ್ದರು. ನಂತರ ಇದರ ಒಳಾಂಗಣ ವಿನ್ಯಾಸಕ್ಕಾಗಿ ಮಲ್ಯ 2 ದಶಲಕ್ಷ ಡಾಲರ್(13.32 P ಅಂದಾಜು 13.32 ಕೋಟಿ ರೂ.) ಖರ್ಚು ಮಾಡಿದ್ದರು. ಈ ವಿಮಾನ ಒಳಗಡೆ ಮಿನಿ ಬಾರ್, ಆಡುಗೆ ಮನೆ, ಮಲಗುವ ಕೋಣೆ, ಶೌಚಗೃಹ, ಬಿಸಿನೆಸ್ ವಿಭಾಗ ಇದೆ.
ವಿಮಾನದಲ್ಲಿ ಒಟ್ಟು ನಾಲ್ಕು ಪಿಕಾಸೋ ಕಲಾಕೃತಿಗಳು ಹಾಗೂ 8 ಕ್ಯಾರಟ್ ಗುಣಮಟ್ಟದ 15 ವಜ್ರದ ಹರಳುಗಳುಳ್ಳ ಬಾಲಾಜಿ ಮೂರ್ತಿ ಇದ್ದು ಅದನ್ನು ಮಲ್ಯರಿಗೆ ನೀಡಲಾಗಿದೆ.
ಹೊರಗಡೆ ತುಕ್ಕು ಹಿಡಿದಿದ್ದರೂ, ವಿಮಾನದ ಪರಿಸ್ಥಿತಿ ಉತ್ತಮವಾಗಿದೆ ಎಂದು ಇತ್ತೀಚಿಗೆ ವಿಮಾನವನ್ನು ಪರಿಶೀಲಿಸಿದ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.