Breaking News
recent

ಬಿಗ್‍ಬಾಸ್ ಮನೆಯಲ್ಲಿ ಮುಗೀತು ನೇತ್ರಾರ ಪಾತ್ರ

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಾಮಾಂಕಿತರಾಗಿದ್ದ ಐವರಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ತೆರೆ ಬಿದ್ದಾಗಿದೆ. ಈ ವಾರ ಬಿಗ್‍ಬಾಸ್ ನಿಂದ ನೇತ್ರಾ ಎಲಿಮಿನೇಟ್ ಆಗಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ಮುಗೀತು ನೇತ್ರಾರ ಪಾತ್ರ

ವಿಪರ್ಯಾಸವೆಂದರೆ ನೇತ್ರಾ ಮನೆಯವರಿಂದ ಎಲಿಮಿನೇಷನ್ ಗೆ ನಾಮಾಂಕಿತರಾಗಿರಲಿಲ್ಲ. ಬದಲಿಗೆ ಕಳೆದ ವಾರದ ಅತಿಥಿ ದೇವೂ ಭವ ಟಾಸ್ಕಿನ ನಿಯಮದಂತೆ ಸೋತ ತಂಡ ನೇರವಾಗಿ ನಾಮಿನೇಟ್ ಆಗಿತ್ತು. ಅದರಲ್ಲಿ ಶೃತಿ, ಕಿಟ್ಟಿ, ರೆಹಮಾನ್ ಮತ್ತು ಕೃತಿಕಾ ಹೆಚ್ಚು ಮತಗಳನ್ನು ಪಡೆದು ಮನೆಯಲ್ಲಿ ಉಳಿದುಕೊಂಡರೆ, ಆರ್‍ಜೆ ನೇತ್ರಾ ಬಿಗ್‍ಬಾಸ್ ಮನೆಯಲ್ಲಿ ತಮ್ಮ ಪಾತ್ರ ಮುಗಿಸಿ ಇದೀಗ ಹೊರಬಂದಿದ್ದಾರೆ.

ರೇಡಿಯೋ ಮೂಲಕ ಕೇಳುಗರಿಗೆ ದನಿಯಾಗಿದ್ದ ನೇತ್ರಾ ಬಿಗ್‍ಬಾಸ್ ಮನೆಯಲ್ಲಿ ಯಾರೊಂದಿಗೂ ನಿಷ್ಠುರ ಕಟ್ಟಿಕೊಳ್ಳದೆ ಆಟವಾಡಿದರು. ಅವರದ್ದು ನೇರ ಮಾತು, ಮುಚ್ಚು ಮರೆ ಮಾಡಿ ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಮನೆಯವರೆಲ್ಲರೂ ನೇತ್ರಾ ಅವರನ್ನು ಇಷ್ಟಪಡುತ್ತಿದ್ದರು.

ಇದಕ್ಕೆ ಸಾಕ್ಷಿಯೆಂಬಂತೆ ಮನೆಯ ಕ್ಯಾಪ್ಟನ್ ಸ್ಥಾನವೂ ನೇತ್ರಾಗೆ ಸಿಕ್ಕಿತ್ತು. ಆದರೆ ನಾಮಿನೇಷನ್ ಬಗ್ಗೆ ಮನೆಯವರೊಂದಿಗೆ ಚರ್ಚಿಸಿ ಅವರು ಆ ಸ್ಥಾನವನ್ನು ಕಳೆದುಕೊಂಡಿದ್ದರು. ಕೆಲವು ಸಂದರ್ಭಗಳಲ್ಲಿ ಸುನಾಮಿ ಕಿಟ್ಟಿ ಜೊತೆಗೆ ಮನಸ್ತಾಪಗಳು ಮಾಡಿಕೊಂಡಿದ್ದು ಬಿಟ್ಟರೆ ನೇತ್ರಾ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.