Breaking News
recent

ಅರವತ್ತೈದನೇ ಹುಟ್ಟುಹಬ್ಬಕ್ಕೆ ರಜನಿಯ ಆರು ಸ್ಟೈಲುಗಳು

ಬಸ್ ಕಂಡಕ್ಟರ್ ವೃತ್ತಿಯಿಂದ ಇವತ್ತು ಸೂಪರ್ ಸ್ಟಾರ್ ವರೆಗೂ ಬೆಳೆದು ನಿಂತಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು 65 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಅರವತ್ತೈದನೇ ಹುಟ್ಟುಹಬ್ಬಕ್ಕೆ ರಜನಿಯ ಆರು ಸ್ಟೈಲುಗಳು

ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ, ತೆಲುಗು, ಕನ್ನಡ, ಹಿಂದಿ ಬಾಷೆಗಳಲ್ಲೂ ಸಿನಿಮಾ ಮಾಡಿರುವ ಸೂಪರ್ ಸ್ಟಾರ್ ರಜನಿ ಅವರು ಎಲ್ಲಾ ಕ್ಷೇತ್ರಗಳಲ್ಲೂ ಆಲ್ ರೌಂಡರ್. ಜೊತೆಗೆ ರಜನಿ ಅವರನ್ನು ದಕ್ಷಿಣ ಭಾರತದ ಮುಖಪುಟ ಅಂತಾನೇ ಕರೆಯುತ್ತಾರೆ.

ಅಂದಹಾಗೆ ರಜನಿ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೂ ಕೂಡ ಇತ್ತೀಚೆಗೆ ಚೆನ್ನೈ ನಲ್ಲಿ ನಡೆದ ಭಾರಿ ಜಲಪ್ರಳಯದಿಂದಾಗಿ, ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಸೂಪರ್ ಸ್ಟಾರ್ ರಜನಿ ಅವರು ನಿರ್ಧರಿಸಿದ್ದಾರೆ.

ಅವರದೇ ಆದ ಡಿಫರೆಂಟ್ ಸ್ಟೈಲ್, ವಿಭಿನ್ನ ಮಾತುಗಾರಿಕೆಯಿಂದ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಸೂಪರ್ ಸ್ಟಾರ್ ರಜನಿ ಅವರಿಗೆ ಎಲ್ಲೇ ಮೀರಿದ ಅಭಿಮಾನಿ ಬಳಗ ಇದೆ. ಜೊತೆಗೆ ಅವರ ಸ್ಟೈಲ್ ಗಳನ್ನು ಫಾಲೋ ಮಾಡುವವರು ನಮಗೆ ಹಲವರು ಸಿಗುತ್ತಾರೆ.

ತಮ್ಮದೇ ಆದ ವಿಭಿನ್ನ ಶೈಲಿಯಿಂದ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಹತ್ತಿರವಾಗಿರುವ ಸೂಪರ್ ಸ್ಟಾರ್ ರಜನಿ ಅವರಿಗೆ ಅವರದೇ ಆದ ಹಲವಾರು ವಿಶೇಷತೆಗಳಿವೆ ಅದೇನೆಂಬುದನ್ನು ತಿಳಿಯಲು ಕೆಳಗಿನ ಅಪ್ಡೇಟ್ ಓದಿ....


1. ಸೂಪರ್ ಸ್ಟಾರ್ ಮಾಡುವ ನಮಸ್ಕಾರದ, ಚಮತ್ಕಾರ 
ಸೂಪರ್ ಸ್ಟಾರ್ ರಜನಿ ಅವರು ಹಲವು ಸಿನಿಮಾಗಳಲ್ಲಿ ನಮಸ್ಕಾರ ಮಾಡುತ್ತಿದ್ದ ರೀತಿ ಎಂತಹವನಿಗೂ ಕೂಡ ಚಮತ್ಕಾರವನ್ನುಂಟು ಮಾಡುತ್ತಿತ್ತು. ಸಾಮಾನ್ಯವಾಗಿ ಎಲ್ಲರಂತೆ ನಮಸ್ಕಾರ ಮಾಡದ ರಜನಿ ಅವರು ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ನಮಸ್ಕಾರ ಮಾಡಿ ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿದ್ದರು

2. ವಿಭಿನ್ನ ಶೈಲಿಯ ಸೆಲ್ಯೂಟ್ 
ಅಂದಹಾಗೆ ಸೂಪರ್ ಸ್ಟಾರ್ ರಜನಿ ಅವರು ಬರೀ ನಮಸ್ಕಾರ ಮಾತ್ರವಲ್ಲದೇ, ಸೆಲ್ಯೂಟ್ ಮೂಲಕ ಕೂಡ ಮನೆ ಮಾತಾಗಿದ್ದವರು. ಮಾಮೂಲಿಯಾಗಿ ಸೆಲ್ಯೂಟ್ ಹೊಡೆಯದ ರಜನಿ ಅವರು ತಮ್ಮ ಬಲಗೈ ಅನ್ನು ತಿರುವಿ ಹೊಡೆಯುತ್ತಿದ್ದ ವಿಭಿನ್ನ ಸೆಲ್ಯೂಟ್ ಸ್ಟೈಲ್ ಗೆ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದರು.

3. ಸಿಗರೇಟ್ ಸೇದುವ ಸ್ಟೈಲ್ 
ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವೊಬ್ಬ ನಟನಿಗೂ ಬರದ ಒಂದೇ ಒಂದು ಸ್ಟೈಲ್ ಅನ್ನು ರಜನಿ ಅವರು ಮೈಗೂಡಿಸಿಕೊಂಡಿದ್ದಾರೆ. ವಿಶಿಷ್ಟ ಶೈಲಿಯಲ್ಲಿ ಸೀಗರೇಟ್ ಅನ್ನು ಬಾಯಿಗೆ ಹಾಕಿಕೊಂಡು ಸೇದುವ ಆ ಸ್ಟೈಲ್ ನಿಂದ ಸೂಪರ್ ಸ್ಟಾರ್ ರಜನಿ ಅವರು ಚಿತ್ರರಂಗದ ಐಕಾನ್ ಆದವರು. ಜೊತೆಗೆ ಇವರ ಎಲ್ಲಾ ಸ್ಟೈಲ್ ಗಳಲ್ಲಿ, ಸಿಗರೇಟ್ ಸೇದುವ ಸ್ಟೈಲ್ ಮಾತ್ರ ಭಾರಿ ಜನಪ್ರಿಯವಾಗಿದೆ.

4. ಕೂಲಿಂಗ್ ಗ್ಲಾಸ್ ಕಣ್ಣಿಗೇರಿಸಿಕೊಳ್ಳುವ ರೀತಿ 
ತಲೈವಾ ಕೂಲಿಂಗ್ ಗ್ಲಾಸ್ ಕಣ್ಣಿಗೇರಿಸಿಕೊಳ್ಳುವ ಸ್ಟೈಲ್ ಮಾತ್ರ ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಇಷ್ಟ ಆಗುವ ಸ್ಟೈಲ್. ಇಂದಿಗೂ ಕೂಡ ರಜನಿ ಕಾಂತ್ ಅವರು ಕನ್ನಡಕ ಕಣ್ಣಿಗೇರಿಸಿಕೊಳ್ಳುವ ಶೈಲಿಯನ್ನು ಅನೇಕ ಮಂದಿ ಅನುಕರಣೆ ಮಾಡುವುದುಂಟು. ಮಾತ್ರವಲ್ಲದೇ ಇದನ್ನು ಒಂದು ಟ್ರೆಂಡ್ ಆಗಿ ಕೂಡ ಈಗಿನ ಯುವಜನತೆ ಬಳಸುತ್ತಿದೆ. ಅದೂ ಕೂಡ ತಮಿಳುನಾಡಿನಲ್ಲಿ ಕೊಂಚ ಜಾಸ್ತಿ ಅಂತಾನೇ ಹೇಳಬಹುದು.

5. ನಡೆಯುವ ಸ್ಟೈಲ್ 
ತಲೈವಾ ಅವರ ಇನ್ನೊಂದು ಮುಖ್ಯವಾದ ಸ್ಟೈಲ್ ಎಂದರೆ ಅದು ನಡೆಯುವ ಶೈಲಿ. ಬಹಳ ಆತ್ಮವಿಶ್ವಾಸದಿಂದ ಸ್ಲೋ ಮೋಶನ್ ನಲ್ಲಿ ತಾವು ಹಾಕಿಕೊಂಡಿರುವ ಕೋಟ್ ಅನ್ನು ಎಗರಿಸಿ ನಡೆದಾಡುವ ಅವರ ಶೈಲಿಗೆ ಪ್ರತಿಯೊಬ್ಬ ಪ್ರೇಕ್ಷಕನೂ ಶಿಳ್ಳೆ ಹೊಡೆಯುತ್ತಾನೆ.

6. ತಲೈವಾ ಹೇರ್ ಸ್ಟೈಲ್ ಸೂಪರ್
ನಮ್ಮಲ್ಲಿ ಹಲವಾರು ನಟರು ಸಿನಿಮಾ ಮಾಡುವಾಗಿನ ಸಂದರ್ಭದಲ್ಲಿ ತಮ್ಮ ಹೇರ್ ಸ್ಟೈಲ್ ನ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಆದರೆ ನಮ್ಮ ತಲೈವಾ ಮಾತ್ರ ತಮ್ಮ ಕೈಗಳನ್ನೇ ಬಾಚಣಿಕೆಯನ್ನಾಗಿ ಮಾಡಿಕೊಂಡು ತಮ್ಮ ತಲೆಗೂದಲನ್ನು ತಿದ್ದಿಕೊಳ್ಳುತ್ತಿದ್ದರು. ತಮ್ಮ ಗರಿಗರಿಯಾದ ಕೂದಲುಗಳ ಮಧ್ಯೆ ಒಮ್ಮೆ ಬೆರಳಾಡಿಸಿದರೆ ಮುಗಿದು ಹೋಗುತ್ತಿತ್ತು ಕೂದಲು ಅವರು ಹೇಳಿದಂತೆ ಕೇಳುತ್ತಿತ್ತು. ಒಟ್ನಲ್ಲಿ ಇದೂ ಕೂಡ ಒಂದು ಐಕಾನ್ ಆಯ್ತು.

7. ರಜನಿ ಅವರ ಸ್ಯಾಂಡಲ್ ವುಡ್ ಜರ್ನಿ 
1975 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಕಥಾಸಂಗಮ' ದಿಂದ ಆರಂಭವಾದ ಅವರ ಸ್ಯಾಂಡಲ್ ವುಡ್ ಜರ್ನಿ ನಂತರ 'ಬಾಳುಜೇನು', 'ಒಂದು ಪ್ರೇಮದ ಕಥೆ', ನಟ ವಿಷ್ಣುವರ್ಧನ್ ಅವರ ಜೊತೆ 'ಸಹೋದರರ ಸವಾಲ್', 'ಕುಂಕುಮ ರಕ್ಷೆ', 'ಗಲಾಟೆ ಸಂಸಾರ', 'ಕಿಲಾಡಿ ಕಿಟ್ಟು', 'ಮಾತು ತಪ್ಪದ ಮಗ', 'ತಪ್ಪಿದ ತಾಳ', 'ಪ್ರೀಯಾ', 'ಘರ್ಜನೆ' ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿ ಅಲ್ಲಿಗೆ ಕನ್ನಡ ಚಿತ್ರರಂಗಕ್ಕೆ ಬಾಯ್ ಹೇಳಿ ತಮಿಳು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡರು.
Fresh Kannada

Fresh Kannada

No comments:

Post a Comment

Google+ Followers

Powered by Blogger.