Breaking News
recent

ಸ್ಯಾಂಡಲ್‍ವುಡ್ ನಟಿ ರಾಗಿಣಿ ವಿರುದ್ಧ ದೂರು

ಸ್ಯಾಂಡಲ್‍ವುಡ್ ನಟಿ ರಾಗಿಣಿ ಮತ್ತು ಸಹೋದರ ರುದ್ರಾಕ್ಷ ದೀಕ್ಷಿತ್ ವಿರುದ್ಧ ನಾಟಿಕೋಟಿ ಚಿತ್ರದ ನಿರ್ಮಾಪಕ ವೆಂಕಟ್  ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಯಾಂಡಲ್‍ವುಡ್ ನಟಿ ರಾಗಿಣಿ ವಿರುದ್ಧ ದೂರು

ನಾಟಿ ಕೋಟಿ ಚಿತ್ರ ನಿರ್ಮಿಸಲು ಮುಂಗಡವಾಗಿ ನೀಡಿದ್ದ 16 ಲಕ್ಷ ರೂ.ವನ್ನು ವಾಪಸ್ ನೀಡದ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ವೆಂಕಟ್ ದೂರು ನೀಡಿದ್ದಾರೆ.
ನಾಟಿ ಕೋಳಿ ಚಿತ್ರದ ನಟಿಯಾಗಿ ರಾಗಿಣಿ ಆಯ್ಕೆಯಾಗಿದ್ದರು. ಈ ವೇಳೆ ಮುಂಗಡವಾಗಿ 16 ಲಕ್ಷ ರೂ. ಪಡೆದಿದ್ದರು.  ಆದರೆ ಮುಂಗಡವಾಗಿ ನೀಡಿದ್ದ ಹಣ ಇನ್ನೂ ನಮ್ಮ ಕೈಸೇರಿಲ್ಲ ಎಂದು ವೆಂಕಟೇಶ್ ಮೇ ತಿಂಗಳಿನಲ್ಲಿ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು.
ದೂರಿನ ಬಗ್ಗೆ ರಾಗಿಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಗಿಣಿ ನಾನು ಮನೆಯಲ್ಲಿದ್ದೇನೆ. ಆರೋಗ್ಯ ಸರಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿನಿಮಾದಲ್ಲಿ ಪ್ರತಿ ಸೀನ್ ಕುರಿತು ನನ್ನ ಒಪ್ಪಿಗೆ ಪಡೆಯಬೇಕು. ಪೋಸ್ಟರ್‍ಗಳು ನಾನು ಅನುಮತಿ ನೀಡಿದ ನಂತರವೇ ರಿಲೀಸ್ ಮಾಡಬೇಕು ಎಂಬ ಷರತ್ತು ಹಾಕಿದ ಹಿನ್ನೆಲೆಯಲ್ಲಿ ರಾಗಿಣಿಗೆ ಚಿತ್ರದಿಂದ ಕೊಕ್ ನೀಡಲಾಗಿತ್ತು.  ಆದರೆ ಮುಂಗಡವಾಗಿ ನೀಡಿದ್ದ ಹಣ ಇನ್ನೂ ನಮ್ಮ ಕೈಸೇರಿಲ್ಲ ಎಂದು ವೆಂಕಟೇಶ್ ದೂರಿನಲ್ಲಿ ವಿವರಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.