Breaking News
recent

ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವೀಕ್ಷಕರಿಗೆ ಈ ವೀಕೆಂಡ್ ನಲ್ಲಿ ಡಬಲ್ ಧಮಾಕಾ.
ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ

ಅದೇನಂತೀರಾ?, ತೂಗುದೀಪ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಾಹಿತ್ಯ ಬರಹಗಾರ ಕವಿರಾಜ್ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಾರ (ನವೆಂಬರ್ 29) ಭರ್ಜರಿಯಾಗಿ ನಡೆಯಲಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಡಿಯೋ ಬಿಡುಗಡೆ ಮಾಡಲಿದ್ದಾರೆ. ನಟ-ನಿರೂಪಕ ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್' ನಲ್ಲಿ ನಮ್ಮ ಸಿನಿಮಾ ಚಾಲನೆ ಪಡೆದುಕೊಂಡಿತ್ತು.

ಇದೀಗ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಬಿಗ್ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಆಡಿಯೋ ಬಿಡುಗಡೆ ನಡೆಯುತ್ತಿದೆ. ಇದು ಕಿಚ್ಚ ಸುದೀಪ್ ಅವರ ಐಡಿಯಾ ಮತ್ತು ಆಡಿಯೋ ಬಿಡುಗಡೆಗೆ ಇದೊಂದು ಒಳ್ಳೆ ವೇದಿಕೆ ಆದ್ದರಿಂದ ಒಪ್ಪಿಕೊಂಡೆವು ಎನ್ನುತ್ತಾರೆ ನಿರ್ಮಾಪಕ ದಿನಕರ್ ತೂಗುದೀಪ್.

ಈ ಒಂದು ಘಂಟೆಯ ಕಾರ್ಯಕ್ರಮದಲ್ಲಿ ಹಾಡುಗಳ ಕೆಲವು ದೃಶ್ಯಗಳನ್ನು ಬಿತ್ತರಿಸಲಾಗುವುದು ಹಾಗೆಯೇ ಚೊಚ್ಚಲ ನಾಯಕ ಸೂರಜ್ ಗೌಡ ಮತ್ತು ಅಮೂಲ್ಯ ಅವರ ನೃತ್ಯ ಕಾರ್ಯಕ್ರಮ ಜೊತೆಗೆ ವಿ.ಹರಿಕೃಷ್ಣ ಅವರ ಸಂಗೀತ ಕಾರ್ಯಕ್ರಮ ಕೂಡ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡದ ಎವರ್ ಗ್ರೀನ್ ನಟ ಅನಂತ್ ನಾಗ್ ಭಾಗವಹಿಸಲಿದ್ದಾರೆ.

ಸೋಮವಾರದಿಂದ ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗೀತೆ ರಚನೆಕಾರರಿಂದ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಕವಿರಾಜ್ ಆಕ್ಷನ್-ಕಟ್ ಹೇಳಿರುವ ಚೊಚ್ಚಲ ಚಿತ್ರದಲ್ಲಿ ಹೊಸ ಪ್ರತಿಭೆ ಸೂರಜ್ ಗೌಡ, ನಟಿ ಅಮೂಲ್ಯ, ಅನಂತ್ ನಾಗ್, ಚಿತ್ರಾ ಶೆಣೈ, ಅಚ್ಯುತ್ ಕುಮಾರ್ ಸೇರಿದಂತೆ ಸಂಗೀತಾ, ಶಾಲಿನಿ ಮುಂತಾದವರು ಕಾಣಿಸಿಕೊಂಡಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.