Breaking News
recent

50 ದಿನಗಳನ್ನು ಪೂರೈಸಿದ್ರು ಬಿಗ್ ಮಂದಿ

ಬಿಗ್‍ಬಾಸ್ ಎಂಬ ಓಟದಲ್ಲಿ ಸ್ಪರ್ಧಿಗಳು ಈಗಾಗಲೇ ಅರ್ಧದಷ್ಟು ಹಾದಿಯನ್ನು ಕ್ರಮಿಸಿ ಆಗಿದೆ. ಈಗ ಬಿಗ್‍ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳು ಮನೆಗೆ ಪ್ರವೇಶ ನೀಡಿ 50 ದಿನಗಳನ್ನು ಪೂರೈಸಿದ್ದಾರೆ.
bigg boss 3 kannada 50days episodes

ಈ ನೂರು ದಿನಗಳ ಆಟಕ್ಕೆಂದು ಬಂದವರು 13 ಮಂದಿ ಸ್ಪರ್ಧಿಗಳು. ಅವರಲ್ಲಿ ಕಳೆದ 7 ವಾರಗಳಲ್ಲಿ ಮಾಧುರಿ, ಜಯಶ್ರೀ, ಹುಚ್ಚ ವೆಂಕಟ್, ರವಿ ಮುರೂರ್, ನೇಹಾ ಗೌಡ ಮತ್ತು ನೇತ್ರಾ 50 ದಿನಗಳ ಮುಂಚೆಯೇ ಎಲಿಮಿನೇಟ್ ಆಗಿದ್ದಾರೆ.

ಅಲ್ಲದೆ ಮಿತ್ರಾ, ಗೌತಮಿ ಮತ್ತು ಸುಷ್ಮಾ ವೀರ್ ಹೊಸದಾಗಿ ಬಂದು ಬಿಗ್‍ಬಾಸ್ ಮನೆ ಸೇರಿದ್ದಾರೆ. ಈಗ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಿಗೆ 50 ದಿನಗಳನ್ನು ಪೂರೈಸಿರುವ ಖುಷಿ ಒಂದೆಡೆಯಾದರೆ ಅಸಲಿ ಆಟ ಈಗ ಶುರು ಎಂಬ ಎಚ್ಚರಿಕೆ ಮತ್ತೊಂದೆಡೆ.

ಒಟ್ಟಾರೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಬಿಗ್‍ಬಾಸ್ ಸದ್ಯಕ್ಕೆ ಮಧ್ಯಂತರ ತಲುಪಿದೆ. ಇನ್ನು 100 ದಿನಗಳ ಕ್ಲೈಮ್ಯಾಕ್ಸ್ ತನಕ ಮನೆಯಲ್ಲಿ ಉಳಿಯುವವರು ಯಾರು ಎಂಬುದನ್ನು ಕಾದು ನೋಡಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.