Breaking News
recent

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಮತ್ತೆ ಮಳೆ..

ನವೆಂಬರ್ ತಿಂಗಳು ಶುರುವಾದಾಗಿನಿಂದ ಮಳೆ, ಶೀತಗಾಳಿಯಿಂದ ರಾಜ್ಯದ ಜನ ತತ್ತರಿಸಿ ಹೋದರು.
www.FreshKannada.com

ಚೆನ್ನೈ, ಆಂಧ್ರಪ್ರದೇಶದ ಹಲವೆಡೆ ಜಲಪ್ರಳಯಕ್ಕೆ ಜನ ಇವತ್ತಿಗೂ ಸುಧಾರಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೆ ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬೆಹಾಕಲು ರೆಡಿಯಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾದ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಮತ್ತೆ ಮೂರುದಿನ ಮಳೆಯಾಗುವ ಸಂಭವವಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಮಂಡ್ಯ, ಮೈಸೂರು, ಬೆಂಗಳೂರು, ಚಾಮರಾಜನಗರ, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ನವೆಂಬರ್ ಮೊದಲ ವಾರದಿಂದ ಮೊನ್ನೆ ಮೊನ್ನೆವರೆಗೂ ಸುರಿದ ಮಳೆಗೆ ತಮಿಳುನಾಡಲ್ಲಿ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ, ಆಂಧ್ರದಲ್ಲಿ 15 ಜನ ಜೀವಬಿಟ್ಟಿದ್ದರು. ಕರ್ನಾಟಕದಲ್ಲಂತೂ ಜನ ಜ್ವರ, ಶೀತ, ನೆಗಡಿಯಿಂದ ಆಸ್ಪತ್ರೆ ಪಾಲಾಗಿದ್ದಾರೆ. ಈಗ ಅಂತಹದ್ದೇ ಮಳೆ ಮತ್ತೆ ಆರ್ಭಟಿಸಲು ಬರುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.