Breaking News
recent

ಬಿಗ್‍ಬಾಸ್: ಅಯ್ಯಪ್ಪಗೆ 300 ವಿಕೆಟ್!?

ಅಯ್ಯಪ್ಪ ಈಗಾಗಲೇ ಬಹಳಷ್ಟು ಹುಡುಗಿಯರನ್ನು ಬೀಳಿಸಿದ್ದಾರೆ ಎಂಬ ವಿಷಯವನ್ನು ಚಂದನ್ ಬಹಿರಂಗಪಡಿಸಿದ್ದಾರೆ. ಅಯ್ಯಪ್ಪ ಅವರು 300 ವಿಕೆಟ್‍ಗಳನ್ನು ಬೀಳಿಸಿ ಇನ್ನೂ ಮುಂದುವರೆಯುತ್ತಿದ್ದಾರೆ ಎಂದು ಚಂದನ್ ಪರೋಕ್ಷವಾಗಿ ನಟ ಸುದೀಪ್ ಬಳಿ ಶನಿವಾರ ಬಿಗ್‍ಬಾಸ್ ಸಂಚಿಕೆಯಲ್ಲಿ ಹೇಳಿದರು.
ಬಿಗ್‍ಬಾಸ್: ಅಯ್ಯಪ್ಪಗೆ 300 ವಿಕೆಟ್!?

ಅಯ್ಯಪ್ಪ ಅವರ ಕೃಷ್ಣ ಲೀಲೆಯಲ್ಲಿ ಕೆಲವು ತುಂಬಾ ಸೀರಿಯಸ್, ಇನ್ನು ಕೆಲವು ಹಾರ್ಟ್ ಬ್ರೇಕಿಂಗ್ ಅಲ್ಲದೆ ಮನೆಯಲ್ಲಿಯೂ ಅಯ್ಯಪ್ಪಗೆ ಮೂರುವರೆ ಹುಡುಗಿಯರು ಫಿದಾ ಆಗಿದ್ದಾರೆ ಎಂದು ಚಂದನ್ ಹಾಸ್ಯ ಮಾಡಿದರು. ಇದನ್ನೆಲ್ಲಾ ಕೇಳಿಸಿಕೊಂಡ ಅಯ್ಯಪ್ಪ ಅವರು ಕೂಡ ಈ ವಿಷಯವನ್ನು ತಳ್ಳಿಹಾಕಲಿಲ್ಲ.

ಮೊದಲಿಗೆ ಬಿಗ್‍ಬಾಸ್ ಮನೆಯಲ್ಲಿ ನೃತ್ಯಗಾರ್ತಿ ಜಯಶ್ರೀ ಜೊತೆ ಅಯ್ಯಪ್ಪ ಬಹಳಷ್ಟು ಸಲಿಗೆಯಿಂದ ಇದ್ದರು. ಆದರೆ ಜಯಶ್ರೀ ಬೇಗನೇ ಎಲಿಮಿನೇಟ್ ಆದ ಕಾರಣ ಅದು ಅಲ್ಲಿಗೇ ಕೊನೆಯಾಯಿತು. ಇದೀಗ ಪೂಜಾ ಕೂಡ ಅಯ್ಯಪ್ಪ ಬಗ್ಗೆ ಸೀರಿಯಸ್ ಆಗುತ್ತಿದ್ದಾರೆ ಎನ್ನಿಸುತ್ತಿದೆ ಎಂಬುದು ಮನೆಯವರ ಅಭಿಪ್ರಾಯ.

ಬಿಗ್‍ಬಾಸ್ ಮನೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಯಾವುದನ್ನೂ ಇಲ್ಲಿ ಗಂಭೀರವಾಗಿ ತೆಗೆದುಕೊಳ್ಳಬಾರದು. ನಾನು ಪಕ್ಷಿ ವೀಕ್ಷಣೆ ಮಾಡಿ ಕಣ್ಣು ತಂಪು ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅಯ್ಯಪ್ಪ. ಬಿಗ್‍ಬಾಸ್ ಮನೆಗೆ ಬರುವ ಮುಂಚೆಯಿಂದಲೂ ಅಯ್ಯಪ್ಪ ಅವರ ಸ್ನೇಹಿತರಾಗಿರುವ ಚಂದನ್ ಅಯ್ಯಪ್ಪ ಅವರ ಬಗ್ಗೆ ಈ ರೀತಿ ಹೇಳಿರುವುದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅಯ್ಯಪ್ಪ ಅವರೇ ಸ್ಪಷ್ಟಪಡಿಸಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.