Breaking News
recent

ಶಿವಣ್ಣ ಕೈಯಲ್ಲಿವೆ ಬರೋಬ್ಬರಿ 30 ಚಿತ್ರಗಳು!

ಸೆಂಚುರಿ ಸ್ಟಾರ್ ಸ್ಯಾಂಡಲ್‍ವುಡ್‍ನ ಚಿರಯುವಕ ಶಿವರಾಜ್‍ಕುಮಾರ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸ್ಮಾರ್ಟ್‍ಯಾಗಿದ್ದಾರೆ.
ಶಿವಣ್ಣ ಕೈಯಲ್ಲಿವೆ ಬರೋಬ್ಬರಿ 30 ಚಿತ್ರಗಳು!

ಯಂಗ್‍ಸ್ಟರ್‍ಗಳಿಗೂ ಪ್ರತಿಸ್ಪರ್ಧಿಯಾಗಿರುವ ಶಿವಣ್ಣ ಕೈಯಲ್ಲಿ ಕೈತುಂಬಾ ಸಿನಿಮಾ ಅಫರ್‍ಗಳಿವೆ.
ಸೆಂಚುರಿ ಸ್ಟಾರ್ ಶಿವಣ್ಣ ಸೆಂಚುರಿ ಹೊಡೆದಿದ್ದರೂ ಅವಕಾಶಗಳು ಮಾತ್ರ ಹರಿದುಬರುತ್ತಲೇ ಇದೆ. ನಿರ್ಮಾಪಕರಿಗೆ ಮಾತ್ರವಲ್ಲ ಚಿತ್ರರಂಗದ ಎಲ್ಲರ ನೆಚ್ಚಿನ ನಟ ಶಿವಣ್ಣ ಕೈಯಲ್ಲಿ ಈಗ ಏನಿಲ್ಲವೆಂದರೂ 30 ಸಿನಿಮಾಗಳಿವೆ.
ವರ್ಷಕ್ಕೆ ಎರಡು ಸಿನಿಮಾಗಳಂತೆ ಚಿತ್ರೀಕರಣ ಮುಗಿಸಿದರೂ ಇನ್ನು 10 ವರ್ಷ ಶಿವಣ್ಣನ ಕಾಲ್‍ಶಿಟ್ ಬುಕ್ ಎಂದೇ ಹೇಳಬಹುದು. ಸದ್ಯಕ್ಕೆ ಕಿಲ್ಲಿಂಗ್ ವೀರಪ್ಪನ್ ಚಿತ್ರ ರಿಲೀಸ್ ಆಗುತ್ತಿದ್ದು, ಇದರ ಹಿಂದೆಯೇ ಶಿವಲಿಂಗ ಕೂಡ ಬರುತ್ತಿದೆ.
ಇದಾದ ನಂತರ ಸಂತೆಯಲ್ಲಿ ನಿಂತ ಕಬೀರ, ಶ್ರೀಕಂಠ, ಬಾದ್ ಷಾ, ಇಷ್ಟೆಲ್ಲ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣನ ವಯಸ್ಸು 50 ಆದರೂ ಮಾಸದ ಚೆಲುವು ಅದ್ಭುತ ನಟನೆಯಿಂದ ಎಲ್ಲರಿಗೂ ಇಷ್ಟವಾಗಿರುವ ಶಿವಣ್ಣ ಈ ಮೂಲಕ ತಂದೆಗೆ ತಕ್ಕ ಮಗನಾಗುತ್ತಿದ್ದಾರೆ. ಶಿವಣ್ಣನ ಚಿತ್ರಗಳ ಸ್ಪೀಡ್ ನೋಡಿದರೆ ಆದಷ್ಟು ಬೇಗ ಡಬಲ್ ಸೆಂಚುರಿ ಹೊಡೆಯುವುದರಲ್ಲಿ ಸಂಶಯವೇ ಇಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.