Breaking News
recent

ಬಾಹುಬಲಿ ಭಾಗ-3 ರಲ್ಲಿ ಪ್ರಭಾಸ್ ಪಾತ್ರ ಇರಲ್ವಂತೆ!

ಪ್ರಭಾಸ್ ನಟನೆಯ ಬಾಹುಬಲಿ ಚಿತ್ರ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದು ದಾಖಲೆ ನಿರ್ಮಿಸಿದೆ. ಚಿತ್ರದ ಯಶಸ್ಸಿನಿಂದ ಪ್ರೇರಿತವಾದ ಚಿತ್ರತಂಡ ಈಗಾಗಲೇ ಬಾಹುಬಲಿ ಭಾಗ-2 ರ ಚಿತ್ರೀಕರಣದಲ್ಲಿ ತೊಡಗಿದ್ದು ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.
ಬಾಹುಬಲಿ ಭಾಗ-3 ರಲ್ಲಿ ಪ್ರಭಾಸ್ ಪಾತ್ರ ಇರಲ್ವಂತೆ!

ಆದರೆ ಈಗ ಹೊಸ ಸುದ್ದಿ ಏನೆಂದರೆ ಬಾಹುಬಲಿ ಚಿತ್ರದ ಮೊದಲ ಎರಡು ಭಾಗಗಳಿಗೆ ಕಥೆ ಬರೆದಿದ್ದ ರಾಜಮೌಳಿ ಅವರ ತಂದೆ ಲೇಖಕ ವಿಜಯೇಂದ್ರ ಪ್ರಸಾದ್ ಬಾಹುಬಲಿ ಭಾಗ-3 ರ ಕಥೆಯನ್ನು ಬರೆಯಲು ಈಗಾಗಲೇ ಶುರುಮಾಡಿದ್ದು ಈ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಭಾಗ-3 ರ ಚಿತ್ರಕಥೆ ಮೊದಲೆರಡು ಭಾಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ, ಅಲ್ಲದೆ ಈ ಚಿತ್ರದಲ್ಲಿ ಸತ್ಯರಾಜ್ ಅವರ ಪಾತ್ರವಾದ ಕಟ್ಟಪ್ಪ ಪಾತ್ರ ಕೂಡ ಇರುವುದಿಲ್ಲ ಎಂದು ಸ್ವತಃ ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.