Breaking News
recent

ಬಾಹುಬಲಿ 2 ರಿಲೀಸ್ ಡೇಟ್ ಫಿಕ್ಸ್!

ನಿರ್ದೇಶಕ ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಚಿತ್ರದ 2 ಭಾಗದ ರಿಲೀಸ್ ಡೇಟ್ ಬಹುತೇಖ ಫಿಕ್ಸ್ ಆಗಿದೆ. ಆದರೆ ಈ ಡೇಟ್‍ನಿಂದ ಬಾಲಿವುಡ್ ನಟ ಅಮೀರ್ ಖಾನ್ ಬೇಸರಗೊಂಡಿದ್ದಾರಂತೆ.
ಬಾಹುಬಲಿ 2 ರಿಲೀಸ್ ಡೇಟ್ ಫಿಕ್ಸ್!

ಹೌದು. ಮೂಲಗಳ ಪ್ರಕಾರ ಬಾಹುಬಲಿ 2 ಚಿತ್ರ ಈ ವರ್ಷದ ಡಿಸೆಂಬರ್‍ನಿಂದ ಚಿತ್ರೀಕರಣ ಆರಂಭಿಸಲಿದ್ದು ಮುಂದಿನ ವರ್ಷದ (2016) ಕ್ರಿಸ್‍ಮಸ್‍ಗೆ ಬಿಡುಗಡೆಗೊಳ್ಳುವುದಕ್ಕೆ ತಯಾರಿ ನಡೆಸಿದೆಯಂತೆ. ಇದೇ ಡೇಟ್‍ಗೆ ಎಂದರೆ ಮುಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅಮೀರ್ ಖಾನ್ ಅವರ ದಂಗಾಲ್ ಚಿತ್ರವೂ ಬಿಡುಗಡೆಗೆ ತಯಾರಿ ನಡೆಸಿದ್ದು ಇದರಿಂದ ಅಮೀರ್ ಖಾನ್ ಬೇಸರಗೊಂಡಿದ್ದಾರಂತೆ.
ಪ್ರಿ ಪ್ರೊಡಕ್ಷನ್ ತಡವಾಗಿದ್ದಕ್ಕೆ ಬಾಹುಬಲಿ 2 ಚಿತ್ರತಂಡ ಸೆಪ್ಟೆಂಬರ್‍ನಿಂದ, ನವೆಂಬರ್ ಇದೀಗ ಡಿಸೆಂಬರ್‍ಗೆ ಶೂಟಿಂಗ್ ಮುಂದೂಡಿದೆ. ಮೊದಲ ಭಾಗಕ್ಕಿಂತ, ಎರಡನೇ ಭಾಗವನ್ನು ಅದ್ಧೂರಿಯಾಗಿ ತೆರೆಮೇಲೆ ತರಲು ಯೋಜನೆ ರೂಪಿಸಿರುವ ಎಸ್‍ಎಸ್ ರಾಜಮೌಳಿ ಬಾಹುಬಲಿ ರಿಲೀಸ್ ಮಾಡಲು ಒಂದು ವರ್ಷ ಬೇಕಾಗಲಿದೆ. ಹೀಗಾಗಿ ಚಿತ್ರತಂಡ ಮುಂದಿನ ವರ್ಷದ ಕ್ರಿಸ್‍ಮಸ್‍ಗೆ ಚಿತ್ರ ರಿಲೀಸ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಇತ್ತ ದಂಗಾಲ್ ಚಿತ್ರೀಕರಣ ಆರಂಭವಾಗಿದೆಯಾದರೂ ಅಮೀರ್ ಭುಜಕ್ಕೆ ಗಾಯ ಮಾಡಿಕೊಂಡಿರುವುದರಿಂದ ದಂಗಾಲ್ ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಂಡಿದೆ. ಈ ಚಿತ್ರವೂ ಮುಂದಿನ ವರ್ಷದ ಡಿಸೆಂಬರ್ ಕೊನೆಯಲ್ಲಿ ತೆರೆಕಾಣುವುದರಿಂದ ಬಾಹುಬಲಿ ಚಿತ್ರದಿಂದ ತಮ್ಮ ಚಿತ್ರಕ್ಕೆ ನಷ್ಟವಾಗಲಿದೆ ಎನ್ನುವುದು ಅಮೀರ್ ಅಭಿಪ್ರಾಯವಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.